ಮುಂಬೈ: 2019 ರ ವಿಶ್ವಕಪ್ನ ಗರಿಷ್ಠ ಸ್ಕೋರರ್ ಆಗಿರುವ ಭಾರತ ತಂಡದ ಆರಂಭಿಕ ಆಟಗಾರ ರೋಹಿತ್ ಶರ್ಮಾ ಫೈನಲ್ ಪಂದ್ಯಕ್ಕೂ ಮುನ್ನವೇ ಭಾರತಕ್ಕೆ ಮರಳಿದ್ದಾರೆ.
ಭಾರತ ತಂಡ ಸೆಮಿಫೈನಲ್ನಲ್ಲಿ ಕಿವೀಸ್ ವಿರುದ್ಧ 18 ರನ್ಗಳಿಂದ ಸೋಲು ಕಂಡು ವಿಶ್ವಕಪ್ ಅಭಿಯಾನದಿಂದ ಹೊರಬಿದ್ದಿತ್ತು. ಇಂಗ್ಲೆಂಡ್‌ನಿಂದ ಭಾರತಕ್ಕೆ ಮರಳಲು ವಿಮಾನದ ಟಿಕೆಟ್ ಸಿಗದ ಕಾರಣ, ಫೈನಲ್ ಪಂದ್ಯ ಮುಗಿದ ಮೇಲೆ ತಂಡದ ಸದಸ್ಯರು ಭಾರತಕ್ಕೆ ವಾಪಸ್ ಆಗಬಹುದೆಂದು ನಿರೀಕ್ಷಿಸಲಾಗಿತ್ತು. ಈ ನಡುವೆ ರೋಹಿತ್ ಶರ್ಮಾ ಹಾಗೂ ಪತ್ನಿ ಈಗಾಗಲೇ ಭಾರತಕ್ಕೆ ವಾಪಸ್ ಆಗಿದ್ದಾರೆ.
- View this post on Instagram
#rohitsharma takes the drivers seat as he heads back home #viralbhayani @viralbhayani
">
ತಂಡದ ಉಪನಾಯಕ ಶರ್ಮಾ ವಿಶ್ವಕಪ್ನಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶನ ತೋರಿದ್ದರು. 5 ಶತಕ ಸಹಿತ 648 ರನ್ಗಳಿಸಿ ಗರಿಷ್ಠ ಸ್ಕೋರರ್ ಎನಿಸಿಕೊಂಡಿದ್ದರು. ಆದರೆ ಸೆಮಿಫೈನಲ್ನಲ್ಲಿ ಕೇವಲ ಒಂದು ರನ್ಗೆ ವಿಕೆಟ್ ಒಪ್ಪಿಸಿ ಅವರು ನಿರಾಸೆ ಮೂಡಿಸಿದ್ರು. ಇದೀಗ ತಂಡದ ಇತರೆ ಆಟಗಾರರನ್ನು ಬಿಟ್ಟು ಏಕಾಂಗಿಯಾಗಿ ಕುಟುಂಬದ ಜೊತೆ ತವರಿಗೆ ಬಂದಿದ್ದಾರೆ.
ಭಾರತದ ತಂಡದ ಇತರೆ ಆಟಗಾರರು ಕೂಡ ಇಂದು ಲಂಡನ್ನಿಂದ ಮುಂಬೈಗೆ ಪ್ರಯಾಣ ಬೆಳೆಸಲಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.