ಶಾರ್ಜಾ: ರಾಧ ಯಾದವ್ ಅವರು 5 ವಿಕೆಟ್ ಗೊಂಚಲಿನ ನೆರವಿನಿಂದ ಹಾಲಿ ಚಾಂಪಿಯನ್ಸ್ ಸೂಪರ್ ನೋವಾಸ್ ವುಮೆನ್ಸ್ ಟಿ20 ಚಾಲೆಂಜ್ನಲ್ಲಿ ಟ್ರೈಲ್ ಬ್ಲೇಜರ್ಸ್ ತಂಡವನ್ನು ಕೇವಲ 118 ರನ್ಗಳಿಗೆ ನಿಯಂತ್ರಿಸಿದೆ.
ಟಾಸ್ ಸೋತರು ಬ್ಯಾಟಿಂಗ್ ನಡೆಸಿದ ಸ್ಮೃತಿ ಮಂಧಾನ ಹಾಗೂ ದೊಟ್ಟಿನ್ ಮೊದಲ ವಿಕೆಟ್ಗೆ 71 ರನ್ಗಳ ಜೊತೆಯಾಟ ನೀಡಿದರು. ಇಂದು ರನ್ಗಳಿಸಲು ಪರದಾಡಿದ ದೊಟ್ಟಿನ್ 32 ಎಸೆತಗಳಲ್ಲಿ 20 ರನ್ಗಳಿಸಿ ಔಟಾದರು. ಆದರೆ ಅಬ್ಬರದ ಬ್ಯಾಟಿಂಗ್ ಮಾಡಿದ ಮಂಧಾನ 49 ಎಸೆತಗಳಲ್ಲಿ 5 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 68 ರನ್ಗಳಿಸಿದರು.
-
Innings Break!
— IndianPremierLeague (@IPL) November 9, 2020 " class="align-text-top noRightClick twitterSection" data="
What a turnaround this by the #Supernovas. A brilliant 5-wicket haul by Radha Yadav as #Trailblazers get to a total of 118/8 on the board.
Scorecard - https://t.co/EOHHKZDrb6 #JioWomensT20Challenge pic.twitter.com/K3ACYGDlHc
">Innings Break!
— IndianPremierLeague (@IPL) November 9, 2020
What a turnaround this by the #Supernovas. A brilliant 5-wicket haul by Radha Yadav as #Trailblazers get to a total of 118/8 on the board.
Scorecard - https://t.co/EOHHKZDrb6 #JioWomensT20Challenge pic.twitter.com/K3ACYGDlHcInnings Break!
— IndianPremierLeague (@IPL) November 9, 2020
What a turnaround this by the #Supernovas. A brilliant 5-wicket haul by Radha Yadav as #Trailblazers get to a total of 118/8 on the board.
Scorecard - https://t.co/EOHHKZDrb6 #JioWomensT20Challenge pic.twitter.com/K3ACYGDlHc
ಮಂಧಾನ ಔಟಾಗುತ್ತಿದ್ದಂತೆ ಟ್ರೈಲ್ ಬ್ಲೇಜರ್ಸ್ ಪೆವಿಲಿಯನ್ ಪರೇಡ್ ನಡೆಸಿದರು. ಆದರೆ ರಿಚಾ ಘೋಷ್ 10, ದೀಪ್ತಿ ಶರ್ಮಾ 9, ಹರ್ಲೀನ್ ಡಿಯೋಲ್ 1, ಗೋಸ್ವಾಮಿ 1ರನ್ಗಳಿಗೆ ವಿಕೆಟ್ ಒಪ್ಪಿಸಿದ್ದರಿಂದ ಟ್ರೈಲ್ ಬ್ಲೇಜರ್ಸ್ 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು ಕೇವಲ 118 ರನ್ಗಳಿಸಿದರು.
ಸೂಪರ್ ನೋವಾಸ್ ಕಡೆ ರಾಧ ಯಾದವ್ 20 ರನ್ಗಳಿಗೆ 5 ವಿಕೆಟ್ ಪಡೆದರೆ, ಸಿರಿವರ್ದನೆ ಮತ್ತು ಪೂನಮ್ ಯಾದವ್ ತಲಾ ಒಂದು ವಿಕೆಟ್ ಪಡೆದರು.