ಲಂಡನ್: ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್ ಟೆಸ್ಟ್ ಕ್ರಿಕೆಟ್ನಲ್ಲಿ ಎಲ್ಲ ಇಂಗ್ಲೀಷ್ ಕ್ರಿಕೆಟಿಗರ ದಾಖಲೆಗಳನ್ನು ಮುರಿಯಲಿದ್ದಾರೆ ಎಂದು ಇಂಗ್ಲೆಂಡ್ ಮಾಜಿ ನಾಯಕ ನಾಸಿರ್ ಹುಸೇನ್ ತಿಳಿಸಿದ್ದಾರೆ.
ಸ್ಪಿನ್ ಬೌಲಿಂಗ್ ಎದುರಿಸುವಲ್ಲಿ ಇಂಗ್ಲೆಂಡ್ನ ಶ್ರೇಷ್ಠ ಬ್ಯಾಟ್ಸ್ಮನ್ ಆಗಿರುವ ರೂಟ್ ಭಾರತದ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಕ್ರಮವಾಗಿ 218 ಮತ್ತು 40 ರನ್ಗಳಿಸಿ ತಮ್ಮ ತಂಡ 227ರನ್ಗಳ ಬೃಹತ್ ಗೆಲುವು ದಾಖಲಿಸಲು ನೆರವಾಗಿದ್ದರು.
ಅವರಿಗೆ ಕೇವಲ 30 ವರ್ಷ ವಯಸ್ಸಿನವರಾಗಿದ್ದಾರೆ. ನೀವು ಇಂಗ್ಲೆಂಡ್ ಸಾರ್ವಕಾಲಿಕ ಬ್ಯಾಟ್ಸ್ಮನ್ಗಳ ಪಟ್ಟಿ ಮಾಡಿದರೆ, ಅವರು ಕುಕ್, ಗ್ರಹಾಂ ಗೂಚ್ ಮತ್ತು ಕೆವಿನ್ ಪೀಟರ್ಸನ್ ಅವರೊಂದಿಗೆ ನೀವು ರೂಟ್ರನ್ನು ಹೊಂದಿರಬೇಕು. ಅವರು ಇಂಗ್ಲೆಂಡ್ನ ಅತ್ಯುತ್ತಮ ಬ್ಯಾಟ್ಸ್ಮನ್ ಎಂದು ನಾನು ಯಾವುದೇ ವಾದವಿಲ್ಲದೇ ಹೇಳುತ್ತೇನೆ. ಅವರು ಸ್ಪಿನ್ ಬೌಲಿಂಗ್ಗೆ ಆಡುವ ರೀತಿ ಅದ್ಭುತವಾಗಿದೆ ಎಂದು ತಿಳಿಸಿದ್ದಾರೆ.
ರೂಟ್ ಇಂಗ್ಲೆಂಡ್ನ ಶ್ರೇಷ್ಠ ಆಟಗಾರರಲ್ಲಿ ಒಬ್ಬರು. ಅವರು ಖಂಡಿತ ಇಂಗ್ಲೆಂಡ್ ಪರ ಎಲ್ಲ ದಾಖಲೆಯನ್ನು ಮುರಿಯಲಿದ್ದಾರೆ. ಸರ್ ಅಲಿಸ್ಟರ್ ಕುಕ್ ಅವರ 161 ಟೆಸ್ಟ್ ದಾಖಲೆಗಳನ್ನು ದಾಟಿ ಹೋಗಬಹುದು ಮತ್ತು ಬಹುಶಃ ಗರಿಷ್ಠ ರನ್ ದಾಖಲೆಯನ್ನು ಅವರು ಹೊಂದಬಹುದು ಎಂದು ಹುಸೇನ್ ತಿಳಿಸಿದ್ದಾರೆ.
ಇನ್ನು ಚೆನ್ನೈನಲ್ಲಿ ಸಾಧಿಸಿದ ಗೆಲುವು ಇಂಗ್ಲೆಂಡ್ನ ಶ್ರೇಷ್ಠ ಗೆಲುವುಗಳಲ್ಲಿ ಒಂದಾಗಿದೆ. ಏಕೆಂದರೆ ಟೂರ್ನಿಗೂ ಮುನ್ನ ಇಂಗ್ಲೆಂಡ್ 4-0ಯಲ್ಲಿ ಸೋಲಬಹುದು ಎಂಬ ಮಾತನಾಡಿದ್ದರು. ಭಾರತ ಆಸ್ಟ್ರೇಲಿಯಾ ನೆಲದಲ್ಲಿ ಸರಣಿ ಗೆದ್ದಿತ್ತು, ಕೊಹ್ಲಿ ತಂಡಕ್ಕೆ ವಾಪಸ್ ಆಗಿದ್ದರಿಂದ ಇಂಗ್ಲೆಂಡ್ಗೆ ಯಾವುದೇ ಅವಕಾಶ ನೀಡುವುದಿಲ್ಲ ಎಂದು ನಿರೀಕ್ಷಿಸಲಾಗಿತ್ತು ಎಂದು ಹುಸೇನ್ ತಿಳಿಸಿದ್ದಾರೆ.
ಇದನ್ನು ಓದಿ:ಭಾರತದ ಪಿಚ್ಗಳೆಂದರೆ ರೂಟ್ಗೆ ಬಲು ಇಷ್ಟ: ರೆಕಾರ್ಡ್ ಹೇಗಿದೆ ಗೊತ್ತಾ?