ETV Bharat / sports

ಪಂತ್ ಟೀಕಾಕಾರರನ್ನು ಶಾಶ್ವತವಾಗಿ ಮೌನವಾಗುವಂತೆ ಮಾಡಿದ್ದಾರೆ: ಕೋಚ್ ಸಿನ್ಹಾ - ಗಬ್ಬಾ ಟೆಸ್ಟ್​ನಲ್ಲಿ ಭಾರತಕ್ಕೆ ಜಯ

ಬ್ರಿಸ್ಬೇನ್​ ಟೆಸ್ಟ್​ನಲ್ಲಿ ದಾಖಲೆಯ ರನ್​ ಚೇಸಿಂಗ್ ಮಾಡುವ ವೇಳೆ ಆಸ್ಟ್ರೇಲಿಯಾದ ಭಯಾನಕ ವೇಗಿಗಳನ್ನು ಕೆಚ್ಚೆದೆಯಿಂದ ಎದುರಿಸಿ 138 ಎಸೆತಗಳಲ್ಲಿ 89 ರನ್​ ಗಳಿಸುವ ಮೂಲಕ ಭಾರತಕ್ಕೆ 3 ವಿಕೆಟ್​ಗಳ ಗೆಲುವಿನ ಜೊತೆಗೆ ಬಾರ್ಡರ್- ಗಾವಸ್ಕರ್ ಟ್ರೋಫಿ ಒಲಿಯುವಂತೆ ಮಾಡಿದವರು ಯುವ ಬ್ಯಾಟ್ಸ್‌ಮನ್ ರಿಷಭ್ ಪಂತ್.‌

ಭಾರತ vs ಆಸ್ಟ್ರೇಲಿಯಾ ಟೆಸ್ಟ್​ ಸರಣಿ
ಭಾರತ vs ಆಸ್ಟ್ರೇಲಿಯಾ ಟೆಸ್ಟ್​ ಸರಣಿ
author img

By

Published : Jan 19, 2021, 7:56 PM IST

ಕೋಲ್ಕತ್ತಾ: ಆಸ್ಟ್ರೇಲಿಯಾ ವಿರುದ್ಧ ಬ್ರಿಸ್ಬೇನ್​ನಲ್ಲಿ ರಿಷಭ್​ ಪಂತ್​ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿ ಭಾರತಕ್ಕೆ ಗೆಲುವು ತಂದುಕೊಡುವ ಮೂಲಕ ತಮ್ಮನ್ನು ಟೀಕಿಸುವವರ ಬಾಯಿಯನ್ನು ಶಾಶ್ವತವಾಗಿ ಮುಚ್ಚಿಸಿದ್ದಾರೆ ಎಂದು ರಿಷಭ್‌ ಪಂತ್ ಕೋಚ್​ ತಾರಕ್ ಸಿನ್ಹಾ ಹೇಳಿದ್ದಾರೆ.

ಆಟಗಾರನಿಗೆ ಅವಕಾಶ ನೀಡಿದ ಮೇಲೆ ಅವನ ಮೇಲೆ ಸಂಪೂರ್ಣ ನಂಬಿಕೆಯಿಡಬೇಕು ಎಂದು ತಮ್ಮ ಶಿಷ್ಯನ ಸಾಧನೆಗೆ ಅವರು ಸಂತಸ ವ್ಯಕ್ತಪಡಿಸಿದ್ದಾರೆ.

ರಿಷಭ್ ಪಂತ್​
ರಿಷಭ್ ಪಂತ್​ ಸಾರ್ಥಕ ಭಾವ

ಇನ್ನು ಅವರ ವಿಕೆಟ್ ಕೀಪಿಂಗ್ ಕೌಶಲ್ಯ ಕೂಡ ಆದಷ್ಟು ಬೇಗ ಸುಧಾರಿಸುತ್ತದೆ ಎಂದು ನಾನು ಖಚಿತಪಡಿಸುತ್ತೇನೆ. ಒಮ್ಮೆ ನಿಮಗೆ ತಂಡದಲ್ಲಿ ಸ್ಥಾನ ಖಚಿತ ಎಂಬ ಭರವಸೆ ಬಂದಾಗ ಮತ್ತು ನೀವು ಉತ್ತಮ ಆಟಗಾರ ಎಂದು ಪ್ರತಿಯೊಬ್ಬರೂ ಹೇಳಿದಾಗ, ಯಾವುದೇ ಆಟಗಾರನಲ್ಲಾದರೂ ಆತ್ಮವಿಶ್ವಾಸ ವೃದ್ಧಿಯಾಗುತ್ತದೆ ಎಂದು ಅವರು ಹೇಳಿದರು.

ಕಳಪೆ ಕೀಪಿಂಗ್ ಹಾಗೂ ಕಳಪೆ ಹೊಡೆತಕ್ಕೆ ಕೈ ಹಾಕಿ ವಿಕೆಟ್​ ಒಪ್ಪಿಸುತ್ತಿದ್ದರಿಂದ ಪಂತ್, ಆಸ್ಟ್ರೇಲಿಯಾ ವಿರುದ್ಧದ ಸೀಮಿತ ಓವರ್​ಗಳ ತಂಡದಲ್ಲಿ ಸ್ಥಾನ ಕಳೆದುಕೊಂಡಿದ್ದರು. ಆದರೆ ಮೊದಲ ಟೆಸ್ಟ್​ನಲ್ಲಿ ಹೀನಾಯವಾಗಿ ಸೋತ ಬಳಿಕ ತಂಡಕ್ಕೆ ಮರಳಿದ್ದರು.

ಈ ಪಂದ್ಯದ ಮೂಲಕ ತಾವೂ ಟಾಪ್ ಫ್ಲೈಟ್​ ಕ್ರಿಕೆಟರ್ ಎಂದು ಅವರು ಸಾಬೀತುಪಡಿಸಿದ್ದಾರೆ. ಇದರ ಸಂಪೂರ್ಣ ಶ್ರೇಯ ಆತನೊಬ್ಬನಿಗೆ ಸಲ್ಲಬೇಕು. ಸವಾಲು ಸ್ವೀಕರಿಸುವ ಅತ್ಯುನ್ನತ ಗುಣಮಟ್ಟ ಅವನಲ್ಲಿದೆ ಎಂದು ಸಿನ್ಹಾ ಗುಣಗಾನ ಮಾಡಿದ್ದಾರೆ.

ಇದನ್ನೂ ಓದಿ: ಪಂತ್​ ಅಸಾಧಾರಣ ಪ್ರತಿಭೆ, ವಿದೇಶಿ ಸರಣಿಯಲ್ಲಿ ಆತನಿಗೆ ನಮ್ಮ ಬೆಂಬಲ ಸದಾ ಇರುತ್ತೆ : ರವಿಶಾಸ್ತ್ರಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.