ಮುಂಬೈ: ನೂತನ ಐಸಿಸಿ ಟೆಸ್ಟ್ ರ‍್ಯಾಂಕಿಂಗ್ ಪ್ರಕಟವಾಗಿದ್ದು, ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ನಲ್ಲಿ ಅಬ್ಬರಿಸಿದ್ದ ಮಯಾಂಕ್ ಹಾಗೂ ರೋಹಿತ್ ರ್ಯಾಂಕಿಂಗ್ನಲ್ಲಿ ಭಾರಿ ಏರಿಕೆ ಕಂಡಿದ್ದಾರೆ.
ಆರಂಭಿಕನಾಗಿ ಕಣಕ್ಕಿಳಿದ ಪಂದ್ಯದಲ್ಲೇ ಎರಡೂ ಇನ್ನಿಂಗ್ಸ್ನಲ್ಲೂ ಶತಕ ಸಿಡಿಸಿದ್ದ ರೋಹಿತ್ ಶರ್ಮಾ (176+127) ರ್ಯಾಂಕಿಂಗ್ನಲ್ಲಿ 36 ಸ್ಥಾನ ಜಿಗಿತ ಕಂಡು 17ನೇ ಸ್ಥಾನಕ್ಕೇರಿದ್ದಾರೆ. ದ್ವಿಶತಕ ಸಿಡಿಸಿದ್ದ ಮತ್ತೊಬ್ಬ ಆರಂಭಿಕ ಬ್ಯಾಟ್ಸ್ಮನ್ ಕನ್ನಡಿಗ ಮಯಾಂಕ್ ಅಗರ್ವಾಲ್ (215) 38 ಸ್ಥಾನ ಜಿಗಿತ ಕಂಡು 25ನೇ ಸ್ಥಾನಕ್ಕೇರಿದ್ದಾರೆ.
ಆದರೆ ಎರಡೂ ಇನ್ನಿಂಗ್ಸ್ನಲ್ಲಿ 20, 31 ರನ್ ಗಳಿಸಿದ್ದ ಕೊಹ್ಲಿ 900 ಅಂಕಗಳಿಂದ ಕೆಳಗಿಳಿದಿದ್ದಾರೆ. ಆದರೆ ಎರಡನೇ ಸ್ಥಾನದಲ್ಲಿ ಮುಂದುವರೆದಿದ್ದಾರೆ. ಕೊಹ್ಲಿ ಇದೀಗ ಮೊದಲ ಸ್ಥಾನದಲ್ಲಿರುವ ಸ್ಟಿವ್ ಸ್ಮಿತ್ಗಿಂತ 38 ಅಂಕ ಹಿಂದಿದ್ದಾರೆ.
ಇನ್ನು ಬೌಲರ್ಗಳಲ್ಲಿ ಅಶ್ವಿನ್ 14ನೇ ಸ್ಥಾನದಿಂದ 10ನೇ ಸ್ಥಾನಕ್ಕೆ, ಶಮಿ 18ರಿಂದ 14ನೇ ಸ್ಥಾನಕ್ಕೆ ಜಿಗಿತ ಕಂಡಿದ್ದಾರೆ. ಜಡೇಜಾ ಆಲ್ರೌಂಡರ್ ವಿಭಾಗದಲ್ಲಿ ಶಕಿಬ್ ಅಲ್ ಹಸನ್ ಹಿಂದಿಕ್ಕಿ 2ನೇ ಸ್ಥಾನಕ್ಕೇರಿದ್ದಾರೆ.