ETV Bharat / sports

ಈ ನಾಲ್ವರಿಂದ ವಿಶ್ವಕಪ್​ನ ಉಳಿದ ಪಂದ್ಯಗಳಲ್ಲಿ ಬ್ರೇಕ್​ ಆಗಲಿವೆ ಹಲವರ ದಾಖಲೆಗಳು!

ವಿಶ್ವಕಪ್​ ಇತಿಹಾಸದಲ್ಲಿ ಇಷ್ಟು ವರ್ಷಗಳ ಕಾಲ ಭದ್ರವಾಗಿದ್ದ ಸಚಿನ್, ಪಾಂಟಿಂಗ್​, ಮೆಕ್​ಗ್ರಾತ್​, ಗಿಲ್​ಕ್ರಿಸ್ಟ್ ವಿಶ್ವ​ ದಾಖಲೆಗಳು 2019ರ ವಿಶ್ವಕಪ್​ನಲ್ಲಿ ಪತನವಾಗಲಿವೆ.

ದಾಖಲೆ
author img

By

Published : Jul 8, 2019, 8:27 PM IST

ಲಂಡನ್​: 2019ರ ವಿಶ್ವಕಪ್​ ಕೊನೆಗೊಳ್ಳಲು ಇನ್ನು ಒಂದು ವಾರವಷ್ಟೇ ಉಳಿದಿದ್ದು, ಕೇವಲ ಮೂರು ಪಂದ್ಯ ಉಳಿದಿದ್ದು, ಕ್ರಿಕೆಟ್​ ದಿಗ್ಗಜರಾದ ಸಚಿನ್​, ಆಸ್ಟ್ರೇಲಿಯಾದ ಪಾಂಟಿಂಗ್​, ಗಿಲ್​ಕ್ರಿಸ್ಟ್​ರ ವಿಶ್ವದಾಖಲೆಗಳು ಮುರಿದು ಬೀಳಲಿವೆ.

ರೋಹಿತ್​- ವಾರ್ನರ್​ರಿಂದ ಸಚಿನ್​ರ​​ 673 ರನ್​ ದಾಖಲೆ ಬ್ರೇಕ್​:

ವಿಶ್ವಕಪ್​ ಒಂದರಲ್ಲಿ ಅತಿ ಹೆಚ್ಚು ರನ್ ​ಗಳಿಸಿದ ದಾಖಲೆ ಭಾರತದ ಸಚಿನ್​ ತೆಂಡೂಲ್ಕರ್​ ಅವರ ಹೆಸರಿನಲ್ಲಿದೆ. 2003ರ ವಿಶ್ವಕಪ್​ನಲ್ಲಿ ಸಚಿನ್​ 673 ರನ್​​ ​ಗಳಿಸಿದ್ದರು. ಇದೀಗ ಭಾರತದವರೇ ಆದ ರೋಹಿತ್​ ಶರ್ಮಾರಿಂದ ಆ ದಾಖಲೆ ಮುರಿಯಲಿದೆ. ರೋಹಿತ್​ 647 ರನ್ ​ಗಳಿಸಿದ್ದಾರೆ. ಆಸೀಸ್​ ಬ್ಯಾಟ್ಸ್​ಮನ್​ ಡೇವಿಡ್​ ವಾರ್ನರ್ ಕೂಡ​ 638 ರನ್ ​ಗಳಿಸಿದ್ದು, ಇವರಿಂದಲೂ ಸಹ ಈ ಮಹಾನ್​ ದಾಖಲೆ ಬ್ರೇಕ್​ ಆಗುವ ಸಾಧ್ಯತೆಯಿದೆ.

ಒಂದೇ ವಿಶ್ವಕಪ್​ನಲ್ಲಿ ಗರಿಷ್ಠ ವಿಕೆಟ್​​ ವಿಶ್ವ ದಾಖಲೆ:

2007 ರ ವಿಶ್ವಕಪ್​ನಲ್ಲಿ ಆಸ್ಟ್ರೇಲಿಯಾದ ಮೆಕ್​ಗ್ರಾತ್​ 27 ವಿಕೆಟ್​ ಪಡೆದಿರುವುದು ಇಲ್ಲಿಯವರಗೆ ವಿಶ್ವ ದಾಖಲೆಯಾಗಿದೆ. ಈ ದಾಖಲೆ ಅವರ ದೇಶದವರೇ ಆದ ಮಿಚೆಲ್​ ಸ್ಟಾರ್ಕ್​ರಿಂದ ಬ್ರೇಕ್​ ಆಗಲಿದೆ. ಸ್ಟಾರ್ಕ್​ ಈಗಾಗಲೆ 9 ಪಂದ್ಯಗಳಿಂದ 26 ವಿಕೆಟ್​ ಪಡೆದಿದ್ದಾರೆ. ಇನ್ನ ಸೆಮಿಫೈನಲ್​ ಪಂದ್ಯದಲ್ಲಿ 2 ವಿಕೆಟ್​ ಪಡೆದರೆ ಈ ವಿಶ್ವದಾಖಲೆ ಸ್ಟಾರ್ಕ್​ ಪಾಲಾಗಲಿದೆ.

ರೋಹಿತ್​ಗೆ ಬೇಕು ಒಂದು ಶತಕ:

ಈಗಾಗಲೇ ವಿಶ್ವಕಪ್​ನಲ್ಲಿ ಭಾರತದ ಆರಂಭಿಕ ಬ್ಯಾಟ್ಸ್​ಮನ್​ ರೋಹಿತ್​ ಶರ್ಮಾ 5 ಶತಕ ಸಿಡಿಸಿ ಒಂದೇ ವಿಶ್ವಕಪ್​ನಲ್ಲಿ ಅಧಿಕ ಶತಕ ಸಿಡಿಸಿದ ವಿಶ್ವದಾಖಲೆ ತಮ್ಮದಾಗಿಸಿಕೊಂಡಿದ್ದಾರೆ. ಇನ್ನು ಒಟ್ಟಾರೆ 6 ಶತಕಗಳೊಂದಿಗೆ ವಿಶ್ವಕಪ್​ ಇತಿಹಾಸದಲ್ಲಿ ಅತಿ ಹೆಚ್ಚು ಸೆಂಚುರಿ ಸಿಡಿಸಿರುವ ದಾಖಲೆಯನ್ನು ಸಚಿನ್​ರೊಂದಿಗೆ ಹಂಚಿಕೊಂಡಿದ್ದಾರೆ. ಇನ್ನೊಂದು ಶತಕ ಗಳಿಸಿದರೆ ವಿಶ್ವಕಪ್​ ಇತಿಹಾಸದಲ್ಲಿ ಅತ್ಯಧಿಕ ಶತಕ ಸಿಡಿಸಿದ ದಾಖಲೆ ರೋಹಿತ್​ ಶರ್ಮಾ ಪಾಲಾಗಲಿದೆ.

ಒಂದೇ ವಿಶ್ವಕಪ್​ನಲ್ಲಿ ಅತ್ಯಧಿಕ ಕ್ಯಾಚ್​:

2003ರ ವಿಶ್ವಕಪ್​ನಲ್ಲಿ ಆಸ್ಟ್ರೇಲಿಯಾದ ನಾಯಕ ರಿಕಿ ಪಾಂಟಿಂಗ್​ 11 ಕ್ಯಾಚ್​ ಪಡೆದು ಒಂದೇ ಟೂರ್ನಮೆಂಟ್​ನಲ್ಲಿ ಅತ್ಯಧಿಕ ಕ್ಯಾಚ್​ ಪಡೆದ ದಾಖಲೆ ಹೊಂದಿದ್ದರು. ಇದೀಗ ಆ ದಾಖಲೆಯನ್ನು 11 ಕ್ಯಾಚ್​ ಪಡೆದು ಇಂಗ್ಲೆಂಡ್​ನ ಜೋ ರೂಟ್​ ಸರಿಗಟ್ಟಿದ್ದಾರೆ. ಸೆಮಿಫೈನಲ್​ ಅಥವಾ ಫೈನಲ್​(ಒಂದು ವೇಳೆ ಫೈನಲ್​ಗೋದರೆ)ನಲ್ಲಿ ಒಂದು ಕ್ಯಾಚ್​ ಪಡೆದರೆ ಒಂದೇ ಟೂರ್ನಿಯಲ್ಲಿ ಅತಿ ಹೆಚ್ಚು ಕ್ಯಾಚ್​ ಪಡೆದ ವಿಶ್ವದಾಖಲೆ ರೂಟ್​ ಪಾಲಾಗಲಿದೆ.

ವಿಕೆಟ್​ ಕೀಪಿಂಗ್​ನಲ್ಲಿ ಅತಿ ಹೆಚ್ಚು ವಿಕೆಟ್​​:

2003ರಲ್ಲಿ ಆಸ್ಟ್ರೇಲಿಯಾದ ಆ್ಯಡಂ ಗಿಲ್​ಕ್ರಿಸ್ಟ್​​ 21 ವಿಕೆಟ್​​ ಪಡೆಯುವ ಮೂಲಕ ಒಂದೇ ಟೂರ್ನಮೆಂಟ್​ನಲ್ಲಿ ಅತಿ ಹೆಚ್ಚು ವಿಕೆಟ್​​ ಪಡೆದ ವಿಕೆಟ್​ ಕೀಪರ್​ ಎನಿಸಿಕೊಂಡಿದ್ದಾರೆ. ಇದೀಗ ಆಸ್ಟ್ರೇಲಿಯದವರೇ ಅದ ಅಲೆಕ್ಸ್​ ಕ್ಯಾರಿ 19 ವಿಕೆಟ್​​​ ಪಡೆದಿದ್ದು, ಸೆಮಿಫೈನಲ್​ ಮತ್ತು ಫೈನಲ್​ ಪಂದ್ಯದಲ್ಲಿ 3 ಬ್ಯಾಟ್ಸ್​ಮನ್​ಗಳನ್ನು ಔಟ್​ ಮಾಡಿದರೆ ಗಿಲ್​ಕ್ರಿಸ್ಟ್​ ದಾಖಲೆ ಅಳಿಸಿಹಾಕಲಿದ್ದಾರೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.