ETV Bharat / sports

ಕೊಹ್ಲಿ ಆರ್​ಸಿಬಿ ನಾಯಕತ್ವದಿಂದ ಕೆಳಗಿಳಿಯಲಿ ಎಂದ ಗಂಭೀರ್​ಗೆ ಪುಟ್ಟ ಪೋರನ ತಿರುಗೇಟು: ವಿಡಿಯೋ

ಕೊಹ್ಲಿ ವಿರುದ್ಧ ಗಂಭೀರ್ ನೀಡಿರುವ ಹೇಳಿಕೆಗೆ ಈಗಾಗಲೇ ಟ್ವಿಟರ್​ನಲ್ಲಿ ಪರ-ವಿರೋಧ ಚರ್ಚೆ ನಡೆಯುತ್ತಿದೆ. ಆದರೆ ಟ್ವಿಟರ್​ನಲ್ಲಿ ವಿಡಿಯೋವೊಂದು ವೈರಲ್​ ಆಗುತ್ತಿದ್ದು, ರಾಮು ಎಂಬ ಪುಟ್ಟ ಬಾಲಕನೊಬ್ಬ ಕೊಹ್ಲಿಯನ್ನು ಟೀಕಿಸಿರುವ ಗಂಭೀರ್​ ವಿರುದ್ಧ ಕಿಡಿಕಾರಿದ್ದಾನೆ.

author img

By

Published : Nov 7, 2020, 7:36 PM IST

ವಿರಾಟ್​ ಕೊಹ್ಲಿ ನಾಯಕತ್ವ
ವಿರಾಟ್​ ಕೊಹ್ಲಿ ನಾಯಕತ್ವ

ಬೆಂಗಳೂರು: ಆರ್​ಸಿಬಿ ಐಪಿಎಲ್​ ಎಲಿಮಿನೇಟರ್ ಪಂದ್ಯದಲ್ಲಿ ಹೈದರಾಬಾದ್​ ವಿರುದ್ಧ ಸೋತು ಹೊರ ಬಂದಿದೆ. ಆರ್​ಸಿಬಿ ನಿನ್ನೆಯ ಪಂದ್ಯದಲ್ಲಿ ಸೋಲುತ್ತಿದ್ದಂತೆ ಕೊಹ್ಲಿ ನಾಯಕತ್ವದಿಂದ ಕೆಳಗಿಳಿಬೇಕು ಎಂದು ಆಗ್ರಹಿಸಿದ್ದ ಮಾಜಿ ಕ್ರಿಕೆಟಿಗ ಗಂಭೀರ್​ಗೆ ಆರ್​ಸಿಬಿ ಪುಟ್ಟ ಅಭಿಮಾನಿಯೊಬ್ಬ ಭರ್ಜರಿ ತಿರುಗೇಟು ನೀಡಿದ್ದಾನೆ.

​ಎಲಿಮಿನೇಟರ್ ಪಂದ್ಯದ ಬಳಿಕ ಗಂಭೀರ್​, ನನ್ನ ಪ್ರಕಾರ ಆರ್​ಸಿಬಿ ತಂಡದ ನಾಯಕತ್ವದಿಂದ ಕೊಹ್ಲಿ ಕೆಳಗಿಳಿಯಬೇಕು. 8 ವರ್ಷಗಳ ಕಾಲ ಆರ್​ಸಿಬಿ ವೈಫಲ್ಯ ಅನುಭವಿಸಿದೆ. ತಂಡದ ನಾಯಕನಾಗಿ ಯಾರಾದರೂ ಬೇರೆ ನಾಯಕನಿದ್ದರೆ ನನಗೆ ತಿಳಿಸಿ. ನಾನು ಕೊಹ್ಲಿ ವಿರುದ್ಧವಾಗಿ ಏನೂ ಹೇಳುತ್ತಿಲ್ಲ. ಏಕೆಂದರೆ ನಾಯಕನಾದವನು ಮೆಚ್ಚುಗೆ ಪಡೆಯುವ ಜೊತೆಗೆ, ಟೀಕೆಗಳನ್ನು ಸ್ವೀಕರಿಸಬೇಕು ಎಂದು ಹೇಳಿದ್ದರು.

ಗಂಭೀರ್ ಈ ಹೇಳಿಕೆಗೆ ಈಗಾಗಲೇ ಟ್ವಿಟರ್​ನಲ್ಲಿ ಪರ-ವಿರೋಧ ಚರ್ಚೆ ನಡೆಯುತ್ತಿದೆ. ಆದರೆ ಟ್ವಿಟರ್​ನಲ್ಲಿ ವಿಡಿಯೋವೊಂದು ವೈರಲ್​ ಆಗುತ್ತಿದ್ದು, ರಾಮು ಎಂಬ ಪುಟ್ಟ ಬಾಲಕನೊಬ್ಬ ಕೊಹ್ಲಿಯನ್ನು ಟೀಕಿಸಿರುವ ಗಂಭೀರ್​ ವಿರುದ್ಧ ಕಿಡಿಕಾರಿದ್ದಾನೆ.

"ವಿರಾಟ್​ ಕೊಹ್ಲಿಯನ್ನು ಗಂಭೀರ್​ ಕೆಟ್ಟ ನಾಯಕ ಎಂದು ಹೇಳಿದ್ದಾರೆ. ಇದನ್ನು ಟ್ವಿಟರ್​ನಲ್ಲಿ ಎಲ್ಲರೂ ಚರ್ಚೆ ಮಾಡುತ್ತಿದ್ದಾರೆ. ನಾಯಕನಾಗಿ 8 ವರ್ಷಗಳಾದರೂ ಆರ್​ಸಿಬಿಗೆ ಒಂದೂ ಕಪ್​ ಗೆದ್ದು ಕೊಟ್ಟಿಲ್ಲ ಎಂದಿದ್ದಾರೆ. ಆದರೆ ಕೊಹ್ಲಿಯನ್ನು ಟೀಕಿಸಲು ಗಂಭೀರ್​ಗೆ ಏನು ಹಕ್ಕಿದೆ. ವಿರಾಟ್​ ಕೊಹ್ಲಿ ವಿಶ್ವದ ಅತ್ಯುತ್ತಮ ಬ್ಯಾಟ್ಸ್​ಮನ್​. ಏಕದಿನ ಕ್ರಿಕೆಟ್​ನಲ್ಲಿ ನಂಬರ್ ಒನ್​, ಟೆಸ್ಟ್​ನಲ್ಲಿ ಸ್ಟೀವ್​ ಸ್ಮಿತ್​ ನಂತರದ ಅತ್ಯುತ್ತಮ ಬ್ಯಾಟ್ಸ್​ಮನ್​ ಆಗಿದ್ದಾರೆ. ಟೆಸ್ಟ್​ನಲ್ಲಿ 27 ಹಾಗೂ ಏಕದಿನ ಕ್ರಿಕೆಟ್​ನಲ್ಲಿ 43 ಶತಕ ಸಿಡಿಸಿದ್ದಾರೆ. ಗಂಭೀರ್​ಗೆ ಇದೆಲ್ಲಾ ಗೊತ್ತಿಲ್ಲ. ಅವರಿಗೆ ಕೊಹ್ಲಿ ಕಂಡರೆ ಇಷ್ಟವಿಲ್ಲ. ಅದಕ್ಕೆ ಈ ರೀತಿ ಕೊಹ್ಲಿ ವಿರುದ್ಧ ಹೇಳಿಕೆ ನೀಡುತ್ತಾರೆ" ಎಂದು ಆಕ್ರೋಶಭರಿತವಾಗಿ ಗಂಭೀರ್​ ಹೇಳಿಕೆಯನ್ನು ಬಾಲಕ ಖಂಡಿಸಿದ್ದಾನೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.