ಮುಂಬೈ: ವಿಶ್ವದಾದ್ಯಂತ ರಸ್ತೆ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ವಿವಿಧ ಕ್ರಿಕೆಟ್ ಆಡುವ ರಾಷ್ಟ್ರಗಳ ಆಟಗಾರರು ಸೇರಿ ನಡೆಸುತ್ತಿರುವ ರೋಡ್ ಸೇಫ್ಟಿ ಟಿ20 ಸರಣಿಗೆ ಭಾರತ ಲೆಜೆಂಡ್ ತಂಡದ ಆಟಗಾರರ ಪಟ್ಟಿ ಹೊರಬಿದ್ದಿದೆ.
ರಸ್ತೆ ಅಪಘಾತ ಸುರಕ್ಷತೆ ಬಗ್ಗೆ ಅರಿವು ಮೂಡಿಸಲು ವಿಶ್ವದ ಪ್ರಸಿದ್ಧ ಮಾಜಿ ಕ್ರಿಕೆಟಿರಾದ ರಿಕಿ ಪಾಂಟಿಂಗ್, ಬ್ರಿಯಾನ್ ಲಾರ, ಜಾಂಟಿ ರೋಡ್ಸ್ , ಬ್ರೆಟ್ ಲೀ, ತಿಲಕರತ್ನೆ ದಿಲ್ಶನ್ ಸೇರಿದಂತೆ ಶ್ರೀಲಂಕಾ, ಆಸ್ಟ್ರೇಲಿಯಾ, ವೆಸ್ಟ್ ಇಂಡೀಸ್, ದಕ್ಷಿಣ ಆಫ್ರಿಕಾ ಹಾಗೂ ಭಾರತ ತಂಡದ ಲೆಜೆಂಡರಿ ಕ್ರಿಕೆಟಿಗರು ಈ ಟೂರ್ನಿಯಲ್ಲಿ ಭಾಗವಹಿಸಲಿದ್ದಾರೆ.
-
The #RSWS schedule is out & we can't keep calm! Grab your tickets right now on @bookmyshow. Catch all the action live on @Colors_Cineplex. Which clash are you looking forward to the most? #YehJungHaiLegendary🏏 #UnacademyRoadSafetyWorldSeries #T20 #LegendsAreBack #RSWS #Cricket pic.twitter.com/O8tJ2CShXp
— Road Safety World Series (@RSWorldSeries) February 17, 2020 " class="align-text-top noRightClick twitterSection" data="
">The #RSWS schedule is out & we can't keep calm! Grab your tickets right now on @bookmyshow. Catch all the action live on @Colors_Cineplex. Which clash are you looking forward to the most? #YehJungHaiLegendary🏏 #UnacademyRoadSafetyWorldSeries #T20 #LegendsAreBack #RSWS #Cricket pic.twitter.com/O8tJ2CShXp
— Road Safety World Series (@RSWorldSeries) February 17, 2020The #RSWS schedule is out & we can't keep calm! Grab your tickets right now on @bookmyshow. Catch all the action live on @Colors_Cineplex. Which clash are you looking forward to the most? #YehJungHaiLegendary🏏 #UnacademyRoadSafetyWorldSeries #T20 #LegendsAreBack #RSWS #Cricket pic.twitter.com/O8tJ2CShXp
— Road Safety World Series (@RSWorldSeries) February 17, 2020
ಸಚಿನ್ ತೆಂಡೂಲ್ಕರ್ ನಾಯಕರಾಗಿರುವ ಭಾರತ ಲೆಜೆಂಡ್ ತಂಡದ 12 ಸದಸ್ಯರ ಪಟ್ಟಿ ಬಿಡುಗಡೆಯಾಗಿದ್ದು, ಸೆಹ್ವಾಗ್, ಯುವರಾಜ್ ಕೂಡ ಈ ಮಹತ್ವದ ಟೂರ್ನಿಯಲ್ಲಿ ಭಾಗವಹಿಸಿದ್ದಾರೆ.
ಒಟ್ಟು 5 ತಂಡಗಳು ಭಾಗವಹಿಸುವ ಈ ಸರಣಿಯಲ್ಲಿ 11 ಪಂದ್ಯಗಳು ನಡೆಯಲಿವೆ. ಎಲ್ಲಾ ಪಂದ್ಯಗಳು ಕಲರ್ಸ್ ಸಿನಿಫ್ಲೆಕ್ಸ್ ಚಾನೆಲ್ನಲ್ಲಿ ಪ್ರಸಾರವಾಗಲಿವೆ.
ಭಾರತ ಲೆಜೆಂಡ್ ತಂಡ:
ಸಚಿನ್ ತೆಂಡೂಲ್ಕರ್ (ನಾಯಕ), ವಿರೇಂದ್ರ ಸೆಹ್ವಾಗ್, ಯುವರಾಜ್ ಸಿಂಗ್, ಜಹೀರ್ ಖಾನ್, ಸಮೀರ್ ದೀಘೆ (ವಿಕೆಟ್ ಕೀಪರ್), ಇರ್ಫಾನ್ ಪಠಾಣ್, ಅಜಿತ್ ಅಗರ್ಕರ್, ಸಂಜಯ್ ಬಂಗಾರ್, ಮುನಾಫ್ ಪಟೇಲ್, ಮೊಹಮ್ಮದ್ ಕೈಫ್, ಪ್ರಗ್ಯಾನ್ ಓಜಾ, ಸಾಯಿರಾಜ್ ಬಹುತುಲೆ