ETV Bharat / sports

ದುಬೈನಲ್ಲಿ ಆರ್​ಸಿಬಿ ಮೊದಲ ಮೀಟಿಂಗ್​​... ತಂಡದ ಸದಸ್ಯರಿಗೆ ಕೊಹ್ಲಿ ಹೇಳಿದ್ರು ಈ ಪಾಠ!

ಇಂಡಿಯನ್​ ಪ್ರೀಮಿಯರ್ ಲೀಗ್​​ನಲ್ಲಿ ಭಾಗಿಯಾಗಲು ಎಲ್ಲ ತಂಡಗಳು ಕಾತುರಗೊಂಡಿದ್ದು, ಈಗಾಗಲೇ ಎಲ್ಲ ಪ್ರಾಂಚೈಸಿಗಳು ತಮ್ಮ ಟೀಂನೊಂದಿಗೆ ದುಬೈ ತಲುಪಿವೆ.

RCB
RCB
author img

By

Published : Aug 24, 2020, 9:34 PM IST

ದುಬೈ: ಅರಬ್​ ದೇಶದಲ್ಲಿ ಪ್ರಸಕ್ತ ಸಾಲಿನ ಇಂಡಿಯನ್​ ಪ್ರೀಮಿಯರ್​ ಲೀಗ್​ ಟೂರ್ನಿ ಆರಂಭಗೊಳ್ಳಲು ದಿನಗಣನೇ ಆರಂಭಗೊಂಡಿದ್ದು, ಮುಂದಿನ ತಿಂಗಳು ಸೆಪ್ಟೆಂಬರ್​ 19ರಿಂದ ಈ ಮಹತ್ವದ ಟೂರ್ನಿ ಶುರುವಾಗಲಿದೆ.

ಈಗಾಗಲೇ ಎಲ್ಲ ತಂಡಗಳು ಅರಬ್​ ದೇಶದಲ್ಲಿ ಬಿಡುಬಿಟ್ಟಿದ್ದು, ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್​​-ಚೆನ್ನೈ ಸೂಪರ್​ ಕಿಂಗ್ಸ್​​ ಮಧ್ಯೆ ಸೆಣಸಾಟ ನಡೆಯಲಿದೆ. ರಾಯಲ್​ ಚಾಲೆಂಜರ್ಸ್​​ ಬೆಂಗಳೂರು ತಂಡ ಕೂಡ ಈಗಾಗಲೇ ದುಬೈನಲ್ಲಿದ್ದು, ಇಂದು ತಂಡದ ಇತರೆ ಆಟಗಾರರು, ಕ್ಯಾಪ್ಟನ್​ ಕೊಹ್ಲಿ ಹಾಗೂ ಕೋಚ್​​ ಮಹತ್ವದ ಮೀಟಿಂಗ್​ ನಡೆಸಿದರು. ಈ ವಿಡಿಯೋ ರಾಯಲ್​ ಚಾಲೆಂಜರ್ಸ್ ಬೆಂಗಳೂರು ತನ್ನ ಟ್ವೀಟರ್​​ನಲ್ಲಿ ಶೇರ್​ ಮಾಡಿದೆ.

13ನೇ ಆವೃತ್ತಿ ಇಂಡಿಯನ್​ ಪ್ರೀಮಿಯರ್​ಗೋಸ್ಕರ ಎಲ್ಲ ತಂಡಗಳು ವಿಶೇಷ ಯೋಜನೆ ರೂಪಿಸಿಕೊಂಡಿದ್ದು, ಪ್ರಶಸ್ತಿ ಗೆಲ್ಲುವ ಪ್ಲಾನ್​ ಹಾಕಿಕೊಳ್ಳುತ್ತಿವೆ. ಕಳೆದ ಯಾವುದೇ ಆವೃತ್ತಿಯಲ್ಲೂ ಚಾಂಪಿಯನ್​ ಆಗದ ಆರ್​ಸಿಬಿಗೆ ಈ ಸಲದ ಟೂರ್ನಿ ಮಹತ್ವದಾಗಿದೆ. ವಿಡಿಯೋ ಕಾನ್ಪರೆನ್ಸ್​ ಮೂಲಕವೇ ಮೀಟಿಂಗ್​ ನಡೆಸಲಾಗಿದ್ದು, ಈ ವೇಳೆ ಕೊರೊನಾ ಪ್ರೋಟೋ ಕಾಲ್​ ಸರಿಯಾಗಿ ಅನುಸರಣೆ ಮಾಡುವಂತೆ ತಿಳಿಸಿದ್ದಾರೆ. ಜತೆಗೆ ಕೊರೊನಾ ಹರಡದಂತೆ ತಡೆಯಲು ಹೊರಡಿಸಿರುವ ಯಾವುದೇ ಮಾರ್ಗಸೂಚಿ ಬ್ರೇಕ್​ ಮಾಡದಂತೆ ಮನವಿ ಮಾಡಿಕೊಂಡಿದ್ದಾರೆ.

ಎಲ್ಲರೂ ಅಭ್ಯಾಸ ಪಂದ್ಯದಲ್ಲಿ ಭಾಗಿಯಾಗಲು ಉತ್ಸುಕರಾಗಿದ್ದು, ತಂಡದಲ್ಲಿ ಉತ್ತಮ ವಾತಾವರಣ ನಿರ್ಮಾಣ ಮಾಡುವುದು ಅವಶ್ಯ ಎಂದಿದ್ದಾರೆ. ಸೆಪ್ಟೆಂಬರ್​ 19ರಿಂದ 13ನೇ ಆವೃತ್ತಿ ಇಂಡಿಯನ್​ ಪ್ರೀಮಿಯರ್​ ಲೀಗ್​ ಆರಂಭಗೊಳ್ಳಲಿದ್ದು, ನವೆಂಬರ್​ 10ರಂದು ಫೈನಲ್​ ಪಂದ್ಯ ನಡೆಯಲಿದೆ. ಒಟ್ಟು 53 ದಿನಗಳ ಕಾಲ ನಡೆಯುವ ಈ ಟೂರ್ನಿಯಲ್ಲಿ ಅನೇಕ ದಾಖಲೆ ನಿರ್ಮಾಣಗೊಳ್ಳುವುದು ಬಹುತೇಕ ಖಚಿತವಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.