ETV Bharat / sports

ಹೈದರಾಬಾದ್​ ಬೌಲಿಂಗ್​ ದಾಳಿಗೆ ಆರ್​ಸಿಬಿ ತತ್ತರ... ವಾರ್ನರ್​ ಪಡೆಗೆ 132ರನ್​ ಗೆಲುವಿನ ಟಾರ್ಗೆಟ್​

ಇಂಡಿಯನ್​ ಪ್ರೀಮಿಯರ್ ಲೀಗ್​ನಲ್ಲಿ ಹೈದರಾಬಾದ್​ ಬೌಲಿಂಗ್​ ದಾಳಿಗೆ ತತ್ತರಿಸಿರುವ ಬೆಂಗಳೂರು ತಂಡ ಕೇವಲ 131 ರನ್​ಗಳಿಕೆ ಮಾಡಿದೆ.

Hyderabad vs Bangalore
Hyderabad vs Bangalore
author img

By

Published : Nov 6, 2020, 9:11 PM IST

Updated : Nov 7, 2020, 4:25 PM IST

ಅಬುಧಾಬಿ: ಐಪಿಎಲ್​ನ ಎಲಿಮಿನೇಟರ್​ ಪಂದ್ಯದಲ್ಲಿ ವಿರಾಟ್​​-ವಾರ್ನರ್ ಪಡೆ ಮುಖಾಮುಖಿಯಾಗಿದ್ದು, ಟಾಸ್​ ಸೋತು ಮೊದಲು ಬ್ಯಾಟಿಂಗ್​ ನಡೆಸಿ ಆರ್​ಸಿಬಿ ಎದುರಾಳಿ ತಂಡಕ್ಕೆ 132 ರನ್​ಗಳ ಗೆಲುವಿನ ಟಾರ್ಗೆಟ್​ ನೀಡಿದೆ.

ದೇವದತ್​ ಪಡಿಕ್ಕಲ್​ ಜತೆ ಸೇರಿ ಇನ್ನಿಂಗ್ಸ್ ಆರಂಭಿಸಿದ ವಿರಾಟ್​ ಕೊಹ್ಲಿ ಕೇವಲ 6ರನ್​ಗಳಿಕೆ ಮಾಡಿ ವಿಕೆಟ್​ ಒಪ್ಪಿಸಿದರು. ಇದರ ಬೆನ್ನಲ್ಲೇ ದೇವದತ್ ಪಡಿಕ್ಕಲ್ ಕೂಡ ಕೇವಲ 1ರನ್​ಗಳಿಕೆ ಮಾಡಿ ಜೇಸನ್ ಹೋಲ್ಡರ್​ಗೆ ವಿಕೆಟ್​ ಒಪ್ಪಿಸಿದರು. ಹೀಗಾಗಿ ತಂಡ ಪವರ್​ ಪ್ಲೇ ಮುಕ್ತಾಯದ ವೇಳೆಗೆ (4 ಓವರ್​ಗಳಲ್ಲಿ) 2ವಿಕೆಟ್ ಕಳೆದುಕೊಂಡು ಕೇವಲ 32ರನ್​ಗಳಿಕೆ ಮಾಡಿತ್ತು.

ಇದಾದ ಬಳಿಕ ಒಂದಾದ ಫಿಂಚ್ ಹಾಗೂ ಡಿವಿಲಿಯರ್ಸ್​ ತಂಡಕ್ಕೆ ಚೇತರಿಕೆ ನೀಡುವ ಯತ್ನ ಮಾಡಿದರು. ಹೀಗಾಗಿ ತಂಡ 10 ಓವರ್​ಗಳಲ್ಲಿ 2ವಿಕೆಟ್​ ಕಳೆದುಕೊಂಡು 54ರನ್​ಗಳಿಕೆ ಮಾಡಿತು. ಆದರೆ 32ರನ್​ಗಳಿಕೆ ಮಾಡಿದ ಫಿಂಚ್​ ನದೀಂ ಓವರ್​ನಲ್ಲಿ ವಿಕೆಟ್​ ಒಪ್ಪಿಸಿದರು. ಇದರ ಬೆನ್ನಲ್ಲೇ ಮೊಯಿನ್ ಅಲಿ ರನೌಟ್​ ಬಲೆಗೆ ಬಿದ್ದರೆ, ಶಿವಂ ದುಬೆ 5ರನ್​ಗಳಿಕೆ ಮಾಡಿದ್ದ ವೇಳೆ ಕ್ಯಾಚ್​ ನೀಡಿ ನಿರ್ಗಮಿಸಿದರು.

ABD
ಅರ್ಧಶತಕಗಳಿಕೆ ಮಾಡಿದ ಎಬಿಡಿ

ಇದಾದ ಬಳಿಕ ಬಂದ ವಾಷಿಂಗ್ಟನ್​ ಸುಂದರ್​​(5)ರನ್​ಗಳಿಕೆ ಮಾಡಿ ಕ್ಯಾಚ್ ನೀಡಿದರು. 56ರನ್​ಗಳಿಕೆ ಮಾಡಿ ಆಡುತ್ತಿದ್ದ ಎಬಿಡಿ ನಟರಾಜನ್​ ಓವರ್​ನಲ್ಲಿ ವಿಕೆಟ್​ ಒಪ್ಪಿಸಿದರಿಂದ, ಆರ್​ಸಿಬಿ ಕೊನೆ ಓವರ್​ಗಳಲ್ಲಿ ಹೆಚ್ಚಿನ ರನ್​ಗಳಿಕೆ ಮಾಡುವ ಆಸೆ ಈಡೇರಲಿಲ್ಲ. ಕೊನೆಯದಾಗಿ ಸಿರಾಜ್​ ಅಜೇಯ 10ರನ್​ ಹಾಗೂ ಸೈನಿ​ 9ರನ್​ಗಳಿಕೆ ಮಾಡಿದ್ದರು. ತಂಡ 20 ಓವರ್​ಗಳಲ್ಲಿ 7ವಿಕೆಟ್​ ಕಳೆದುಕೊಂಡು 131ರನ್​ಗಳಿಕೆ ಮಾಡಿದ್ದು, ಹೈದರಾಬಾದ್​ ತಂಡಕ್ಕೆ 132ರನ್​ ಟಾರ್ಗೆಟ್​ ನೀಡಿದೆ.

ಹೈದರಾಬಾದ್​ ತಂಡದ ಪರ ಹೋಲ್ಡರ್​ 3 ವಿಕೆಟ್​​, ನಟರಾಜನ್​ 2 ಹಾಗೂ ನದೀಂ 1 ವಿಕೆಟ್​ ಪಡೆದುಕೊಂಡರು.

Last Updated : Nov 7, 2020, 4:25 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.