ETV Bharat / sports

ದ್ರಾವಿಡ್​ ಭಾರತ ತಂಡದ ಹೆಡ್​ ಕೋಚ್​ ಆಫರ್​ ತಿರಸ್ಕರಿಸಿದ್ದು ಈ ಕಾರಣಕ್ಕೆ!!

author img

By

Published : Jul 6, 2020, 5:17 PM IST

ನಾನು ವಿಶ್ವದಾದ್ಯಂತ ಭಾರತ ತಂಡದ ಜೊತೆ ಪಯಣಿಸಬೇಕಾಗುತ್ತದೆ. ಈ ಸಂದರ್ಭದಲ್ಲಿ ಅವರಿಗೆ ಸಮಯ ಮತ್ತು ಗಮನವನ್ನು ನೀಡಲು ನನಗೆ ಸಾಧ್ಯವಾಗುವುದಿಲ್ಲ. ಹಾಗಾಗಿ ನಾನು ಮನೆಯಲ್ಲಿಯೇ ಇರಬೇಕು ಎಂದು ಬಯಸುತ್ತೇನೆ ಎಂದಿದ್ದರಂತೆ ರಾಹುಲ್‌ ದ್ರಾವಿಡ್‌..

ರಾಹುಲ್​ ದ್ರಾವಿಡ್
ರಾಹುಲ್​ ದ್ರಾವಿಡ್

ಮುಂಬೈ : ಭಾರತ ತಂಡದ ಜಂಟಲ್​ಮ್ಯಾನ್​, ದಿವಾ ಲ್​ ಎಂದೇ ಖ್ಯಾತರಾಗಿರುವ ಕನ್ನಡಿಗ ರಾಹುಲ್​ ದ್ರಾವಿಡ್​ ಒಬ್ಬ ಆಟಗಾರನಾಗಿ ದೇಶಕ್ಕೋಶ್ಕರ ಹೇಗೆ ಕಾರ್ಯ ನಿರ್ವಹಿಸಿದ್ದರೋ ಹಾಗೇ ನಿವೃತ್ತಿಯ ನಂತರವೂ ಭಾರತೀಯ ಕ್ರಿಕೆಟ್​ಗೆ ದುಡಿಯುತ್ತಿದ್ದಾರೆ.

ಭಾರತ ತಂಡದ ಹೆಡ್​ ಕೋಚ್​ ಹುದ್ದೆಯ ಆಯ್ಕೆ ಸಂದರ್ಭದಲ್ಲಿ ಕ್ರಿಕೆಟ್ ಆಫ್​ ಅಥಾರಿಟಿ ದ್ರಾವಿಡ್​ರಿಗೆ ಹೆಡ್​ ಕೋಚ್​ ಆಫರ್​ ನೀಡಿದ್ದರಂತೆ. ಆದರೆ, ದ್ರಾವಿಡ್​ ಆ ಹುದ್ದೆಯನ್ನು ತಿರಸ್ಕರಿಸಿದ್ದರು ಎಂದು ಸಿಒಎ ಅಧ್ಯಕ್ಷ ವಿನೋದ್​ ರಾಯ್​ ಸ್ಪೋರ್ಟ್ಸ್​ಕೀಡಾ ಸಂದರ್ಶನದಲ್ಲಿ ತಿಳಿಸಿದ್ದಾರೆ. ಭಾರತೀಯ ಕ್ರಿಕೆಟ್ ತಂಡದ ಮುಖ್ಯ ಕೋಚ್ ಹುದ್ದೆ ವಹಿಸಿಕೊಳ್ಳಲು ರಾಹುಲ್ ದ್ರಾವಿಡ್ ಅವರಿಗೆ ಸಮಿತಿ ಬೆಂಬಲಿಸಿತ್ತು. ಆದರೆ, ಕೌಟುಂಬಿಕ ಕಾರಣಗಳನ್ನು ಉಲ್ಲೇಖಿಸಿ ಅವರು ಅದನ್ನು ನಿರಾಕರಿಸಿದ್ದರು. ತನ್ನ ಮಕ್ಕಳು ಬೆಳೆಯುತ್ತಿದ್ದಾರೆ ಮತ್ತು ಅವರೊಂದಿಗೆ ಸಾಕಷ್ಟು ಸಮಯ ಕಳೆಯಬೇಕಾಗಿದೆ ಎಂದು ದ್ರಾವಿಡ್‌‌ ಆ ಆಫರ್​ ತಿರಸ್ಕರಿಸಿದ್ದರು ಎಂದು ವಿನೋದ್​ ರಾಯ್​ ಹೇಳಿದರು.

"ರಾಹುಲ್​ ಕೋಚ್​ ಹುದ್ದೆಗೆ ನಮ್ಮ ಮುಂದೆ ಮಂಚೂಣಿಯಲ್ಲಿದ್ದರು. ಆದರೆ, ಅವರು, ನೋಡಿ ನನಗೆ ಇಬ್ಬರು ಬೆಳೆಯುವ ಮಕ್ಕಳಿದ್ದಾರೆ. ನಾನು ವಿಶ್ವದಾದ್ಯಂತ ಭಾರತ ತಂಡದ ಜೊತೆ ಪಯಣಿಸಬೇಕಾಗುತ್ತದೆ. ಈ ಸಂದರ್ಭದಲ್ಲಿ ಅವರಿಗೆ ಸಮಯ ಮತ್ತು ಗಮನವನ್ನು ನೀಡಲು ನನಗೆ ಸಾಧ್ಯವಾಗುವುದಿಲ್ಲ. ಹಾಗಾಗಿ ನಾನು ಮನೆಯಲ್ಲಿಯೇ ಇರಬೇಕು ಎಂದು ಬಯಸುತ್ತೇನೆ ಎಂದಿದ್ದರು. ಅವರದ್ದು ನ್ಯಾಯಯುತವಾದ ಮನವಿಯಾಗಿತ್ತು. ಆದರೂ ಅವರೇ ನಮ್ಮ ಮನಸ್ಸಿನಲ್ಲಿ ಕೋಚ್​ ಹುದ್ದೆಗೆ ನಮ್ಮ ಮುಂದಿದ್ದ ಮೊದಲ ಆಯ್ಕೆಯಾಗಿದ್ದರು ಎಂದು ವಿನೋದ್​ ರೈ ಹೇಳಿಕೊಂಡಿದ್ದಾರೆ.

ಸದ್ಯಕ್ಕೆ ಬೇಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಮುಖ್ಯ ಕೋಚ್​ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆ ಪಾತ್ರವನ್ನು ಅವರು ಒಪ್ಪಿಕೊಂಡು ತಮ್ಮನ್ನು ತಾವು ತೊಡಗಿಸಿಕೊಂಡಿರುವುದೇ ಅದೃಷ್ಟದ ವಿಚಾರ ಎಂದು ವಿನೋದ ರಾಯ್ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.