ಮೆಲ್ಬೋರ್ನ್: ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ ಏಕದಿನ ಕ್ರಿಕೆಟ್ ತಂಡಕ್ಕೆ ಹೊಸ ನಾಯಕನ ಆಯ್ಕೆ ಮಾಡಿದ್ದು, ಡುಪ್ಲೆಸಿಸ್ ಜಾಗಕ್ಕೆ ಕ್ವಿಂಟನ್ ಡಿಕಾಕ್ ಆಯ್ಕೆಗೊಂಡಿದ್ದಾರೆ.
ಫೆ. 4ರಿಂದ ವಿಶ್ವಕಪ್ ವಿಜೇತ ತಂಡ ಇಂಗ್ಲೆಂಡ್ ವಿರುದ್ಧ ಕೇಪ್ಟೌನ್ನಲ್ಲಿ ಮೂರು ಪಂದ್ಯಗಳ ಏಕದಿನ ಸರಣಿ ಆರಂಭಗೊಳ್ಳಲಿದ್ದು, ಅದಕ್ಕಾಗಿ ಈ ಬದಲಾವಣೆ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಜತೆಗೆ ಈಗಾಗಲೇ ಆಯ್ಕೆಯಾಗಿರುವ 15 ಸದಸ್ಯರ ತಂಡದಲ್ಲಿ ಫಾಫ್ ಡುಪ್ಲೆಸ್ರನ್ನು ತಂಡದಿಂದ ಕೈಬಿಟ್ಟಿದ್ದು, ನಾಲ್ವರು ಹೊಸಮುಖಗಳಿಗೆ ಅವಕಾಶ ನೀಡಲಾಗಿದೆ.
ಇದೇ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಕ್ರಿಕೆಟ್ ಮಂಡಳಿ ಡುಪ್ಲೆಸಿಸ್ ಹಾಗೂ ರಬಾಡಾ ಅತಿ ಹೆಚ್ಚು ಕ್ರಿಕೆಟ್ ಆಡಿರುವ ಕಾರಣ ಅವರಿಗೆ ವಿಶ್ರಾಂತಿ ನೀಡಲು ತೀರ್ಮಾನಿಸಿದ್ದು, ಇಂಗ್ಲೆಂಡ್ ವಿರುದ್ಧದ ಟಿ-20 ಸರಣಿಗಾಗಿ ಹೊಸ ಪ್ರತಿಭೆಗಳಿಗೆ ಅವಕಾಶ ನೀಡಲಾಗುವುದು ಎಂದು ತಿಳಿಸಿದ್ದಾರೆ. ಡಿಕಾಕ್ 2023 ವಿಶ್ವಕಪ್ ಕ್ರಿಕೆಟ್ವರೆಗೆ ತಂಡವನ್ನ ಮುನ್ನಡೆಸಲಿದ್ದಾರೆ ಎಂದು ತಿಳಿಸಿರುವ ಮಂಡಳಿ, ಡುಪ್ಲೆಸಿಸ್ ನಾಯಕತ್ವದ ವೇಳೆ ಕೆಲವೊಂದು ಒತ್ತಡಕ್ಕೆ ಒಳಗಾಗಿರುವ ಕಾರಣ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಇಂಗ್ಲೆಂಡ್ ವಿರುದ್ಧ ಏಕದಿನಕ್ಕೆ ಆಫ್ರಿಕಾ ತಂಡ
ಕ್ವಿಂಟನ್ ಡಿ ಕಾಕ್(ನಾಯಕ), ಟೆಂಬಾ ಬವುಮಾ, ಜಾರ್ನ್ ಫಾರ್ಚುನ್, ಬ್ಯೂರನ್ ಹೆಂಡ್ರಿಕ್ಸ್, ರೀಜಾ ಹೆಂಡ್ರಿಕ್ಸ್, ಸಿಸಂದಾ ಮಗಲಾ, ಜನ್ನೆಮನ್ ಮಲನ್, ಡೇವಿಡ್ ಮಿಲ್ಲರ್, ಆಂಡಿಲೆ ಫೆಹ್ಲುಕ್ವಾಯೊ, ಲುಂಗಿ ಎಂಗಿಡಿ, ತಬ್ರೈಜ್ ಶಮ್ಸಿ, ಲೂಥೊ ಸಿಪಮ್ಲಾ, ಜಾನ್-ಜಾನ್ ಸ್ಮಟ್ಸ್, ವ್ಯಾನ್ ಡೆರ್ ಡುಸೆನ್, ಕೈಲ್ ವೆರೆನ್ನೆ.