ETV Bharat / sports

ಡಿಆರ್​ಎಸ್ ವ್ಯವಸ್ಥೆ ಮರು ಪರಿಶೀಲಿಸುವಂತೆ ಐಸಿಸಿಗೆ ಸಚಿನ್ ಮನವಿ

ಡಿಆರ್​ಎಸ್ ವ್ಯವಸ್ಥೆಯನ್ನು ಐಸಿಸಿ ಕೂಲಂಕುಷವಾಗಿ ಪರಿಶೀಲಿಸಬೇಕಾಗಿದೆ ಎಂದು ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಹೇಳಿದ್ದಾರೆ.

Sachin Tendulkar
ಸಚಿನ್ ತೆಂಡೂಲ್ಕರ್
author img

By

Published : Dec 28, 2020, 12:36 PM IST

ನವದೆಹಲಿ: ಡಿಆರ್​ಎಸ್​ ವ್ಯವಸ್ಥೆಯಲ್ಲಿ 'ಅಂಪೈರ್ಸ್ ಕಾಲ್' ಷರತ್ತನ್ನು ಪ್ರಶ್ನಿಸಿರುವ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಈ ನಿರ್ಧಾರವನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಮರು ಮೌಲ್ಯಮಾಪನ ಮಾಡುವ ಅಗತ್ಯವಿದೆ ಎಂದಿದ್ದಾರೆ.

"ಆನ್-ಫೀಲ್ಡ್ ಅಂಪೈರ್ ತೆಗೆದುಕೊಂಡ ನಿರ್ಧಾರದ ಬಗ್ಗೆ ಅಸಮಾಧಾನ ಇರುವ ಕಾರಣ ಆಟಗಾರರು ಡಿಆರ್​ಎಸ್ ಮೊರೆ ಹೋಗುತ್ತಾರೆ. ಹೀಗಾಗಿ ಡಿಆರ್​ಎಸ್ ವ್ಯವಸ್ಥೆಯನ್ನು ಐಸಿಸಿ ಕೂಲಂಕುಷವಾಗಿ ಪರಿಶೀಲಿಸಬೇಕಾಗಿದೆ, ವಿಶೇಷವಾಗಿ 'ಅಂಪೈರ್ಸ್ ಕಾಲ್' ವಿಚಾರದಲ್ಲಿ ಇದರ ಅಗತ್ಯ ಹೆಚ್ಚಿದೆ" ಎಂದಿದ್ದಾರೆ.

  • The reason players opt for a review is because they’re unhappy with the decision taken by the on-field umpire.
    The DRS system needs to be thoroughly looked into by the @ICC, especially for the ‘Umpires Call’.#AUSvIND

    — Sachin Tendulkar (@sachin_rt) December 28, 2020 " class="align-text-top noRightClick twitterSection" data=" ">

ಕೆಲ ಸಂದರ್ಭದಲ್ಲಿ ಬಾಲ್-ಟ್ರ್ಯಾಕಿಂಗ್ ತಂತ್ರಜ್ಞಾನದಲ್ಲಿ 'ಅಂಪೈರ್ಸ್ ಕಾಲ್' ಷರತ್ತು ಕಾರ್ಯರೂಪಕ್ಕೆ ಬರುತ್ತದೆ. ಇಂಥ ಸಂದರ್ಭದಲ್ಲಿ ಅಂಪೈರ್‌ ನಿರ್ಧಾರಕ್ಕೆ ಬದ್ಧರಾಗಿರಬೇಕಾಗುತ್ತದೆ. ಆಸ್ಟ್ರೇಲಿಯಾ ಮತ್ತು ಭಾರತ ನಡುವಿನ ಎರಡನೇ ಟೆಸ್ಟ್ ಪಂದ್ಯದ ಮೂರನೇ ದಿನದ ಆಟದಲ್ಲಿ 'ಅಂಪೈರ್ಸ್ ಕಾಲ್' ಎರಡು ಬಾರಿ ಆಸೀಸ್ ಆಟಗಾರರ ರಕ್ಷಣೆ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಓದಿ ಭಾರತೀಯರ ದಾಳಿಗೆ ಬೆದರಿದ ಕಾಂಗರೂ ಪಡೆ : ಟೀಂ ಇಂಡಿಯಾ ಹಿಡಿತದಲ್ಲಿ ದ್ವಿತೀಯ ಟೆಸ್ಟ್

ಆಸ್ಟ್ರೇಲಿಯಾದ ಎರಡನೇ ಇನ್ನಿಂಗ್ಸ್‌ನ ಮೂರನೇ ಓವರ್‌ನಲ್ಲಿ ಜಸ್ಪ್ರಿತ್ ಬುಮ್ರಾ ಅವರ ಎಸೆತದಲ್ಲಿ ಎಲ್​ಬಿ ಡಬ್ಲ್ಯೂಗೆ ಮನವಿ ಮಾಡಿದ್ರು. ಅಂಪೈರ್ ಅದನ್ನು ನಾಟ್ಔಟ್ ನೀಡಿದ ನಂತರ, ಭಾರತ ಡಿಆರ್​ಎಸ್​ ಮೊರೆ ಹೋಯ್ತು. ಆದರೆ ಚೆಂಡು ಕಾಲಿಗೆ ಬಡಿಯುವ ಹಂತವನ್ನು ಪರಿಗಣಿಸಿದ ಅಂಪೈರ್ಸ್​​ ಕಾಲ್ ನಿಂದ ಬ್ಯಾಟ್ಸ್‌ಮನ್ ಬದುಕುಳಿದರು.

ಇದಾದ ನಂತರ, ಮಾರ್ನಸ್ ಲಾಬುಶೇನ್​ ಕೂಡ ಮೊಹಮ್ಮದ್ ಸಿರಾಜ್ ಎಸೆತದಲ್ಲಿ ಬಚಾವಾದರು. ಚೆಂಡು ವಿಕೆಟ್​ಗೆ ತಾಗಿದ್ದರೂ ಅಂಪೈರ್ಸ್​ ಕಾಲ್​ನಿಂದ ಲಾಬುಶೇನ್ ಜೀವದಾನ ಪಡೆದಿದ್ದರು. ಹೀಗಾಗಿ ಸಚಿನ್ ಅಂಪೈರ್ಸ್​ ಕಾಲ್ ವಿಚಾರದಲ್ಲಿ ವಿಮರ್ಶೆಯ ಅಗತ್ಯವಿದೆ ಎಂದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.