ದುಬೈ: ನಿತೀಶ್ ರಾಣಾ ಹಾಗೂ ಸುನೀಲ್ ನರೈನ್ ಅವರ ಸ್ಫೋಟಕ ಅರ್ಧಶತಕದ ನೆರವಿನಿಂದ ಗೆಲ್ಲಲೇಬೇಕಾದ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ 194 ರನ್ಗಳ ಬೃಹತ್ ಮೊತ್ತ ದಾಖಲಿಸಿದೆ.
ಟಾಸ್ ಸೋತರೂ ಬ್ಯಾಟಿಂಗ್‌ಗೆ ಇಳಿದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ 42 ರನ್ ಗಳಿಸುವಷ್ಟರಲ್ಲಿ ಪ್ರಮುಖ ಮೂರು ವಿಕೆಟ್ ಕಳೆದುಕೊಂಡು ಆಘಾತ ಅನುಭವಿಸಿತು. ಶುಬ್ಮನ್ ಗಿಲ್(9), ರಾಹುಲ್ ತ್ರಿಪಾಠಿ(13) ಎನ್ರಿಚ್ ನಾಟ್ಜ್ ವಿಕೆಟ್ ಒಪ್ಪಿಸಿದರೆ, ರಬಾಡ 3 ರನ್ಗಳಿಸಿದ್ದ ದಿನೇಶ್ ಕಾರ್ತಿಕ್ ವಿಕೆಟ್ ಪಡೆದು ಮತ್ತೊಂದು ಆಘಾತ ನೀಡಿದರು.
-
Innings Break!
— IndianPremierLeague (@IPL) October 24, 2020 " class="align-text-top noRightClick twitterSection" data="
Half-centuries by Nitish Rana and Sunil Narine, guide #KKR to a formidable total of 194/6 on the board.
Will #DelhiCapitals chase this down? Stay tuned.#Dream11IPL pic.twitter.com/xO2vVKWwlf
">Innings Break!
— IndianPremierLeague (@IPL) October 24, 2020
Half-centuries by Nitish Rana and Sunil Narine, guide #KKR to a formidable total of 194/6 on the board.
Will #DelhiCapitals chase this down? Stay tuned.#Dream11IPL pic.twitter.com/xO2vVKWwlfInnings Break!
— IndianPremierLeague (@IPL) October 24, 2020
Half-centuries by Nitish Rana and Sunil Narine, guide #KKR to a formidable total of 194/6 on the board.
Will #DelhiCapitals chase this down? Stay tuned.#Dream11IPL pic.twitter.com/xO2vVKWwlf
ಆದರೆ 4ನೇ ವಿಕೆಟ್ಗೆ ಜೊತೆಯಾದ ರಾಣಾ (81) ಹಾಗೂ ನರೈನ್ (64) 115 ರನ್ಗಳ ಜೊತೆಯಾಟ ನೀಡಿ ಪಂದ್ಯದ ಗತಿಯನ್ನೇ ಬದಲಿಸಿದರು. 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಇಳಿದಿದ್ದ ನರೈನ್ ಕೇವಲ 32 ಎಸೆತಗಳಲ್ಲಿ 4 ಸಿಕ್ಸರ್ ಹಾಗೂ 6 ಬೌಂಡರಿ ಸಹಿತ 64 ರನ್ಗಳಿಸಿದರೆ, ಆರಂಭಿಕರಾಗಿ ಕಣಕ್ಕಿಳಿದಿದ್ದ ರಾಣಾ 53 ಎಸೆತಗಳಲ್ಲಿ 13 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 64 ರನ್ಗಳಿಸಿದರು. ಮಾರ್ಗನ್ 9 ಎಸೆತಗಳಲ್ಲಿ 17 ರನ್ಗಳಿಸಿ ತಂಡದ ಮೊತ್ತವನ್ನು ಹೆಚ್ಚಿಸಿದರು. ಒಟ್ಟಾರೆ 20 ಓವರ್ಗಳಲ್ಲಿ ಕೆಕೆಆರ್ 6 ವಿಕೆಟ್ ಕಳೆದುಕೊಂಡು 194 ರನ್ಗಳಿಸಿದೆ.
ಡೆಲ್ಲಿ ಪರ ರಬಾಡ, ಎನ್ರಿಚ್ ಹಾಗೂ ಸ್ಟೋಯ್ನಿಸ್ ತಲಾ 2 ವಿಕೆಟ್ ಪಡೆದರು. ಆರ್.ಅಶ್ವಿನ್ 3 ಓವರ್ಗಳಲ್ಲಿ 45 ರನ್ ನೀಡಿ ದುಬಾರಿಯಾದರು.