ದುಬೈ: ಅಫ್ಘಾನಿಸ್ತಾನದ ಸ್ಪಿನ್ನರ್ ರಶೀದ್ ಖಾನ್ 21ನೇ ಶತಮಾನದಲ್ಲಿ ಟೆಸ್ಟ್ ಪಂದ್ಯವೊಂದರಲ್ಲಿ ಅತಿ ಹೆಚ್ಚು ಓವರ್ ಎಸೆದ ಬೌಲರ್ ಎಂಬ ವಿಶ್ವ ದಾಖಲೆಗೆ ಪಾತ್ರರಾಗಿದ್ದಾರೆ.
ರಶೀದ್ ಜಿಂಬಾಬ್ವೆ ವಿರುದ್ಧ ದುಬೈನಲ್ಲಿ ನಡೆಯುತ್ತಿರುವ 2ನೇ ಟೆಸ್ಟ್ ಪಂದ್ಯದಲ್ಲಿ ಬರೋಬ್ಬರಿ 99.2 ಓವರ್ ಎಸೆಯುವ ಮೂಲಕ ಈ ದಾಖಲೆಗೆ ಪಾತ್ರರಾಗಿದ್ದಾರೆ. ಇದು 1998ರ ನಂತರ ಬೌಲರ್ ಒಬ್ಬ ಅತಿ ಹೆಚ್ಚು ಓವರ್ ಬೌಲಿಂಗ್ ಮಾಡಿದ ಮೊದಲ ನಿದರ್ಶನವಾಗಿದೆ.
1998ರಲ್ಲಿ ಶ್ರೀಲಂಕಾದ ಸ್ಪಿನ್ ಲೆಜೆಂಡ್ ಮುತ್ತಯ್ಯ ಮುರಳೀಧರನ್ 113.5 ಓವರ್ ಎಸೆದಿರುವುದು ಟೆಸ್ಟ್ ಕ್ರಿಕೆಟ್ನಲ್ಲಿನ ಸಾರ್ವಕಾಲಿಕ ದಾಖಲೆಯಾಗಿದೆ. ಅವರು ಇಂಗ್ಲೆಂಡ್ ವಿರುದ್ಧ ಇಷ್ಟು ಓವರ್ಗಳನ್ನೆಸೆದಿದ್ದರು.
ಗಾಯದಿಂದ ಮರಳಿದ್ದ ರಶೀದ್ ಮೊದಲ ಇನ್ನಿಂಗ್ಸ್ನಲ್ಲಿ 36.3 ಓವರ್ ಎಸೆದು 138 ರನ್ ನೀಡಿ 4 ವಿಕೆಟ್ ಪಡೆದಿದ್ದರು. ಎರಡನೇ ಇನ್ನಿಂಗ್ಸ್ನಲ್ಲಿ 62.5 ಓವರ್ಗಳನ್ನು ಎಸೆದು 137 ರನ್ ನೀಡಿ 7 ವಿಕೆಟ್ ಪಡೆದಿದ್ದರು. ಎರಡನೇ ಇನ್ನಿಂಗ್ಸ್ನಲ್ಲಿ ರಶೀದ್ ಬೌಲಿಂಗ್ ನೆರವಿನಿಂದ ಜಿಂಬಾಬ್ವೆಯನ್ನು 365 ರನ್ಗಳಿಗೆ ಕಟ್ಟಿ ಹಾಕುವ ಮೂಲಕ ಕೇವಲ 108 ರನ್ಗಳ ಟಾರ್ಗೆಟ್ ಪಡೆಯಲು ಅಫ್ಘಾನಿಸ್ತಾನಕ್ಕೆ ನೆರವಾಗಿದ್ದಾರೆ.
ಇದನ್ನು ಓದಿ:ಫಾಲೋಆನ್ಗೆ ಗುರಿಯಾದ ಜಿಂಬಾಬ್ವೆಗೆ ವಿಲಿಯಮ್ಸ್ ಶತಕದ ಬಲ.. ರೋಚಕ ಹಂತಕ್ಕೆ 2ನೇ ಟೆಸ್ಟ್..