ಬೆಂಗಳೂರು: ಕರ್ನಾಟಕದ ರಾಬಿನ್ ಉತ್ತಪ್ಪ ಆರು ವರ್ಷಗಳ ನಂತರ ಕೆಕೆಆರ್ ಫ್ರಾಂಚೈಸಿಯಿಂದ ಹೊರಬಿದ್ದಿದ್ದು, ಇದೀಗ 2020ರಿಂದ ರಾಜಸ್ಥಾನ್ ರಾಯಲ್ಸ್ ಪರ ಕ್ರಿಕೆಟ್ ಮೈದಾನಕ್ಕಿಳಿಯುತ್ತಿದ್ದಾರೆ.
ಬೆಂಗಳೂರಿನ ದ್ರಾವಿಡ್ ಪಡುಕೋಣೆ ಕ್ರೀಡಾ ಅಕಾಡೆಮಿಯಲ್ಲಿ ಶ್ರೇಯಸ್ ಗೋಪಾಲ್ ಜೊತೆ ಅಭ್ಯಾಸ ಶುರುಮಾಡಿರುವ ಉತ್ತಪ್ಪ, ಮತ್ತೆ ನೆಟ್ಸ್‌ನಲ್ಲಿ ಕಸರತ್ತು ಶುರು ಮಾಡಿರುವುದಕ್ಕೆ ಖುಷಿ ವ್ಯಕ್ತಪಡಿಸಿದ್ದಾರೆ.
- View this post on Instagram
We back in the nets baby!! 💪🏾💪🏾 Ain’t no better feeling in the world!! #allin #sixcricketcommunity
">
2008 ರಲ್ಲಿ ಮುಂಬೈ ಇಂಡಿಯನ್ಸ್ ಪರ ಆಡಿದ್ದ ಉತ್ತಪ್ಪ ನಂತರ ಎರಡು ಆವೃತ್ತಿಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಕಣಕ್ಕಿಳಿದಿದ್ದರು. 2011ರಿಂದ 13ರವರೆಗೆ ಪುಣೆ ವಾರಿಯರ್ಸ್ ಇಂಡಿಯಾ ಹಾಗೂ 2014ರಿಂದ 2019ರವರೆಗೆ ಕೋಲ್ಕತ್ತಾ ನೈಟ್ ರೈಡರ್ಸ್ನಲ್ಲಿದ್ದರು. ಕೆಕೆಆರ್ ಫ್ರಾಂಚೈಸಿ ಇವರನ್ನು ತಂಡದಿಂದ ಕೈಬಿಟ್ಟಿದ್ದು ಡಿಸೆಂಬರ್ನಲ್ಲಿ ನಡೆದ ಹರಾಜು ಪ್ರಕ್ರಿಯೆಯಲ್ಲಿ ರಾಜಸ್ಥಾನ್ ರಾಯಲ್ಸ್ 3 ಕೋಟಿ ರೂ ನೀಡಿ ಖರೀದಿಸಿತ್ತು.
ಉತ್ತಪ್ಪ IPL ಸಾಧನೆ:
ಒಟ್ಟಾರೆ 177 ಐಪಿಎಲ್ ಪಂದ್ಯಗಳನ್ನಾಡಿರುವ ಉತ್ತಪ್ಪ 24 ಅರ್ಧ ಶತಕಗಳ ಸಹಿತ 4411 ರನ್ಗಳಿಸಿದ್ದಾರೆ. 2014ರ ಆವೃತ್ತಿಯಲ್ಲಿ ಉತ್ತಪ್ಪ ಆರೆಂಜ್ ಕ್ಯಾಪ್ ಸಾಧನೆ ಮಾಡಿದ್ದರು.