ಹೈದರಾಬಾದ್: ವಿವಾದಿತ ಸ್ವಯಂಘೋಷಿತ ದೇವಮಾನವ ನಿತ್ಯಾನಂದ ಸದ್ಯ ಹೊಸ ರಾಷ್ಟ್ರ ಸ್ಥಾಪನೆ ಮಾಡಿರುವುದು ಭಾರಿ ಸುದ್ದಿ ಮಾಡುತ್ತಿದೆ. ಇದೇ ವಿಚಾರದ ಬಗ್ಗೆ ಟೀಂ ಇಂಡಿಯಾದ ಹಿರಿಯ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಟ್ವೀಟ್ ಒಂದನ್ನು ಮಾಡಿದ್ದಾರೆ.
ಅಮೆರಿಕಾದಲ್ಲಿ 'ಕೈಲಾಸ'ವನ್ನೇ ನಿರ್ಮಿಸಿದ ನಿತ್ಯಾನಂದ!
ಕರ್ನಾಟಕದಲ್ಲಿ ಅತ್ಯಾಚಾರ ಆರೋಪ ಎದುರಿಸುತ್ತಿರುವ ಬಿಡದಿ ಸ್ವಾಮಿ, ಈಕ್ವೆಡಾರ್ನಲ್ಲಿ ಖರೀದಿಸಿರುವ ದ್ವೀಪಕ್ಕೆ ಕೈಲಾಸ ಎಂದು ನಾಮಕರಣ ಮಾಡಿ, ಅದಕ್ಕೆ ಸ್ವಂತ ಧ್ವಜ, ಲಾಂಛನ ಪಾಸ್ಪೋರ್ಟ್ ಕೂಡ ಸಿದ್ದಪಡಿಸಿದ್ದಾರೆ ಎಂದು ವರದಿಯಾಗಿದೆ.
-
What is the procedure to get visa?? Or is it on arrival? 🤷🏼♂️ #Kailaasa
— Ashwin Ravichandran (@ashwinravi99) December 4, 2019 " class="align-text-top noRightClick twitterSection" data="
">What is the procedure to get visa?? Or is it on arrival? 🤷🏼♂️ #Kailaasa
— Ashwin Ravichandran (@ashwinravi99) December 4, 2019What is the procedure to get visa?? Or is it on arrival? 🤷🏼♂️ #Kailaasa
— Ashwin Ravichandran (@ashwinravi99) December 4, 2019
ಕೈಲಾಸಕ್ಕೆ ವೀಸಾ ಪಡೆಯುವ ವಿಧಾನಗಳು ಏನು..? ಅಥವಾ ಅದು ಬರುತ್ತಿದೆಯೇ..? ಎಂದು ಟ್ವಿಟರ್ನಲ್ಲಿ ಪ್ರಶ್ನೆ ಮಾಡಿರುವ ಅಶ್ವಿನ್ ಕೊನೆಯಲ್ಲಿ #Kailaasa ಎಂದು ಬರೆದಿದ್ದಾರೆ.
ಗುಜರಾತ್ ಪೊಲೀಸರು ನಿತ್ಯಾನಂದನ ಬಂಧನಕ್ಕೆ ಬಲೆ ಬೀಸಿದ್ದು, ಇದರ ನಡುವೆ ಆತನ ಹೊಸ ರಾಷ್ಟ್ರದ ಬಗ್ಗೆ ಸುದ್ದಿ ಮುನ್ನೆಲೆಗೆ ಬಂದಿದೆ. ಮೂಲಗಳ ಪ್ರಕಾರ ಒಂದು ವರ್ಷದ ಹಿಂದೆಯೇ ನಿತ್ಯಾನಂದ ಭಾರತ ತೊರೆದಿದ್ದ ಎನ್ನಲಾಗಿದೆ.