ಸಿಡ್ನಿ: ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಟೀಮ್ ಇಂಡಿಯಾ ಇದೇ 27ರಂದು ಆರಂಭವಾಗಲಿರುವ ಸೀಮಿತ ಓವರ್ಗಳ ಸರಣಿಗಾಗಿ ಕ್ವಾರಂಟೈನ್ನಲ್ಲಿದ್ದುಕೊಂಡೇ ಅಭ್ಯಾಸ ನಡೆಸುತ್ತಿದೆ. ಈ ವೇಳೆ ಆರ್.ಅಶ್ವಿನ್ ಮತ್ತು ಕನ್ನಡಿಗ ರಾಹುಲ್ ಆಸೀಸ್ ಬೌನ್ಸಿ ಪಿಚ್ನಲ್ಲಿ ಬ್ಯಾಟಿಂಗ್ ಮಾಡಲು ಹೊಸ ರೀತಿಯ ಅಭ್ಯಾಸ ಮಾಡಿ ನೆಟ್ಟಿಗರ ಗಮನ ಸೆಳೆದಿದ್ದಾರೆ.
ಆಸ್ಟ್ರೇಲಿಯಾದಲ್ಲಿ ಬೌನ್ಸಿ ಹಾಗೂ ವೇಗದ ಬೌಲಿಂಗ್ಗೆ ನೆರವಾಗುವ ಪಿಚ್ಗಳೇ ಹೆಚ್ಚಾಗಿವೆ. ಹಾಗಾಗಿ 2 ವರ್ಷಗಳ ನಂತರ ಟೆಸ್ಟ್ ತಂಡಕ್ಕೆ ಮರಳಿರುವ ಕರ್ನಾಟಕದ ಬ್ಯಾಟ್ಸ್ಮನ್ ತಮ್ಮ ಸ್ಥಾನವನ್ನು ಖಚಿತಗೊಳಿಸುವ ಸಲುವಾಗಿ ನೆಟ್ಸ್ನಲ್ಲಿ ಬೌನ್ಸರ್ಗಳನ್ನು ಎದುರಿಸುವುದಕ್ಕಾಗಿ ಹೊಸ ರೀತಿಯಲ್ಲಿ ಪ್ರಾಕ್ಟೀಸ್ ಮಾಡಿದ್ದಾರೆ. ಅವರಿಗೆ ಅನುಭವಿ ಸ್ಪಿನ್ನರ್ ಅಶ್ವಿನ್ ನೆರವಾಗಿದ್ದಾರೆ. ಈ ವಿಡಿಯೋವನ್ನು ಬಿಸಿಸಿಐ ತನ್ನ ಟ್ವಿಟರ್ನಲ್ಲಿ ಹಂಚಿಕೊಂಡಿದೆ.
-
How is that for innovation? 😎@ashwinravi99 grabs 🎾 racquet while @klrahul11 faces volleys with his 🏏 #TeamIndia pic.twitter.com/03ZV003SdV
— BCCI (@BCCI) November 16, 2020 " class="align-text-top noRightClick twitterSection" data="
">How is that for innovation? 😎@ashwinravi99 grabs 🎾 racquet while @klrahul11 faces volleys with his 🏏 #TeamIndia pic.twitter.com/03ZV003SdV
— BCCI (@BCCI) November 16, 2020How is that for innovation? 😎@ashwinravi99 grabs 🎾 racquet while @klrahul11 faces volleys with his 🏏 #TeamIndia pic.twitter.com/03ZV003SdV
— BCCI (@BCCI) November 16, 2020
ಈ ವಿಡಿಯೋದಲ್ಲಿ 22 ಅಡಿಗಳ ಪಿಚ್ ಬದಲು 18 ಅಡಿಗಳ ಪಿಚ್ನಲ್ಲಿ ನಿಂತು ಅಶ್ವಿನ್ ರಾಕೆಟ್ ಬಳಸಿ ಚೆಂಡನ್ನು ಎದೆಯ ಮಟ್ಟಕ್ಕೆ ಹೋಗುವಂತೆ ರಾಹುಲ್ರತ್ತ ಹೊಡೆಯುತ್ತಾರೆ. ಈ ಎಸೆತಗಳನ್ನು ರಾಹುಲ್ ವಿವಿಧ ಬ್ಯಾಟಿಂಗ್ ಭಂಗಿಯಲ್ಲಿ ಎದುರಿಸಿದ್ದಾರೆ.
-
There is no better feeling than to play for your country. A long wait to bowl in the #TeamIndia nets finally ended today! Looking forward to our Australian tour. #teamindia #Mshami11 #SaddaPunjab pic.twitter.com/5LQbqeVIZa
— Mohammad Shami (@MdShami11) November 15, 2020 " class="align-text-top noRightClick twitterSection" data="
">There is no better feeling than to play for your country. A long wait to bowl in the #TeamIndia nets finally ended today! Looking forward to our Australian tour. #teamindia #Mshami11 #SaddaPunjab pic.twitter.com/5LQbqeVIZa
— Mohammad Shami (@MdShami11) November 15, 2020There is no better feeling than to play for your country. A long wait to bowl in the #TeamIndia nets finally ended today! Looking forward to our Australian tour. #teamindia #Mshami11 #SaddaPunjab pic.twitter.com/5LQbqeVIZa
— Mohammad Shami (@MdShami11) November 15, 2020
ಭಾರತದ ಪ್ರಮುಖ ಬೌಲರ್ಗಳಲ್ಲಿ ಒಬ್ಬರಾಗಿರುವ ಮೊಹಮ್ಮದ್ ಶಮಿ ಕೂಡ ಪಿಂಕ್ ಬಾಲ್ನಲ್ಲಿ ಬೌಲಿಂಗ್ ಪ್ರಾಕ್ಟೀಸ್ ಮಾಡುತ್ತಿರುವ ವಿಡಿಯೋವನ್ನು ತಮ್ಮ ಟ್ವಿಟರ್ನಲ್ಲಿ ಪೋಸ್ಟ್ ಮಾಡಿಕೊಂಡಿದ್ದು, ದೇಶಕ್ಕೋಶ್ಕರ ಆಡುವುದಕ್ಕಿಂತ ಉತ್ತಮ ಭಾವನೆ ಮತ್ತೊಂದಿಲ್ಲ. ಟೀಮ್ ಇಂಡಿಯಾ ನೆಟ್ಸ್ನಲ್ಲಿ ಬೌಲಿಂಗ್ ಮಾಡಬೇಕೆಂಬ ನನ್ನ ಬಹುದಿನದ ಕಾಯುವಿಕೆ ಇಂದಿಗೆ ಮುಗಿದಿದೆ ಎಂದು ಬರೆದುಕೊಂಡಿದ್ದಾರೆ.