ಅಬುಧಾಬಿ: ರಾಯಲ್ಸ್ ಬೌಲರ್ ದಾಳಿಗೆ ರನ್ಗಳಿಸಲು ಪರದಾಡಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 125 ರನ್ಗಳ ಸಾಧಾರಣ ಮೊತ್ತ ಕಲೆಯಾಕಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಚೆನ್ನೈ ಸೂಪರ್ ಕಿಂಗ್ಸ್ ತಂಡ ಆರಂಭದಿಂದಲೇ ವಿಕೆಟ್ ಕಳೆದುಕೊಳ್ಳುವುದರ ಜೊತೆಗೆ ರನ್ಗಳಿಸಲು ಪರದಾಡಿತು. ರಾಜಸ್ಥಾನ್ ತಂಡದ ಸ್ಪಿನ್ನರ್ಗಳಾದ ಶ್ರೇಯಸ್ ಗೋಪಾಲ್ ಹಾಗೂ ರಾಹುಲ್ ತೆವಾಟಿಯಾ ಅತ್ಯುತ್ತಮವಾಗಿ ಬೌಲಿಂಗ್ ಮಾಡಿ ಸಿಎಸ್ಕೆ ರನ್ಗತಿಗೆ ಕಡಿವಾಣ ಹಾಕಿದರು.
-
Innings Break!@rajasthanroyals restrict #CSK to a total of 125/5.
— IndianPremierLeague (@IPL) October 19, 2020 " class="align-text-top noRightClick twitterSection" data="
Scorecard - https://t.co/KfJxeB7QNi #Dream11IPL pic.twitter.com/rQyeQ0RiRD
">Innings Break!@rajasthanroyals restrict #CSK to a total of 125/5.
— IndianPremierLeague (@IPL) October 19, 2020
Scorecard - https://t.co/KfJxeB7QNi #Dream11IPL pic.twitter.com/rQyeQ0RiRDInnings Break!@rajasthanroyals restrict #CSK to a total of 125/5.
— IndianPremierLeague (@IPL) October 19, 2020
Scorecard - https://t.co/KfJxeB7QNi #Dream11IPL pic.twitter.com/rQyeQ0RiRD
ಆರಂಭಿಕರಾಗಿ ಕಣಕ್ಕಿಳಿದಿದ್ದ ಪ್ಲೆಸಿಸ್ 10 ರನ್ಗಳಿಗೆ ಔಟಾದರೆ, ನಂತರ ಬಂದ ವಾಟ್ಸನ್ ಕೇವಲ 8 ರನ್ಗಳಿಗೆ ವಿಕೆಟ್ ಒಪ್ಪಿಸಿದರು. ಆರಂಭಿಕನಾಗಿ ಬಡ್ತಿ ಪಡೆದಿರುವ ಸ್ಯಾಮ್ ಕರ್ರನ್ 25 ಎಸೆತಗಳಲ್ಲಿ 22 ರನ್ಗಳಿಸಿ ಔಟಾದರು.
ನಂತರ ಬಂದ ರಾಯುಡು 19 ಎಸೆತಗಳಲ್ಲಿ 13 ರನ್ಗಳಿಸಿ ಔಟಾದರೆ, ನಿಧಾನಗತಿ ಬ್ಯಾಟಿಂಗ್ ಮೊರೆ ಹೋದ ಧೋನಿ 28 ಎಸೆತಗಳಲ್ಲಿ 28 ರನ್ಗಳಿಸಿ ರನ್ ಔಟ್ ಆದರು. ಜಡೇಜಾ 30 ಎಸೆತಗಳಲ್ಲಿ 35 ರನ್ಗಳಿಸಿ ತಂಡದ ಮೊತ್ತವನ್ನು 100ರ ಗಡಿದಾಟಿಸಿದರು. ತಂಡದ ಗರಿಷ್ಠ ಸ್ಕೋರ್ ಎನಿಸಿಕೊಂಡರು.
ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದ ಆರ್ಚರ್ 4 ಓವರ್ಗಳಲ್ಲಿ 20 ರನ್ ನೀಡಿ 1 ವಿಕೆಟ್, ಶ್ರೇಯಸ್ ಗೋಪಾಲ್ 14 ರನ್ ನೀಡಿ 1ವಿಕೆಟ್, ರಾಹುಲ್ ತೆವಾಟಿಯಾ 18 ರನ್ಗೆ 1 ವಿಕೆಟ್ ಹಾಗೂ ಕಾರ್ತಿಕ್ ತ್ಯಾಗಿ 35 ರನ್ ನೀಡಿ 1 ವಿಕೆಟ್ ಪಡೆದರು.