ಹೈದರಾಬಾದ್: ಪಾಕಿಸ್ತಾನ ಪ್ರೀಮಿಯರ್ ಲೀಗ್ನ (ಪಿಎಸ್ಎಲ್) ಕರಾಚಿ ಕಿಂಗ್ಸ್ ಸೂಪರ್ಸ್ಟಾರ್ ತಂಡದ ಪರ ಬ್ಯಾಟ್ ಬೀಸಿರುವ ವೆಸ್ಟ್ ಇಂಡೀಸ್ ಆಟಗಾರ ಶೆರ್ಫಾನೆ ರುದರ್ಫೋರ್ಡ್ ಅವರು ಮುಂಬೈ ಇಂಡಿಯನ್ಸ್ ತಂಡದ ಅಭಿಮಾನಿಗಳ ಟ್ರೋಲ್ಗೆ ಗುರಿಯಾಗಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯ ರುದರ್ಫೋರ್ಡ್ ಅದೇ ತಂಡದ ಗ್ಲೌಸ್ (ಕೈಗವಸು) ಧರಿಸಿ ಪಿಎಸ್ಎಲ್ ಕ್ವಾಲಿಫೈಯರ್-1 ಮುಲ್ತಾನ್ ಸುಲ್ತಾನ್ ವಿರುದ್ಧದ ಪಂದ್ಯದ ಸಮಯದಲ್ಲಿ ಕಣಕ್ಕಿಳಿದಿದ್ದರು. ರುದರ್ಫೋರ್ಡ್ ಐಪಿಎಲ್ ಅನ್ನು ಮರೆತಿಲ್ಲ. ಬಹುಶಃ ಅವರಿನ್ನೂ ಐಪಿಎಲ್ ಗುಂಗಿನಲ್ಲೇ ಇದ್ದಾರೆ ಎಂದು ಸಿಕ್ಕಾಪಟ್ಟೆ ಟ್ರೋಲ್ ಮಾಡಿದ್ದಾರೆ.
-
Rutherford dons Mumbai Indians' gloves in PSL, fans troll Karachi Kings
— ANI Digital (@ani_digital) November 17, 2020 " class="align-text-top noRightClick twitterSection" data="
Read @ANI Story | https://t.co/viOcashSAM pic.twitter.com/SdBtuGIHwS
">Rutherford dons Mumbai Indians' gloves in PSL, fans troll Karachi Kings
— ANI Digital (@ani_digital) November 17, 2020
Read @ANI Story | https://t.co/viOcashSAM pic.twitter.com/SdBtuGIHwSRutherford dons Mumbai Indians' gloves in PSL, fans troll Karachi Kings
— ANI Digital (@ani_digital) November 17, 2020
Read @ANI Story | https://t.co/viOcashSAM pic.twitter.com/SdBtuGIHwS
ಕಾಶಿ ಎಂಬಾತ ಟ್ವೀಟ್ ಮಾಡಿದ್ದು, ಆಟಗಾರರಿಗೆ ಗ್ಲೌಸ್ ಕೊಡಿಸುವ ಯೋಗ್ಯತೆ ಇಲ್ಲ. ಇವರಿಗೆಲ್ಲಾ ಕಾಶ್ಮೀರ ಬೇಕಾ ಎಂದು ವ್ಯಂಗ್ಯವಾಡಿದ್ದಾನೆ. ಪ್ರಾಂತಿಕ್ ಚಕ್ರಭರ್ತಿ ಅವರು ಪೂರ್ ಪಾಕಿಸ್ತಾನ ಎಂದಿದ್ದಾರೆ. ಸ್ವಂತ ಪರಿಕರಗಳಿಲ್ಲದೆಯೇ ಪಾಕಿಸ್ತಾನ ಟೂರ್ನಿ ನಡೆಸುತ್ತಿದೆ. ಅವರೇನಿದ್ದರೂ ಚೀನಾ ಉತ್ಪಾದಿಸುವ ಗ್ಲೌಸ್ಗಳನ್ನೇ ಬಳಸುತ್ತಾರೆ ಎಂದು ಪ್ರತೀಕ್ ಸಕ್ಸೇನಾ ಟ್ವೀಟ್ ಮಾಡಿದ್ದಾರೆ. ಹೀಗೆ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಕರಾಚಿ ಕಿಂಗ್ಸ್ ತಂಡವನ್ನು ಟ್ರೋಲ್ ಮಾಡಿದ್ದಾರೆ.
-
Rutherford using @mipaltan Gloves in a match of @thePSLt20
— Prateek Saxena (@viratrun18) November 16, 2020 " class="align-text-top noRightClick twitterSection" data="
So they can't run a league with own equipments but claims to be bigger than @IPL.@KarachiKingsARY might be using Chinese Made Gloves, Which he doesn't trust.@sherfaneruther1 @Arzookazmi30#IPL2020 #AUSvIND #PSL2020 pic.twitter.com/tDRveeGvzh
">Rutherford using @mipaltan Gloves in a match of @thePSLt20
— Prateek Saxena (@viratrun18) November 16, 2020
So they can't run a league with own equipments but claims to be bigger than @IPL.@KarachiKingsARY might be using Chinese Made Gloves, Which he doesn't trust.@sherfaneruther1 @Arzookazmi30#IPL2020 #AUSvIND #PSL2020 pic.twitter.com/tDRveeGvzhRutherford using @mipaltan Gloves in a match of @thePSLt20
— Prateek Saxena (@viratrun18) November 16, 2020
So they can't run a league with own equipments but claims to be bigger than @IPL.@KarachiKingsARY might be using Chinese Made Gloves, Which he doesn't trust.@sherfaneruther1 @Arzookazmi30#IPL2020 #AUSvIND #PSL2020 pic.twitter.com/tDRveeGvzh
ಐಪಿಎಲ್‌ನ 13 ನೇ ಆವೃತ್ತಿಯಲ್ಲಿ ಎಡಗೈ ಬ್ಯಾಟ್ಸ್‌ಮನ್ ಮುಂಬೈ ಇಂಡಿಯನ್ಸ್‌ನ ಭಾಗವಾಗಿದ್ದರು. ಆದರೆ, ಈ ಬಾರಿ ರೋಹಿತ್ ಶರ್ಮಾ ನೇತೃತ್ವದಲ್ಲಿ ಆಡುವ ಅವಕಾಶ ಸಿಕ್ಕಿರಲಿಲ್ಲ. ಮತ್ತು ಈಗ ಕರಾಚಿ ಕಿಂಗ್ಸ್ ಪರ ಮೈದಾನಕ್ಕಿಳಿದಿದ್ದಾರೆ. ಕ್ವಾಲಿಫೈಯರ್-1 ಪಂದ್ಯದಲ್ಲಿ ರುದರ್ಫೋರ್ಡ್ ಕೇವಲ ಒಂದು ರನ್ ಗಳಿಸಿ ಔಟಾದರು.
ಕಳೆದ ವಾರ ವಿಂಡೀಸ್ ಬ್ಯಾಟ್ಸ್‌ಮನ್ ಮುಂಬೈ ಇಂಡಿಯನ್ಸ್ ಕಿಟ್‌ನೊಂದಿಗೆ ಪಾಕಿಸ್ತಾನಕ್ಕೆ ಬಂದಿಳಿದಿದ್ದರು. ಮಂಗಳವಾರ ಸಂಜೆ ನಡೆಯುವ ಫೈನಲ್‌ನಲ್ಲಿ ಕರಾಚಿ ಕಿಂಗ್ಸ್ ತಂಡವು ಲಾಹೋರ್ ಖಲಂಡಾರ್ಸ್ ತಂಡವನ್ನು ಎದುರಿಸಲಿದೆ. ಈ ಎರಡೂ ತಂಡಗಳು ಇದೇ ಮೊದಲ ಬಾರಿಗೆ ಪಿಎಸ್ಎಲ್ನಲ್ಲಿ ಫೈನಲ್ಗೇರಿವೆ.