ETV Bharat / sports

ಐಪಿಎಲ್​ ದಿನಾಂಕ ಘೋಷಣೆ: ಅಬ್ಬರಿಸಲು ಹೊಸ ಬ್ಯಾಟ್​ ಖರೀದಿ ಮಾಡಿದ ರೈನಾ, ಪಂತ್​! - ಇಂಡಿಯನ್​ ಪ್ರೀಮಿಯರ್​ ಲೀಗ್​

ಬಹುನಿರೀಕ್ಷಿತ ಇಂಡಿಯನ್​ ಪ್ರೀಮಿಯರ್​ ಲೀಗ್​​ ನಡೆಯುವ ದಿನಾಂಕ ಘೋಷಣೆಯಾಗುತ್ತಿದ್ದಂತೆ ಆಟಗಾರರಲ್ಲಿ ಉತ್ಸಾಹ ಇಮ್ಮಡಿಗೊಂಡಿದ್ದು, ಟೂರ್ನಿಯಲ್ಲಿ ಭಾಗಿಯಾಗಲು ಸಜ್ಜುಗೊಳ್ಳುತ್ತಿದ್ದಾರೆ.

Raina, Rishabh Pant
Raina, Rishabh Pant
author img

By

Published : Jul 24, 2020, 9:25 PM IST

ಗಾಜಿಯಾಬಾದ್​: ಪ್ರಸಕ್ತ ಸಾಲಿನ ಇಂಡಿಯನ್​ ಪ್ರೀಮಿಯರ್​ ಲೀಗ್​ನ ದಿನಾಂಕ ಘೋಷಣೆಯಾಗುತ್ತಿದ್ದಂತೆ ಆಟಗಾರರಲ್ಲಿ ಹಬ್ಬದ ವಾತಾವರಣ ನಿರ್ಮಾಣಗೊಂಡಿದ್ದು, ಟೂರ್ನಿಯಲ್ಲಿ ಭಾಗಿಯಾಗಲು ಎಲ್ಲರೂ ಕಾತುರದಿಂದ ಕಾಯುತ್ತಿದ್ದಾರೆ.

ಪ್ರಸಕ್ತ ಸಾಲಿನ ಐಪಿಎಲ್​ ದಿನಾಂಕ ನಿಗದಿ: ಹೆಚ್ಚು ಸಮಯ ಕಾಯಲು ಸಾಧ್ಯವಿಲ್ಲ ಎಂದು ಆರ್​ಸಿಬಿ ಟ್ವೀಟ್​​!

ಇದರ ಮಧ್ಯೆ ದಿನಾಂಕ ಬಹಿರಂಗವಾಗುತ್ತಿದ್ದಂತೆ ಟೀಂ ಇಂಡಿಯಾ ಪ್ಲೇಯರ್ಸ್​ ಸುರೇಶ್​ ರೈನಾ ಹಾಗೂ ವಿಕೆಟ್​ ಕೀಪರ್​ ರಿಷಬ್​ ಪಂತ್​ ಹೊಸ ಬ್ಯಾಟ್​ ಖರೀದಿ ಮಾಡಿದ್ದಾರೆ. ಮಿರತ್​​ನಲ್ಲಿರುವ ಎಸ್​ಜಿ ಬ್ಯಾಟ್​ ಪ್ಯಾಕ್ಟರಿಗೆ ಭೇಟಿ ನೀಡಿರುವ ಇಬ್ಬರು ಪ್ಲೇಯರ್ಸ್​​ ಹೊಸ ಬ್ಯಾಟ್​​ ಖರೀದಿ ಮಾಡಿದ್ದು, ಅದರ ವಿಡಿಯೋ ಸುರೇಶ್​ ರೈನಾ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

ಬ್ಯಾಟ್​ ಖರೀದಿ ಮಾಡುವುದರೊಂದಿಗೆ ಬಹುನಿರೀಕ್ಷಿತ ಐಪಿಎಲ್​ಗೋಸ್ಕರ ಸಜ್ಜಾಗಿರುವುದಾಗಿ ಬರೆದುಕೊಂಡಿದ್ದಾರೆ. ಸೆಪ್ಟೆಂಬರ್​​ 19ರಿಂದ ನವೆಂಬರ್​ 8ರವರೆಗೆ ದುಬೈನಲ್ಲಿ ಟೂರ್ನಿ ಆಯೋಜನೆಗೊಂಡಿದ್ದು, ಮುಂದಿನ ವಾರ ಬಿಸಿಸಿಐ ಆಡಳಿತ ಮಂಡಳಿ ಸಭೆ ನಡೆಸಿ ವೇಳಾಪಟ್ಟಿ ಫೈನಲ್​ ಆಗುವ ಸಾಧ್ಯತೆ ಇದೆ.

ಇನ್ನು ಇದೇ ವಿಷಯಕ್ಕೆ ಸಂಬಂಧಿಸಿದಂತೆ ಟ್ವೀಟ್​ ಮಾಡಿದ್ದ ರಾಯಲ್​ ಚಾಲೆಂಜರ್ಸ್​ ಬೆಂಗಳೂರು, ಶೀಘ್ರದಲ್ಲೇ ಬರಲಿದೆ, ಈ ಐಪಿಎಲ್​ 2020... ಉತ್ಸಾಹ, ತೀವ್ರತೆ, ನಾಟಕ, ಚಾಲೆಂಜರ್​ ಸ್ಪಿರಿಟ್​​. ರಾಯಲ್​ ಚಾಲೆಂಜರ್ಸ್​​ ಬೆಂಗಳೂರು ಹೆಚ್ಚು ಸಮಯ ಕಾಯಲು ಸಾಧ್ಯವಿಲ್ಲ. ನೀವು ನಮ್ಮೊಂದಿಗಿದ್ದೀರಾ? ಎಂದು ಟ್ವೀಟ್​ ಮಾಡಿತು. ಉತ್ತರಪ್ರದೇಶದ ಗಾಜಿಯಾಬಾದ್​​ನಲ್ಲಿ ಕಳೆದ ಕೆಲ ದಿನಗಳಿಂದ ಇಬ್ಬರು ಪ್ಲೇಯರ್ಸ್​​ ಒಟ್ಟಿಗೆ ಅಭ್ಯಾಸ ನಡೆಸುತ್ತಿದ್ದ ವಿಡಿಯೋ ಕೂಡ ಹರಿಬಿಟ್ಟಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.