ಕೊಚ್ಚಿ: ಭಾರತದ ವಿವಾದಿತ ಬೌಲರ್ ಎಸ್. ಶ್ರೀಶಾಂತ್ ಕ್ರಿಕೆಟ್ಗೆ ಮತ್ತೊಮ್ಮೆ ಕಮ್ಬ್ಯಾಕ್ ಮಾಡಲು ನೆಟ್ನಲ್ಲಿ ಬೆವರು ಹರಿಸುತ್ತಿದ್ದಾರೆ. ಇಲ್ಲಿನ ಒಳಾಂಗಣ ಕ್ರೀಡಾಂಗಣದಲ್ಲಿ ಬೌಲಿಂಗ್ ಪ್ರ್ಯಾಕ್ಟಿಸ್ ಮಾಡುತ್ತಿರುವ ಅವರಲ್ಲಿ ರಾಷ್ಟ್ರೀಯ ತಂಡ ಸೇರಿಕೊಳ್ಳುವ ಉತ್ಕಟ ಬಯಕೆ ಎದ್ದು ಕಾಣುತ್ತಿದೆ.
ಇಂಡಿಯನ್ ಪ್ರೀಮಿಯರ್ ಲೀಗ್ ಹಾಗೂ ವಿದೇಶಿ ಟೂರ್ನಿಗಳಲ್ಲಿ ಪಾಲ್ಗೊಳ್ಳುವ ಉದ್ದೇಶದಿಂದ ಶ್ರೀಶಾಂತ್ ನೆಟ್ನಲ್ಲಿ ಅಭ್ಯಾಸ ನಡೆಸುತ್ತಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಕೊಚ್ಚಿಯ ಒಳಾಂಗಣ ಕ್ರೀಡಾಂಗಣದಲ್ಲಿ ಬೌಲಿಂಗ್ ಮಾಡುತ್ತಿದ್ದ ಅವರು ಕೇರಳ ರಣಜಿ ತಂಡದ ಕ್ಯಾಪ್ಟನ್ ಸಚಿನ್ ಬೇಬಿ ಅವರನ್ನು ಕ್ಲೀನ್ ಬೋಲ್ಡ್ ಮಾಡಿ ಗಮನ ಸೆಳೆದರು.
-
Good to see @sreesanth36 back in practice, he cleans up current Kerala player, Sachin Baby. pic.twitter.com/HYfekHvGrZ
— Johns (@CricCrazyJohns) October 23, 2019 " class="align-text-top noRightClick twitterSection" data="
">Good to see @sreesanth36 back in practice, he cleans up current Kerala player, Sachin Baby. pic.twitter.com/HYfekHvGrZ
— Johns (@CricCrazyJohns) October 23, 2019Good to see @sreesanth36 back in practice, he cleans up current Kerala player, Sachin Baby. pic.twitter.com/HYfekHvGrZ
— Johns (@CricCrazyJohns) October 23, 2019
2013ರಲ್ಲಿ ನಡೆದ ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಆರೋಪದಲ್ಲಿ ಭಾಗಿಯಾಗಿದ್ದ ಕಾರಣ ಅವರ ಮೇಲೆ ಬಿಸಿಸಿಐ ಆಜೀವ ನಿಷೇಧ ಹೇರಿತ್ತು. ಆದರೆ ನಂತರದ ಬೆಳವಣಿಗೆಯಲ್ಲಿ ನಿಷೇಧವನ್ನು ಬಿಸಿಸಿಐ 7 ವರ್ಷಕ್ಕೆ ಕಡಿತಗೊಳಿಸಿತ್ತು. ಹೀಗಾಗಿ ಈಗಾಗಲೇ 6 ವರ್ಷ ಕ್ರಿಕೆಟ್ 'ಅಜ್ಞಾತವಾಸ'ದಲ್ಲಿ ಶ್ರೀಶಾಂತ್ ಕಳೆದಿದ್ದು ಮುಂದಿನ ವರ್ಷ ನಿಷೇಧ ಅವಧಿ ಕೊನೆಗೊಳ್ಳಲಿದೆ.
36 ವರ್ಷದ ಶ್ರೀಶಾಂತ್ ಅವರನ್ನು ಐಪಿಎಲ್ನಲ್ಲಿ ಫ್ರಾಂಚೈಸಿಗಳು ಖರೀದಿಸುವ ಸಾಧ್ಯತೆ ಕಡಿಮೆ ಇದೆ. ಆದರೆ ದೇಶೀಯ ಟೂರ್ನಿ ಹಾಗೂ ವಿದೇಶಗಳಲ್ಲಿ ನಡೆಯುವ ಕ್ರಿಕೆಟ್ನಲ್ಲಿ ಅವರು ಭಾಗಿಯಾಗಬಹುದು ಎಂದು ಕ್ರಿಕೆಟ್ ವಿಶ್ಲೇಷಕರು ಹೇಳುತ್ತಿದ್ದಾರೆ.