ETV Bharat / sports

ಬಾಂಗ್ಲಾ ವಿರುದ್ಧದ ಟೆಸ್ಟ್​ ಪಂದ್ಯದಿಂದ ರಿಷಭ್​​ ಪಂತ್ ಔಟ್​... ಬಿಸಿಸಿಐ ಕೊಟ್ಟ ಕಾರಣ ಏನು?

ಮುಂಬರುವ ಅಂತಾರಾಷ್ಟ್ರೀಯ ಟೂರ್ನಿಗಳನ್ನ ಗಮನದಲ್ಲಿಟ್ಟುಕೊಂಡು ತನ್ನ ಸಾಮರ್ಥ್ಯ ಸಾಬೀತು ಪಡಿಸಲು ರಿಷಭ್ ಪಂತ್ ಅವರನ್ನ ಟೆಸ್ಟ್​ ತಂಡದಿಂದ ಕೈ ಬಿಟ್ಟು ದೇಸಿ ಟೂರ್ನಿಯಲ್ಲಿ ಆಡುವ ಅವಕಾಶ ನೀಡಲಾಗಿದೆ.

ರಿಷಬ್ ಪಂತ್
author img

By

Published : Nov 23, 2019, 12:22 PM IST

ಕೋಲ್ಕತ್ತಾ: ಟೀಂ ಇಂಡಿಯಾ ಯುವ ವಿಕೆಟ್ ಕೀಪರ್​ ರಿಷಭ್ ಪಂತ್​ ಅವರನ್ನ​ ಬಾಂಗ್ಲಾ ವಿರುದ್ಧದ ಟೆಸ್ಟ್​ ಪಂದ್ಯದಿಂದ ಕೈ ಬಿಡಲಾಗಿದೆ ಎಂದು ಬಿಸಿಸಿಐ ತಿಳಿಸಿದೆ.

ಕಳೆದ ಕೆಲ ತಿಂಗಳಿನಿಂದ ಭಾರತದಲ್ಲಿ ನಡೆದ ಎಲ್ಲಾ ಟೂರ್ನಿಯಲ್ಲೂ ರಿಷಭ್ ಪಂತ್ ಆಡುವ ಅವಕಾಶ ಪಡೆದುಕೊಂಡಿದ್ದಾರೆ. ಆದರೂ ಉತ್ತಮ ಪ್ರದರ್ಶನ ತೋರುವಲ್ಲಿ ಪಂತ್ ವಿಫಲರಾಗಿದ್ದು, ಹಲವರಿಂದ ಟೀಕೆಗೆ ಗುರಿಯಾಗಿದ್ದಾರೆ.

ಉತ್ತಮ ಪ್ರದರ್ಶನ ತೋರದಿದ್ದರೂ ಪಂತ್ ಅವರನ್ನ ಮತ್ತೆ ವೆಸ್ಟ್ ಇಂಡೀಸ್ ವಿರುದ್ಧದ ಟಿ-20 ಮತ್ತು ಏಕದಿನ ಸರಣಿಗೆ ಆಯ್ಕೆ ಮಾಡಿರೋದಕ್ಕೆ ಆಕ್ರೋಶ ವ್ಯಕ್ತವಾಗಿದೆ. ಹೀಗಾಗಿ ಪಂತ್​​ಗೆ ದೇಸಿ ಟೂರ್ನಿಯಲ್ಲಿ ಆಡುವ ಅವಕಾಶ ನೀಡುವ ಉದ್ದೇಶದಿಂದ ಬಾಂಗ್ಲಾ ವಿರುದ್ಧದ ಟೆಸ್ಟ್​ ಟೆಸ್ಟ್​ ಪಂದ್ಯದಿಂದ ಕೈ ಬಿಡಲಾಗಿದೆ ಎಂದು ಬಿಸಿಸಿಐ ತಿಳಿಸಿದೆ.

ಬಾಂಗ್ಲಾ ವಿರುದ್ಧದ ಟೆಸ್ಟ್​ ಸರಣಿಯಲ್ಲಿ ಪಂತ್​ಗೆ ಸ್ಥಾನ ನೀಡಿದ್ದರೂ ಆಡುವ 11ರ ಬಳಗದಲ್ಲಿ ಪಂತ್ ಬದಲು ವೃದ್ಧಿಮಾನ್ ಸಹಾಗೆ ಅವಕಾಶ ನೀಡಲಾಗಿದೆ. ಸದ್ಯ ನಡೆಯುತ್ತಿರುವ ಸೈಯದ್ ಮುಷ್ತಕ್ ಅಲಿ ಟ್ರೋಫಿ ಟೂರ್ನಿಯಲ್ಲಿ ದೆಹಲಿ ತಂಡದಿಂದ ಪಂತ್ ಕಣಕ್ಕಿಳಿಯಲಿದ್ದಾರೆ. ಮುಂಬರುವ ಅಂತಾರಾಷ್ಟ್ರೀಯ ಟೂರ್ನಿಯನ್ನ ಗುರಿಯಾಗಿಸಿಕೊಂಡು ಪಂತ್​ಗೆ​ ಈ ಅವಕಾಶ ನೀಡಲಾಗಿದೆ. ಪಂತ್​​ ಬದಲಾಗಿ ಆಂಧ್ರ ಪ್ರದೇಶದ ಕೆ.ಎಸ್.ಭರತ್​ ಅವರನ್ನ ಟೆಸ್ಟ್​ ತಂಡಕ್ಕೆ ಆಯ್ಕೆ ಮಾಡಲಾಗಿದೆ ಎಂದು ಬಿಸಿಸಿಐ ತಿಳಿಸಿದೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.