ಮುಂಬೈ: ಭಾರತದಲ್ಲಿ ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಈ ಕಾರಣದಿಂದ 13ನೇ ಆವೃತ್ತಿಯನ್ನು ಯುಎಇಯಲ್ಲಿ ನಡೆಸಲು ಬಿಸಿಸಿಐ ತೀರ್ಮಾನ ಮಾಡಿದೆ.
ಐಪಿಎಲ್ ಯುಎಇನಲ್ಲಿ ನಡೆದರೆ ಏನೆಲ್ಲ ಸವಾಲುಗಳನ್ನು ಕ್ರಿಕೆಟಿಗರು ಎದುರಿಸಲಿದ್ದಾರೆ ಎಂದು ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಮಾತನಾಡಿರುವ ಆಕಾಶ್ ಚೋಪ್ರಾ ದುಬೈನ ಬಿಸಿಲಿಗೆ ಕ್ರಿಕೆಟಿಗರು ಬಳಲಲಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಆರ್ಸಿಬಿಗೆ ಹೆಚ್ಚು ಲಾಭ
ಆರ್ಸಿಬಿ ಸೀಮಿತ ಬೌಲಿಂಗ್ ದಾಳಿಯನ್ನು ಹೊಂದಿದೆ. ಇದರಿಂದ ಇಲ್ಲಿನ ದೊಡ್ಡ ಕ್ರೀಡಾಂಗಣದಲ್ಲಿ ಬೌಲಿಂಗ್ ಶಕ್ತಿ ಪ್ರಬಲವಾಗಿರದಿದ್ದರೂ ಹೆಚ್ಚು ಪರಿಣಾಮಕಾರಿಯಾಗುವುದಿಲ್ಲ. ಇನ್ನು ಇಲ್ಲಿನ ಕ್ರೀಡಾಂಗಣದಲ್ಲಿ ಸ್ಪಿನ್ ಬೌಲಿಂಗ್ ಹೆಚ್ಚು ಪರಿಣಾಮಕಾರಿಯಾಗಲಿದೆ.
ಆರ್ಸಿಬಿಯಲ್ಲಿ ಯಜುವೇಂದ್ರ ಚಹಾಲ್, ಪವನ್ ನೇಗಿ, ಮೊಯಿನ್ ಅಲಿಯಂತಹ ಸ್ಪಿನ್ ಬೌಲರ್ಗಳು ಇರುವುದರಿಂದ ಆರ್ಸಿಬಿ ತನ್ನ ಸೀಮಿತ ಬೌಲಿಂಗ್ ದಾಳಿಯಿಂದಲೇ ಹೆಚ್ಚು ಲಾಭ ಪಡೆಯಲಿದೆ ಎಂದಿದ್ದಾರೆ.
ಕಿಂಗ್ಸ್ ಇಲೆವೆನ್ ಮತ್ತು ಡೆಲ್ಲಿ ಕ್ಯಾಪಿಟಲ್ಗೂ ಲಾಭ
2014ರಲ್ಲೂ ಐಪಿಎಲ್ ಯುಎನಲ್ಲಿ ನಡೆದಿತ್ತು. ಆ ಸಂದರ್ಭದಲ್ಲಿ ಮ್ಯಾಕ್ಸ್ವೆಲ್ ಅದ್ಭುತ ಪ್ರದರ್ಶನ ತೋರಿದ್ದರು. ಇದೀಗ ಉತ್ತಮ ಸ್ಪಿನ್ ಬೌಲಿಂಗ್ ಹಾಗೂ ಮ್ಯಾಕ್ಸ್ವೆಲ್ ತಂಡ ಸೇರಿಕೊಂಡಿರುವುದರಿಂದ ಯುಎಇನಲ್ಲಿ ಕಿಂಗ್ಸ್ಗೆ ಲಾಭವಾಗುವ ನಿರೀಕ್ಷೆಯಿದೆ. ಇನ್ನು ಡೆಲ್ಲಿ ಕ್ಯಾಪಿಟಲ್ನಲ್ಲಿ ಅಮಿತ್ ಮಿಶ್ರಾ, ಆರ್ ಅಶ್ವಿನ್, ಅಕ್ಷರ್ ಪಟೇಲ್ ಮತ್ತು ಸಂದೀಪ್ ಲಾಮಿಚ್ಛಾನೆ ಅಂತಹ ಸ್ಪಿನ್ ಬೌಲಿಂಗ್ ದಾಳಿ ಹೊಂದಿದ್ದು , ಬೌಲಿಂಗ್ ಮೂಲಕವೇ ಹೆಚ್ಚಿನ ಪಂದ್ಯಗಳನ್ನು ಗೆಲ್ಲುವ ತಾಕತ್ತು ದೊರೆಯುತ್ತದೆ ಎಂದು ಚೋಪ್ರಾ ತಿಳಿಸಿದ್ದಾರೆ.