ETV Bharat / sports

ರೋಹಿತ್​​-ಕೆಎಲ್​ ಹೊಸ ದಾಖಲೆ... ವಿಶ್ವಕಪ್​​ನಲ್ಲಿ ಅತಿ ಹೆಚ್ಚು ರನ್​ ಸಿಡಿಸಿದ ರೆಕಾರ್ಡ್​ 'ರೋಹಿಟ್'​ ಪಾಲು!

ಇಂಗ್ಲೆಂಡ್​​ನಲ್ಲಿ ನಡೆಯುತ್ತಿರುವ ಐಸಿಸಿ ಏಕದಿನ ವಿಶ್ವಕಪ್​​ನಲ್ಲಿ ಟೀಂ ಇಂಡಿಯಾ ಆರಂಭಿ ಜೋಡಿ ಹೊಸದೊಂದು ದಾಖಲೆ ಬರೆದಿದೆ.

ರೋಹಿತ್​ ಶರ್ಮಾ
author img

By

Published : Jul 2, 2019, 5:40 PM IST

ಬರ್ಮಿಂಗ್​ಹ್ಯಾಮ್​​: ವಿಶ್ವಕಪ್​​ನಲ್ಲಿ ಟೀಂ ಇಂಡಿಯಾ ಉಪನಾಯಕ ರೋಹಿತ್​ ಶರ್ಮಾ ದಾಖಲೆ ಮೇಲೆ ದಾಖಲೆ ನಿರ್ಮಾಣ ಮಾಡುತ್ತಿದ್ದು, ಇಂದು ಬಾಂಗ್ಲಾ ವಿರುದ್ಧ ನಡೆದ ಪಂದ್ಯದಲ್ಲೂ ಆರಂಭಿಕ ಕೆಎಲ್​ ರಾಹುಲ್ ಜೊತೆ ಸೇರಿ ಹೊಸದೊಂದು ರೆಕಾರ್ಡ್​ ನಿರ್ಮಿಸಿದ್ದಾರೆ.

ವಿಶ್ವಕಪ್​​ನಲ್ಲಿ ರೋಹಿತ್​ ಶರ್ಮಾ 4ಶತಕ ಸೇರಿದಂತೆ 8 ಪಂದ್ಯಗಳಿಂದ 544 ರನ್​ಗಳಿಕೆ ಮಾಡಿದ್ದು, ಟೂರ್ನಿಯಲ್ಲೇ ಓರ್ವ ಬ್ಯಾಟ್ಸ್​​ಮನ್​​ನಿಂದ ಮೂಡಿ ಬಂದಿರುವ ಅತಿ ಹೆಚ್ಚು (ಇಲ್ಲಿಯವರೆಗೆ) ರನ್​ ಇವಾಗಿವೆ. ಆಸ್ಟ್ರೇಲಿಯಾದ ಡೆವಿಡ್​ ವಾರ್ನರ್​​ 516ರನ್​ ಹಾಗೂ ಫಿಂಚ್​ 504ರನ್​ ಸಿಡಿಸಿದ್ದಾರೆ.

Rohit Sharma
ರೋಹಿತ್​​-ಕೆಎಲ್​ ಜೋಡಿ

ಇಂದಿನ ಪಂದ್ಯದಲ್ಲಿ ತಮಗೆ ಸಿಕ್ಕ ಜೀವದಾನದ ಅವಕಾಶ ಪಡೆದುಕೊಂಡ ರೋಹಿತ್​ ಶರ್ಮಾ ಶತಕ ಸಿಡಿಸಿದರು. ವಿಶ್ವಕಪ್​​ನಲ್ಲಿ ರೋಹಿತ್​ ಶರ್ಮಾರಿಂದ ಮೂಡಿಬಂದ 26ನೇ ಶತಕ ಇದಾಗಿದೆ. ವಿಶ್ವಕಪ್​​ನಲ್ಲಿ ಟೀಂ ಇಂಡಿಯಾ ಆರಂಭಿಕ ಜೋಡಿ ಕೆಎಲ್​-ರೋಹಿತ್ ಶರ್ಮಾ 176ರನ್​ಗಳ ಜೊತೆಯಾಟ ನೀಡಿದರು. ವಿಶ್ವಕಪ್​​ನಲ್ಲಿ ಭಾರತೀಯ ಆಟಗಾರರಿಂದ ಮೂಡಿ ಬಂದಿರುವ ಅತಿ ದೊಡ್ಡ ಜೊತೆಯಾಟ ಕೂಡ ಇದಾಗಿದೆ.

Rohit Sharma
ರೋಹಿತ್ ಶರ್ಮಾ

ಈ ಹಿಂದೆ 2015ರಲ್ಲಿ ರೋಹಿತ್​-ಧವನ್​ ಜೋಡಿ 174ರನ್​ಗಳ ಜೊತೆಯಾಟ ಆಡಿದ್ದರು. ಅದಕ್ಕೂ ಮೊದಲು 1996ರಲ್ಲಿ ಜಡೇಜಾ - ತೆಂಡೂಲ್ಕರ್​ ಜೋಡಿ 163ರನ್​ಗಳ ಜೊತೆಯಾಟ ಹಾಗೂ 2003ರಲ್ಲಿ ತೆಂಡೂಲ್ಕರ್​-ಸೆಹ್ವಾಗ್​ ಜೋಡಿ 153ರನ್​ಗಳ ಜೊತೆಯಾಟ ನೀಡಿದ್ದರು

ಧೋನಿ ಸಿಕ್ಸರ್​ ದಾಖಲೆ ಬ್ರೇಕ್​​
ಇಂದಿನ ಪಂದ್ಯದಲ್ಲಿ ಐದು ಸಿಕ್ಸರ್​ ಬಾರಿಸಿರುವ ರೋಹಿತ್​ ಶರ್ಮಾ ಧೋನಿ ದಾಖಲೆ ಬ್ರೇಕ್​ ಮಾಡಿದ್ದಾರೆ. ತಮ್ಮ 213ನೇ ಪಂದ್ಯದ 207ನೇ ಇನ್ನಿಂಗ್ಸ್‌ನಲ್ಲೇ ಈ ದಾಖಲೆ ಬರೆದಿರುವುದು ಗಮನಾರ್ಹ. ಧೋನಿ ಬಾರಿಸಿದ್ದ 228 ಸಿಕ್ಸರ್​ಗಳ ದಾಖಲೆ ಬ್ರೇಕ್​ ಮಾಡಿರುವ ರೋಹಿತ್​ ಸದ್ಯ 230 ಸಿಕ್ಸ್​ ಬಾರಿಸಿದ್ದಾರೆ

ಅತಿ ಹೆಚ್ಚು ಸಿಕ್ಸರ್​​

  • 351 ಶಾಹಿದ್ ಅಫ್ರಿದಿ
  • 326 ಕ್ರಿಸ್ ಗೇಲ್
  • 270 ಸನತ್ ಜಯಸೂರ್ಯ
  • 230 ರೋಹಿತ್ ಶರ್ಮಾ
  • 228 ಮಹೇಂದ್ರ ಸಿಂಗ್ ಧೋನಿ

Intro:Body:

ರೋಹಿತ್​​-ಕೆಎಲ್​ ಹೊಸ ದಾಖಲೆ... ವಿಶ್ವಕಪ್​​ನಲ್ಲಿ ಅತಿ ಹೆಚ್ಚು ರನ್​ ಸಿಡಿಸಿದ ರೆಕಾರ್ಡ್​ 'ರೋಹಿಟ್'​ ಪಾಲು! 

ಬರ್ಮಿಂಗ್​ಹ್ಯಾಮ್​​: ವಿಶ್ವಕಪ್​​ನಲ್ಲಿ ಟೀಂ ಇಂಡಿಯಾ ಉಪನಾಯಕ ರೋಹಿತ್​ ಶರ್ಮಾ ದಾಖಲೆ ಮೇಲೆ ದಾಖಲೆ ನಿರ್ಮಾಣ ಮಾಡುತ್ತಿದ್ದು, ಇಂದು ಬಾಂಗ್ಲಾ ವಿರುದ್ಧ ನಡೆದ ಪಂದ್ಯದಲ್ಲೂ ಆರಂಭಿಕ ಕೆಎಲ್​ ರಾಹುಲ್ ಜೊತೆ ಸೇರಿ ಹೊಸದೊಂದು ರೆಕಾರ್ಡ್​ ನಿರ್ಮಿಸಿದ್ದಾರೆ. 

ವಿಶ್ವಕಪ್​​ನಲ್ಲಿ ರೋಹಿತ್​ ಶರ್ಮಾ 4ಶತಕ ಸೇರಿದಂತೆ 8 ಪಂದ್ಯಗಳಿಂದ 544ರನ್​ಗಳಿಕೆ ಮಾಡಿದ್ದು, ಟೂರ್ನಿಯಲ್ಲೇ ಓರ್ವ ಬ್ಯಾಟ್ಸ್​​ಮನ್​​ನಿಂದ ಮೂಡಿ ಬಂದಿರುವ ಅತಿ ಹೆಚ್ಚು (ಇಲ್ಲಿಯವರೆಗೆ) ರನ್​ ಇವಾಗಿವೆ. ಆಸ್ಟ್ರೇಲಿಯಾದ ಡೇವಿಡ್​ ವಾರ್ನರ್​​ 516ರನ್​ ಹಾಗೂ ಫಿಂಚ್​ 504ರನ್​ ಸಿಡಿಸಿದ್ದಾರೆ. 

ಇಂದಿನ ಪಂದ್ಯದಲ್ಲಿ ತಮಗೆ ಸಿಕ್ಕ ಜೀವದಾನದ ಅವಕಾಶ ಪಡೆದುಕೊಂಡ ರೋಹಿತ್​ ಶರ್ಮಾ ಶತಕ ಸಿಡಿಸಿದರು. ವಿಶ್ವಕಪ್​​ನಲ್ಲಿ ರೋಹಿತ್​ ಶರ್ಮಾರಿಂದ ಮೂಡಿಬಂದ 26ನೇ ಶತಕ ಇದಾಗಿದೆ. ವಿಶ್ವಕಪ್​​ನಲ್ಲಿ ಟೀಂ ಇಂಡಿಯಾ ಆರಂಭಿಕ ಜೋಡಿ ಕೆಎಲ್​-ರೋಹಿತ್ ಶರ್ಮಾ 176ರನ್​ಗಳ ಜೊತೆಯಾಟ ನೀಡಿದರು. ವಿಶ್ವಕಪ್​​ನಲ್ಲಿ ಭಾರತೀಯ ಆಟಗಾರರಿಂದ ಮೂಡಿ ಬಂದಿರುವ ಅತಿ ದೊಡ್ಡ ಜೊತೆಯಾಟ ಕೂಡ ಇದಾಗಿದೆ. 

ಈ ಹಿಂದೆ 2015ರಲ್ಲಿ ರೋಹಿತ್​-ಧವನ್​ ಜೋಡಿ 174ರನ್​ಗಳ ಜೊತೆಯಾಟ ಆಡಿದ್ದರು. ಅದಕ್ಕೂ ಮೊದಲು 1996ರಲ್ಲಿ ಜಡೇಜಾ-ತೆಂಡೂಲ್ಕರ್​ ಜೋಡಿ 163ರನ್​ಗಳ ಜೊತೆಯಾಟ ಹಾಗೂ 2003ರಲ್ಲಿ ತೆಂಡೂಲ್ಕರ್​-ಸೆಹ್ವಾಗ್​ ಜೋಡಿ 153ರನ್​ಗಳ ಜೊತೆಯಾಟ ನೀಡಿದ್ದರು. 

ಧೋನಿ ಸಿಕ್ಸರ್​ ದಾಖಲೆ ಬ್ರೇಕ್​​

ಇಂದಿನ ಪಂದ್ಯದಲ್ಲಿ ಐದು ಸಿಕ್ಸರ್​ ಬಾರಿಸಿರುವ ರೋಹಿತ್​ ಶರ್ಮಾ ಧೋನಿ ದಾಖಲೆ ಬ್ರೇಕ್​ ಮಾಡಿದ್ದಾರೆ. ತಮ್ಮ 213ನೇ ಪಂದ್ಯದ 207ನೇ ಇನ್ನಿಂಗ್ಸ್‌ನಲ್ಲೇ ಈ ದಾಖಲೆ ಬರೆದಿರುವುದು ಗಮನಾರ್ಹ. ಧೋನಿ ಬಾರಿಸಿದ್ದ 228 ಸಿಕ್ಸರ್​ಗಳ ದಾಖಲೆ ಬ್ರೇಕ್​ ಮಾಡಿರುವ ರೋಹಿತ್​ ಸದ್ಯ 230 ಸಿಕ್ಸ್​ ಬಾರಿಸಿದ್ದಾರೆ.

ಅತಿ ಹೆಚ್ಚು ಸಿಕ್ಸರ್​​

351 ಶಾಹೀದ್ ಆಫ್ರಿದಿ 

326 ಕ್ರಿಸ್ ಗೇಲ್ 

270 ಸನತ್ ಜಯಸೂರ್ಯ 

230 ರೋಹಿತ್ ಶರ್ಮಾ 

228 ಮಹೇಂದ್ರ ಸಿಂಗ್ ಧೋನಿ 

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.