ETV Bharat / sports

ಬತ್ತದ ಉತ್ಸಾಹ: ನಾಲ್ಕು ಬೌಂಡರಿ​, ಮೂರು ಸಿಕ್ಸರ್​​; ಇರ್ಫಾನ್​ ಪಠಾಣ್​ ಆರ್ಭಟ ನೋಡಿ!

ಶ್ರೀಲಂಕಾ ಲೆಜೆಂಡ್ಸ್​ಗಳ ಮೇಲೆ ಸವಾರಿ ನಡೆಸಿದ ಇಂಡಿಯನ್​ ಲೆಜೆಂಡ್ಸ್​​ ಭರ್ಜರಿ ಗೆಲುವು ದಾಖಲು ಮಾಡುವ ಮೂಲಕ ಅಂಕಪಟ್ಟಿಯಲ್ಲಿ ನಂಬರ್​​ 1 ಸ್ಥಾನಕ್ಕೆ ಲಗ್ಗೆ ಹಾಕಿದೆ.

Irfan Pathan
Irfan Pathan
author img

By

Published : Mar 11, 2020, 2:02 PM IST

ಮುಂಬೈ: ರೋಡ್​ ಸೇಫ್ಟಿ ವಿಶ್ವ ಸರಣಿ ಟೂರ್ನಿಯ ಶ್ರೀಲಂಕಾ ಲೆಜೆಂಡ್ಸ್​​ ವಿರುದ್ಧದ ಪಂದ್ಯದಲ್ಲಿ ಇಂಡಿಯನ್​ ಲೆಜೆಂಡ್ಸ್ ಭರ್ಜರಿ ಗೆಲುವು ದಾಖಲು ಮಾಡಿದ್ದು, ಈ ಪಂದ್ಯದಲ್ಲಿ ಆಲ್​ರೌಂಡರ್​​ ಇರ್ಫಾನ್​ ಪಠಾಣ್​​ ಅಬ್ಬರಿಸಿದ್ದಾರೆ.

Irfan Pathan
ಇರ್ಫಾನ್​ ಪಠಾಣ್​ ಅಬ್ಬರ

ಶ್ರೀಲಂಕಾ ನೀಡಿದ್ದ 139ರನ್​ಗಳ ಗುರಿ ಬೆನ್ನತ್ತಿದ್ದ ಇಂಡಿಯಾ ಲೆಜೆಂಡ್ಸ್​ ಆರಂಭದಲ್ಲೇ ಸಚಿನ್‌ ತೆಂಡೂಲ್ಕರ್‌ (0), ವೀರೇಂದ್ರ ಸೆಹ್ವಾಗ್‌ (3) ಮತ್ತು ಯುವರಾಜ್‌ ಸಿಂಗ್‌ (1) ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿಕೊಂಡಿತ್ತು. ಈ ವೇಳೆ ಮಧ್ಯಮ ಕ್ರಮಾಂಕದಲ್ಲಿ ಅಬ್ಬರಿಸಿದ ಆಲ್‌ರೌಂಡರ್‌ ಇರ್ಫಾನ್‌ ಪಠಾಣ್‌ (ಅಜೇಯ 57) ಅಬ್ಬರದಿಂದಾಗಿ 5 ವಿಕೆಟ್‌ ಗೆಲುವು ದಾಖಲಿಸಿತು.

ಡಿವೈ ಪಾಟಿಲ್‌ ಕ್ರಿಡಾಂಗಣದಲ್ಲಿ ನಡೆದ ಟಿ-20 ಕ್ರಿಕೆಟ್‌ ಸರಣಿಯ 3ನೇ ಲೀಗ್‌ ಪಂದ್ಯ ಇದಾಗಿತ್ತು. ಶ್ರೀಲಂಕಾ ಲೆಜೆಂಡ್ಸ್‌ ತಂಡ 20 ಓವರ್‌ಗಳಲ್ಲಿ 8 ವಿಕೆಟ್‌ ಕಳೆದುಕೊಂಡು 138 ರನ್‌ಗಳಿಕೆ ಮಾಡಿತ್ತು. ಭಾರತದ ಪರ ವೇಗದ ಬೌಲರ್‌ ಮುನಾಫ್‌ ಪಟೇಲ್‌ 4 ಓವರ್‌ಗಳಲ್ಲಿ 19 ರನ್‌ ನೀಡಿ ನಾಲ್ಕು ವಿಕೆಟ್‌ ಪಡೆದುಕೊಂಡರು.

ಭಾರತ ಕೂಡ ಚಮಿಂಡಾ ವಾಸ್‌ (5ಕ್ಕೆ 2 ವಿಕೆಟ್) ಅವರ ದಾಳಿಗೆ ಸಿಲುಕಿ 19 ರನ್​ಗಳಿಗೆ ಪ್ರಮುಖ ಮೂರು ವಿಕೆಟ್​ ಕಳೆದುಕೊಳ್ತು. ಇರ್ಫಾನ್‌ ಪಠಾಣ್​ 31ಎಸೆತಗಳಲ್ಲಿ 6 ಫೋರ್‌ 3 ಭರ್ಜರಿ ಸಿಕ್ಸರ್‌ಗಳ ನೆರವಿನಿಂದ ಅಜೇಯ 57 ರನ್​ಗಳಿಕೆ ಮಾಡಿದರು. ಹೀಗಾಗಿ 8ಎಸೆತ ಬಾಕಿ ಇರುವಾಗಲೇ ಗೆಲುವು ದಾಖಲಿಸಿಕೊಂಡರು. ಇನ್ನು ಟೀಂ ಇಂಡಿಯಾ ಮಾಜಿ ಬ್ಯಾಟಿಂಗ್‌ ಕೋಚ್‌ ಸಂಜಯ್‌ ಬಾಂಗರ್‌ 19 ಎಸೆತಗಳಲ್ಲಿ 2 ಬೌಂಡರಿ ಸೇರಿ 18 ರನ್​ಗಳಿಕೆ ಮಾಡಿದರು.

ಈ ಗೆಲುವಿನೊಂದಿಗೆ ಇಂಡಿಯನ್​ ಲೆಜೆಂಡ್​​ ಆಡಿದ ಎರಡು ಪಂದ್ಯಗಳಲ್ಲಿ ಗೆಲುವು ದಾಖಲು ಮಾಡಿದ್ದು, ಮುಂದಿನ ಪಂದ್ಯದಲ್ಲಿ ಜಾಂಟಿ ರೋಡ್ಸ್‌ ಸಾರಥ್ಯದ ದಕ್ಷಿಣ ಆಫ್ರಿಕಾ ಲೆಜೆಂಡ್ಸ್‌ ವಿರುದ್ಧ ಸೆಣಸಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.