ಡರ್ಬನ್: ಕ್ವಿಂಟನ್ ಡಿ ಕಾಕ್ ಕೇವಲ 17 ಎಸೆತಗಳಲ್ಲಿ ಅರ್ಧಶತಕ ಸಿಡಿಸುವ ಮೂಲಕ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ದಕ್ಷಿಣ ಆಫ್ರಿಕಾ ಪರ ವೇಗವಾಗಿ ಈ ಸಾಧನೆ ಮಾಡಿದ ಬ್ಯಾಟ್ಸ್ಮನ್ ಎಂಬ ದಾಖಲೆಗೆ ಪಾತ್ರರಾಗಿದ್ದಾರೆ.
ಶುಕ್ರವಾರ ನಡೆದ ಇಂಗ್ಲೆಂಡ್ ವಿರುದ್ಧ ನಡೆದ 2ನೇ ಟಿ20 ವೇಳೆ ಡಿಕಾಕ್ ಅಬ್ಬರ ಬ್ಯಾಟಿಂಗ್ ಪ್ರದರ್ಶನ ತೋರಿದ್ದಾರೆ. ಆರಂಭಿಕನಾಗಿ ಕಣಕ್ಕಿಳಿದ ಡಿಕಾಕ್ ಕೇವಲ 17 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ್ದಲ್ಲದೆ ಒಟ್ಟಾರೆ 22 ಎಸೆತಗಳಲ್ಲಿ 8 ಸಿಕ್ಸರ್ ಹಾಗೂ 2 ಬೌಂಡರಿ ನೆರವಿನಿಂದ 65 ರನ್ಗಳಿಸಿದರು.
ಇವರ ಅಬ್ಬರದ ಆಟ ಹಾಗೂ ವಾನ್ ಡರ್ ಡಾಸ್ಸೆನ್ ಅವರ ಸಮಯೋಚಿತ ಆಟದ ಹೊರತಾಗಿಯೂ ಕೊನೆಯ ಎರಡು ಎಸೆತಗಳಲ್ಲಿ ಮೂರು ರನ್ ಗಳಿಸಲಾಗದೆ ದಕ್ಷಿಣ ಆಫ್ರಿಕಾ ತಂಡ 2 ರನ್ಗಳ ರೋಚಕ ಸೋಲುಕಂಡಿತು. ಇದೀಗ ಸರಣಿಯನ್ನು 1-1ರಲ್ಲಿ ಸಮಬಲವಾಗಿದ್ದು ಮುಂದಿನ ಪಂದ್ಯ ಮತ್ತಷ್ಟು ರೋಚಕತೆಯಿಂದ ಕೂಡಿರಲಿದೆ.
-
17 balls.
— ICC (@ICC) February 14, 2020 " class="align-text-top noRightClick twitterSection" data="
50.
What a player. #SAvENG pic.twitter.com/7qBqqqXNb3
">17 balls.
— ICC (@ICC) February 14, 2020
50.
What a player. #SAvENG pic.twitter.com/7qBqqqXNb317 balls.
— ICC (@ICC) February 14, 2020
50.
What a player. #SAvENG pic.twitter.com/7qBqqqXNb3
ವೇಗದ ಅರ್ಧಶತಕ ಸಿಡಿಸಿರುವ ದಕ್ಷಿಣ ಆಫ್ರಿಕಾದ ಬ್ಯಾಟ್ಸ್ಮನ್ಗಳು:
ಕ್ವಿಂಟನ್ ಡಿ ಕಾಕ್ vs ಇಂಗ್ಲೆಂಡ್- 17 ಎಸೆತ (ಡರ್ಬನ್ 2020)
ಎಬಿ ಡಿ ವಿಲಿಯರ್ಸ್ vs ಇಂಗ್ಲೆಂಡ್- 21 ಎಸೆತ(ಜೋಹನ್ ಬರ್ಗ್ 2016)
ಕ್ವಿಂಟನ್ ಡಿಕಾಕ್ vs ಇಂಗ್ಲೆಂಡ್- 21 ಎಸೆತ(ಮುಂಬೈ 2016)
ಎಬಿ ಡಿ ವಿಲಿಯರ್ಸ್ vs ಇಂಗ್ಲೆಂಡ್ 23 ಎಸೆತ(ಚಿತ್ತಗಾಂಗ್ 2014)
ಫಾಫ್ ಡು ಪ್ಲೆಸಿಸ್ vs ವೆಸ್ಟ್ ಇಂಡೀಸ್ 23 ಎಸೆತ (ಜೋಹನ್ ಬರ್ಗ್ 2015)