ಶಾರ್ಜಾ: ಇಂಡಿಯನ್ ಪ್ರೀಮಿಯರ್ ಲೀಗ್ನ ಇಂದಿನ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗುತ್ತಿದ್ದು, ಟಾಸ್ ಗೆದ್ದ ಸ್ಮಿತ್ ಪಡೆ ಬೌಲಿಂಗ್ ಆಯ್ದುಕೊಂಡಿದೆ. ಶಾರ್ಜಾ ಕ್ರಿಕೆಟ್ ಮೈದಾನದಲ್ಲಿ ಪಂದ್ಯ ಆರಂಭಗೊಳ್ಳಲಿದೆ.
13ನೇ ಆವೃತ್ತಿ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಡೆಲ್ಲಿ ತಂಡ ಆಡಿರುವ 5 ಪಂದ್ಯಗಳ ಪೈಕಿ 4ರಲ್ಲಿ ಗೆದ್ದು ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದು, ರಾಜಸ್ಥಾನ ರಾಯಲ್ಸ್ ಆಡಿರುವ ಐದು ಪಂದ್ಯಗಳ ಪೈಕಿ ಎರಡರಲ್ಲಿ ಗೆದ್ದು 7ನೇ ಸ್ಥಾನದಲ್ಲಿದೆ.
-
Steve Smith wins the toss and @rajasthanroyals will bowl first against @DelhiCapitals at Sharjah.#Dream11IPL pic.twitter.com/rPgvKI2XbH
— IndianPremierLeague (@IPL) October 9, 2020 " class="align-text-top noRightClick twitterSection" data="
">Steve Smith wins the toss and @rajasthanroyals will bowl first against @DelhiCapitals at Sharjah.#Dream11IPL pic.twitter.com/rPgvKI2XbH
— IndianPremierLeague (@IPL) October 9, 2020Steve Smith wins the toss and @rajasthanroyals will bowl first against @DelhiCapitals at Sharjah.#Dream11IPL pic.twitter.com/rPgvKI2XbH
— IndianPremierLeague (@IPL) October 9, 2020
ಉಭಯ ತಂಡ ಇಂತಿವೆ
ಡೆಲ್ಲಿ ಕ್ಯಾಪಿಟಲ್ಸ್: ಪೃಥ್ವಿ ಶಾ, ಶಿಖರ್ ಧವನ್, ಶ್ರೇಯಸ್ ಅಯ್ಯರ್(ಕ್ಯಾಪ್ಟನ್), ರಿಷಭ್ ಪಂತ್(ವಿ.ಕೀ), ಮಾರ್ಕೂಸ್ ಸ್ಟೋನಿಸ್, ಶಿಮ್ರಾನ್ ಹೆಟ್ಮಾಯರ್, ಆರ್.ಅಶ್ವಿನ್, ಅಕ್ಸರ್ ಪಟೇಲ್, ಹರ್ಷಲ್ ಪಟೇಲ್, ರಬಾಡಾ, ನೂರ್ತಾಜ್
ರಾಜಸ್ಥಾನ ರಾಯಲ್ಸ್: ಯಶಸ್ವಿ ಜೈಸ್ವಾಲ್, ಜೋಸ್ ಬಟ್ಲರ್(ವಿ,ಕೀ), ಸ್ಮೀವ್ ಸ್ಮಿತ್(ಕ್ಯಾಪ್ಟನ್), ಸಂಜು ಸ್ಯಾಮ್ಸನ್, ಮನಿಪಾಲ್ ಲೂಮೂರ್, ರಾಹುಲ್ ಥೆವಾಟಿಯಾ, ಜೋಪ್ರಾ ಆರ್ಚರ್, ಆಂಡ್ರೂ ಟೈ, ಶ್ರೇಯಸ್ ಗೋಪಾಲ್, ಕಾರ್ತಿಕ್ ತ್ಯಾಗಿ, ವರುಣ್ ಆ್ಯರೂನ್
ಸತತ ಎರಡು ಗೆಲುವಿನ ಮೂಲಕ ಟೂರ್ನಿಯಲ್ಲಿ ಉತ್ತಮ ಆರಂಭ ಪಡೆದಿದ್ದ ಸ್ಟೀವ್ ಸ್ಮಿತ್ ನಾಯಕತ್ವದ ರಾಜಸ್ಥಾನ ರಾಯಲ್ಸ್ ತಂಡ ಕಳೆದ ಮೂರು ಪಂದ್ಯಗಳನ್ನು ಕೈಚೆಲ್ಲಿ ನಿರಾಸೆ ಅನುಭವಿಸಿದೆ. ಇತ್ತ ಶ್ರೇಯಸ್ ಐಯ್ಯರ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಆಡಿದ ಐದು ಪಂದ್ಯಗಳ ಪೈಕಿ ನಾಲ್ಕರಲ್ಲಿ ಜಯ ಗಳಿಸಿದ್ದು, ಬಲಿಷ್ಠ ತಂಡವಾಗಿ ಗುರುತಿಸಿಕೊಂಡಿದೆ.