ಗಯಾನ: ವಿಂಡೀಸ್ ವಿರುದ್ಧದ ಕೊನೆಯ ಟೆಸ್ಟ್ ಪಂದ್ಯದಲ್ಲಿ ಆಕರ್ಷಕ ಅರ್ಧಶತಕ ಸಿಡಿಸಿದ ರಿಷಭ್ ಪಂತ್ ಟಿ-20 ಕ್ರಿಕೆಟ್ನಲ್ಲಿ ಭಾರತದ ಪರ ಗರಿಷ್ಠ ರನ್ ಸಿಡಿಸಿದ ವಿಕೆಟ್ ಕೀಪರ್ ಎಂಬ ಖ್ಯಾತಿಗೆ ಪಾತ್ರರಾದರು.
ಭವಿಷ್ಯದ ಧೋನಿ ಉತ್ತರಾಧಿಕಾರಿ ಎಂದೇ ಬಿಂಬಿಸಲ್ಪಡುತ್ತಿರುವ ಯುವ ವಿಕೆಟ್ ಕೀಪರ್ ರಿಷಭ್ ಪಂತ್ ಟಿ-20 ಸರಣಿಯ ಮೊದಲೆರಡು ಪಂದ್ಯಗಳಲ್ಲಿ 0 ಹಾಗೂ 4 ರನ್ಗಳಿಗೆ ಔಟ್ ಆಗಿದ್ದರು. ಎರಡು ಪಂದ್ಯಗಳ ಕಳಪೆ ಪ್ರದರ್ಶನ ನೀಡಿದ ಮೇಲೆ ಪಂತ್ ವಿರುದ್ಧ ಟೀಕೆಗಳು ಬರಲಾರಂಭಿಸಿದ್ದವು. ಆದರೆ, ಮೂರನೇ ಪಂದ್ಯದಲ್ಲಿ 65 ರನ್ ಸಿಡಿಸುವ ಮೂಲಕ ಟೀಕೆಗಳಿಗೆ ಬ್ಯಾಟ್ನಿಂದಲೇ ಉತ್ತರಿಸಿದ್ದಾರೆ.
-
Rishabh Pant hit an unbeaten 65 as India cruised to a seven-wicket win over West Indies in Guyana. #WIvIND REPORT ⬇️ https://t.co/6tzzqC4n7H
— ICC (@ICC) August 6, 2019 " class="align-text-top noRightClick twitterSection" data="
">Rishabh Pant hit an unbeaten 65 as India cruised to a seven-wicket win over West Indies in Guyana. #WIvIND REPORT ⬇️ https://t.co/6tzzqC4n7H
— ICC (@ICC) August 6, 2019Rishabh Pant hit an unbeaten 65 as India cruised to a seven-wicket win over West Indies in Guyana. #WIvIND REPORT ⬇️ https://t.co/6tzzqC4n7H
— ICC (@ICC) August 6, 2019
ಪಂತ್ ಅರ್ಧಶತಕ ಸಿಡಿಸಿದ್ದಲ್ಲದೇ, 65 ರನ್ಗಳಿಸುವ ಮೂಲಕ ಭಾರತೀಯ ವಿಕೆಟ್ ಕೀಪರ್ಗಳಲ್ಲೇ ಹೆಚ್ಚು ರನ್ಗಳಿಸಿದ ವಿಕೆಟ್ ಕೀಪರ್ ಎಂದೆನಿಸಿದರು. ಪಂತ್ 65 ರನ್ಗಳಿಸುವ ಮೂಲಕ ಹಿರಿಯ ವಿಕೆಟ್ ಕೀಪರ್ ಧೋನಿಯ ದಾಖಲೆ ಬ್ರೇಕ್ ಮಾಡಿದರು. ಧೋನಿ 56 ರನ್ಗಳಿಸಿದ್ದೇ ಈ ಹಿಂದಿನ ದಾಖಲೆಯಾಗಿತ್ತು..
ಮಂಗಳವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ್ದ ವೆಸ್ಟ್ ಇಂಡೀಸ್ ತಂಡ 147 ರನ್ಗಳ ಟಾರ್ಗೆಟ್ ನೀಡಿತ್ತು. ಈ ಮೊತ್ತವನ್ನು ಬೆನ್ನತ್ತಿದ ಭಾರತ ತಂಡ ನಾಯಕ ಕೊಹ್ಲಿ (59) ಹಾಗೂ ಪಂತ್ (65) ಅರ್ಧಶತಕದ ನೆರವಿನಿಂದ ಇನ್ನೂ 5 ಎಸೆತಗಳು ಬಾಕಿ ಇರುವಂತೆ ಗುರಿ ತಲುಪಿತ್ತು.