ಮುಂಬೈ: ಐಪಿಎಲ್ ಇತಿಹಾಸದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಎಂದೆಂದು ಅನುಭವಿಸದ ವೈಫಲ್ಯವನ್ನು ಈ ಬಾರಿ ಅನುಭವಿಸಿತ್ತು. ಮೊದಲ ಬಾರಿಗೆ ಲೀಗ್ನಲ್ಲೇ ಹೊರಬಿದ್ದಿತು. ಆದರೆ ಕೊನೆಯ ಮೂರು ಪಂದ್ಯಗಳನ್ನು ಗೆಲ್ಲುವ ಮೂಲಕ ಕೊನೆಯ ಸ್ಥಾನಿಯಾಗುವ ಅಪಮಾನದಿಂದ ಪಾರಾಗಿತ್ತು.
ಆದರೆ ಕೊನೆಯ ಮೂರು ಪಂದ್ಯಗಳನ್ನು ಗೆಲ್ಲಲು ಕಾರಣವಾಗಿದ್ದು, 22 ವರ್ಷದ ರುತುರಾಜ್ ಗಾಯಕ್ವಾಡ್. ಈ ಮೂರು ಪಂದ್ಯಗಳಲ್ಲೂ ಅರ್ಧಶತಕ ಸಿಡಿಸಿ ಚೆನ್ನೈಗೆ ಕೊನೆ ಸ್ಥಾನಿಯಾಗುವುದನ್ನು ತಪ್ಪಿಸಿದ್ದರು. ಸತತ 2 ಪಂದ್ಯಗಳಲ್ಲಿ ಡಕ್ಔಟ್ ಆಗಿದ್ದ ಈ ಯುವ ಆಟಗಾರ ದಿಢೀರ್ ಅಂತ ಅದ್ಭುತ ಪ್ರದರ್ಶನ ನೀಡಲು ಕಾರಣರಾಗಿದ್ದು ನಾಯಕ ಧೋನಿ ಎಂದು ಸ್ವತಃ ಗಾಯಕ್ವಾಡ್ ಸ್ಫೋರ್ಟ್ಸ್ಸ್ಟಾರ್ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
" ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಡಕ್ಔಟ್ ಆಗಿ ನನ್ನನ್ನು ದೂಷಣೆ ಮಾಡಿಕೊಳ್ಳುತ್ತಿದ್ದೆ. ಆ ಸಂದರ್ಭದಲ್ಲಿ ಧೋನಿ ಭಾಯ್ ನನ್ನ ಬಳಿ ಬಂದರು. ಮುಂದಿನ ಮೂರು ಪಂದ್ಯಗಳಲ್ಲೂ ನೀನು ಆಡಲಿದ್ದೀಯ. ನೀನು ರನ್ ಗಳಿಸಿದರೂ ಅಥವಾ ವೈಫಲ್ಯ ಅನುಭವಿಸಿದರೂ ತಂಡದಲ್ಲಿರುತ್ತೀಯ. ಉತ್ತಮವಾಗಿ ಆಡಲು ಪ್ರಯತ್ನಿಸು ಮತ್ತು ಎಲ್ಲಾ ಪಂದ್ಯಗಳನ್ನು ಆನಂದಿಸು" ಎಂದು ತಿಳಿಸಿದರು.
ಕ್ರಿಕೆಟ್ನಲ್ಲಿ ಅಪ್ ಅಂಡ್ ಡೌನ್ ಇರುತ್ತದೆ. ಇದರೆ ಬಗ್ಗೆ ಯೋಚಿಸಬೇಡ. ನಿನ್ನ ಆಟವನ್ನು ಆನಂದಿಸು ಎಂದು ಧೋನಿ ಭಾಯ್ ಹೇಳಿದರು. ಈ ಮಾತುಕತೆಯ ನಂತರ ನನ್ನ ಆಲೋಚನೆಗಳು ಬದಲಾದವು ಎಂದು ಗಾಯಕ್ವಾಡ್ ಹೇಳಿದ್ದಾರೆ.
ಮೊದಲ ಮೂರು ಪಂದ್ಯಗಳಲ್ಲಿ 0,0,5 ರನ್ಗಳಿಸಿದ್ದ ಅವರು ನಂತರ 3 ಪಂದ್ಯಗಳಲ್ಲಿ 65, 72 ಮತ್ತು 62 ರನ್ಗಳಿಸಿ ಮಿಂಚಿದರು. ಕೊಹ್ಲಿ, ವಿಲಿಯರ್ಸ್ ನಂತರ ಹ್ಯಾಟ್ರಿಕ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ 3ನೇ ಬ್ಯಾಟ್ಸ್ಮನ್ ಎಂಬ ದಾಖಲೆಗೂ ಪಾತ್ರರಾದರು.