ETV Bharat / sports

ನಾಯಕತ್ವ ವಹಿಸಿದ ಚೊಚ್ಚಲ ಪಂದ್ಯದಲ್ಲೇ ರಶೀದ್ ಖಾನ್ ಸರಣಿ ದಾಖಲೆ..!

author img

By

Published : Sep 8, 2019, 8:30 AM IST

ನಾಯಕತ್ವ ವಹಿಸಿದ ಚೊಚ್ಚಲ ಮ್ಯಾಚ್​ನಲ್ಲೇ ಐದು ವಿಕೆಟ್ ಹಾಗೂ 50ಕ್ಕೂ ಅಧಿಕ ರನ್ ಗಳಿಸಿದ ವಿಶ್ವದ ನಾಲ್ಕನೇ ಆಟಗಾರ ಎನ್ನುವ ಕೀರ್ತಿಗೆ ರಶೀದ್ ಖಾನ್ ಪಾತ್ರರಾಗಿದ್ದಾರೆ.

ರಶೀದ್ ಖಾನ್

ಚತ್ತೋಗ್ರಾಮ್(ಬಾಂಗ್ಲಾದೇಶ)​: ವಿಶ್ವಕಪ್​ ಟೂರ್ನಿಯ ಹೀನಾಯ ಪ್ರದರ್ಶನದ ಬಳಿಕ ಗುಲ್ಬಾಡಿನ್ ನೈಬ್ ಅವರನ್ನು ನಾಯಕತ್ವ ಪಟ್ಟದಿಂದ ಕೆಳಗಿಳಿಸಿ ಯುವ ಪ್ರತಿಭೆ ರಶೀದ್ ಖಾನ್​ಗೆ ತಂಡದ ಸಾರಥ್ಯ ವಹಿಸಲಾಗಿತ್ತು. ನಾಯಕತ್ವ ವಹಿಸಿದ ಚೊಚ್ಚಲ ಪಂದ್ಯದಲ್ಲೇ ದಾಖಲೆಗಳ ಮೇಲೆ ದಾಖಲೆ ಬರೆದಿರುವ ಆಲ್​ರೌಂಡರ್ ರಶೀದ್ ಖಾನ್ ತಂಡದ ಹೊಸ ಆಶಾಕಿರಣವಾಗಿ ಕಾಣಿಸಿಕೊಂಡಿದ್ದಾರೆ.

ಬಾಂಗ್ಲಾದೇಶ ವಿರುದ್ಧ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ ನಾಯಕ ರಶೀದ್ ಖಾನ್ ಅದ್ಭುತ ಪ್ರದರ್ಶನ ಮೂಲಕ ತಂಡವನ್ನು ಗೆಲುವಿನತ್ತ ಕೊಂಡೊಯ್ದಿದ್ದಾರೆ. ನಾಯಕತ್ವ ವಹಿಸಿದ ಚೊಚ್ಚಲ ಮ್ಯಾಚ್​ನಲ್ಲೇ ಐದು ವಿಕೆಟ್ ಹಾಗೂ 50ಕ್ಕೂ ಅಧಿಕ ರನ್ ಗಳಿಸಿದ ವಿಶ್ವದ ನಾಲ್ಕನೇ ಆಟಗಾರ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.

ಮೊದಲು ಬ್ಯಾಟ್ ಮಾಡಿದ್ದ ಅಫ್ಘಾನಿಸ್ತಾನ 342 ರನ್​ಗಳ ಬೃಹತ್ ಮೊತ್ತ ದಾಖಲಿಸಿತ್ತು. ಇದರಲ್ಲಿ ನಾಯಕ ರಶೀದ್ ಖಾನ್ ಪಾಲು 51 ರನ್ ಗಳಿಸಿದ್ದಾರೆ. ಇನ್ನು ಬಾಂಗ್ಲಾದೇಶದ ಮೊದಲ ಇನ್ನಿಂಗ್ಸ್​ ಅನ್ನು ಅಲ್ಪ ಮೊತ್ತಕ್ಕೆ ಕಟ್ಟಿಹಾಕುವಲ್ಲಿ ರಶೀದ್ ಬಹುಮುಖ್ಯ ಪಾತ್ರ ವಹಿಸಿದ್ದರು. 55 ರನ್ ನೀಡಿ 5 ವಿಕೆಟ್ ಕಿತ್ತಿದ್ದರು.

ರಶೀದ್ ಖಾನ್ ಇದೇ ವೇಳೆ ಮತ್ತೊಂದು ದಾಖಲೆಗೂ ಭಾಜನರಾಗಿದ್ದಾರೆ. ಒಂದೇ ಇನ್ನಿಂಗ್ಸ್​ನಲ್ಲಿ ಐದು ವಿಕೆಟ್ ಹಾಗೂ 50+ ರನ್ ಗಳಿಸಿದ ವಿಶ್ವದ ಕಿರಿಯ ನಾಯಕ ಎನ್ನುವ ದಾಖಲೆಯನ್ನು ರಶೀದ್ ಖಾನ್ ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಈ ಮೊದಲು ಈ ದಾಖಲೆ ಬಾಂಗ್ಲಾದ ಶಕೀಬ್ ಅಲ್ ಹಸನ್ ಹೆಸರಲ್ಲಿತ್ತು. ರಶೀದ್ ಖಾನ್ ದಾಖಲೆ 20 ವರ್ಷ 352 ದಿನದಲ್ಲಿ ದಾಖಲಾದರೆ, ಶಕೀಬ್ ಇದೇ ದಾಖಲೆಯನ್ನು 22 ವರ್ಷ 115 ದಿನದಲ್ಲಿ ಮಾಡಿದ್ದರು.

ನಾಯಕತ್ವ ವಹಿಸಿದ ಚೊಚ್ಚಲ ಪಂದ್ಯದಲ್ಲಿ 5 ವಿಕೆಟ್ ಹಾಗೂ 50+ ರನ್​:

  • ಶೆಲ್ಡನ್ ಜಾಕ್ಸನ್(ಇಂಗ್ಲೆಂಡ್) -1905
  • ಇಮ್ರಾನ್ ಖಾನ್(ಪಾಕಿಸ್ತಾನ) - 1982
  • ಶಕೀಬ್ ಅಲ್ ಹಸನ್(ಬಾಂಗ್ಲಾದೇಶ) - 2009
  • ರಶೀದ್ ಖಾನ್(ಅಫ್ಘಾನಿಸ್ತಾನ) - 2019

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.