ಪುಣೆ : ಕೋವಿಡ್-19 ತಾಂಡವವಾಡುತ್ತಿರುವ ಈ ಕಾಲದಲ್ಲಿ ವಿಶ್ವದ ಎರಡು ಬಲಿಷ್ಠ ತಂಡಗಳ ಎದುರು ಸತತ 5 ಸರಣಿ ಗೆದ್ದಿರುವುದಕ್ಕೆ ಭಾರತ ತಂಡವನ್ನು ಮುಖ್ಯ ಕೋಚ್ ರವಿಶಾಸ್ತ್ರಿ ಶ್ಲಾಘಿಸಿದ್ದಾರೆ. ಇದೊಂದು ಜೀವಮಾನದ ಶ್ರೇಷ್ಠ ಋತು ಎಂದು ಬಣ್ಣಿಸಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧ ಟಿ20 ಮತ್ತು ಟೆಸ್ಟ್ ಸರಣಿಯನ್ನು 2-1ರಲ್ಲಿ ಗೆಲುವು ಸಾಧಿಸಿ ಭಾರತ ತಂಡ ಪ್ರವಾಸಿ ಇಂಗ್ಲೆಂಡ್ ವಿರುದ್ಧ 3-1ರಲ್ಲಿ ಟೆಸ್ಟ್, 2-1ರಲ್ಲಿ ಏಕದಿನ ಮತ್ತು 3-2ರಲ್ಲಿ ಟಿ20 ಸರಣಿ ಗೆದ್ದು ಬೀಗಿದೆ. ಸತತ 5 ಸರಣಿಗಳನ್ನು ಕ್ರಿಕೆಟ್ ಬಲಿಷ್ಠ ರಾಷ್ಟ್ರಗಳ ವಿರುದ್ಧ ಗೆದ್ದಿರುವುದಕ್ಕೆ ಕೋಚ್ ರವಿಶಾಸ್ತ್ರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
-
Congratulations Guys for holding up and having a season of a lifetime in toughest of times across all formats and hemispheres against 2 of the best teams in the world. Take a bow 🇮🇳🙏🏻 #TeamIndia #INDvsENG pic.twitter.com/8UnGPZfMY4
— Ravi Shastri (@RaviShastriOfc) March 28, 2021 " class="align-text-top noRightClick twitterSection" data="
">Congratulations Guys for holding up and having a season of a lifetime in toughest of times across all formats and hemispheres against 2 of the best teams in the world. Take a bow 🇮🇳🙏🏻 #TeamIndia #INDvsENG pic.twitter.com/8UnGPZfMY4
— Ravi Shastri (@RaviShastriOfc) March 28, 2021Congratulations Guys for holding up and having a season of a lifetime in toughest of times across all formats and hemispheres against 2 of the best teams in the world. Take a bow 🇮🇳🙏🏻 #TeamIndia #INDvsENG pic.twitter.com/8UnGPZfMY4
— Ravi Shastri (@RaviShastriOfc) March 28, 2021
"ಸಂಕಷ್ಟದ ಸಮಯದಲ್ಲಿ ವಿಶ್ವದ 2 ಅತ್ಯುತ್ತಮ ತಂಡಗಳ ವಿರುದ್ಧ ಎಲ್ಲಾ ಸ್ವರೂಪದ ಕ್ರಿಕೆಟ್ನಲ್ಲಿ ಹಿಡಿತ ಸಾಧಿಸಿ ಜೀವಮಾನದ ಋತುವನ್ನು ಹೊಂದಿದ್ದಕ್ಕೆ ನಿಮಗೆ ಅಭಿನಂದನೆಗಳು" ಎಂದು ಶಾಸ್ತ್ರಿ ಟ್ವೀಟ್ ಮೂಲಕ ಸಂತಸ ಹಂಚಿಕೊಂಡಿದ್ದಾರೆ.
ಕಳೆದ ಸೆಪ್ಟೆಂಬರ್ನಲ್ಲಿ ಐಪಿಎಲ್ ವೇಳೆ ಬಯೋಬಬಲ್ ಪ್ರವೇಶಿಸಿದ್ದ ಭಾರತೀಯ ಆಟಗಾರರು, ಐಪಿಎಲ್ ಮುಗಿಯುತ್ತಿದ್ದಂತೆ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದ್ದರು. ನಂತರ ಕೇವಲ ಒಂದು ಬ್ರೇಕ್ ತೆಗೆದುಕೊಂಡಿದ್ದ ಕೊಹ್ಲಿ ಪಡೆ ಮತ್ತೆ ಇಂಗ್ಲೆಂಡ್ ವಿರುದ್ಧದ ಸರಣಿಗಾಗಿ ಬಯೋಬಬಲ್ ಸೇರಿತ್ತು.
ಇದನ್ನು ಓದಿ:ಸ್ಯಾಮ್ ಕರ್ರನ್ ಧೋನಿಯಂತೆ ಕೊನೆವರೆಗೆ ಕೆಚ್ಚೆದೆಯ ಬ್ಯಾಟಿಂಗ್ ಪ್ರದರ್ಶಿಸಿದ್ರು: ಜೋಸ್ ಬಟ್ಲರ್