ಡರ್ಬನ್: ದಕ್ಷಿಣ ಆಫ್ರಿಕಾ ಮತ್ತು ಭಾರತ ನಡುವೆ ನಡೆದ 19 ವರ್ಷದೊಳಗಿನ ಚತುಷ್ಕೋನ ಏಕದಿನ ಕ್ರಿಕೆಟ್ ಸರಣಿಯ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ 69 ರನ್ಗಳ ಜಯ ದಾಖಲಿಸಿದೆ. ಈ ಮೂಲಕ ಸರಣಿಯನ್ನು ಕೈವಶ ಮಾಡಿಕೊಂಡಿದೆ.
ಟೀಂ ಇಂಡಿಯಾ ನೀಡಿದ್ದ 260 ರನ್ಗಳ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ ತಂಡ 43.1 ಓವರ್ಗಳಲ್ಲಿ 190 ರನ್ಗಳಿಗೆ ಆಲ್ಔಟ್ ಆಗುವ ಮೂಲಕ 69 ರನ್ಗಳಿಂದ ಸೋಲೊಪ್ಪಿಕೊಂಡಿತು. ದಕ್ಷಿಣ ಆಫ್ರಿಕಾ ತಂಡದ ಪರ ಜಾಕ್ ಲೀಸ್ 52, ಜೊನಾಥನ್ ಬರ್ಡ್ 39 ಮತ್ತು ಟಿಯಾನ್ ವ್ಯಾನ್ ವುರೆನ್ 24 ರನ್ ಗಳಿಸಿದ್ರೆ, ಟೀಂ ಇಂಡಿಯಾ ಪರ ವರುಣ್ ಅಂಕೋಲೆಕರ್ 4, ರವಿ ಬಿಷ್ನೋಯಿ 2 ವಿಕೆಟ್ ಪಡೆದು ಮಿಂಚಿದ್ರು.
-
Congratulations to the India U19 boys who seal a 69-run victory over the SA U19s in the #U19QuadSeries final 🎉🎉
— BCCI (@BCCI) January 9, 2020 " class="align-text-top noRightClick twitterSection" data="
Dhruv Jurel is adjudged the Man of the match for his match-winning 101 💪💪 pic.twitter.com/XGQPkLzqOS
">Congratulations to the India U19 boys who seal a 69-run victory over the SA U19s in the #U19QuadSeries final 🎉🎉
— BCCI (@BCCI) January 9, 2020
Dhruv Jurel is adjudged the Man of the match for his match-winning 101 💪💪 pic.twitter.com/XGQPkLzqOSCongratulations to the India U19 boys who seal a 69-run victory over the SA U19s in the #U19QuadSeries final 🎉🎉
— BCCI (@BCCI) January 9, 2020
Dhruv Jurel is adjudged the Man of the match for his match-winning 101 💪💪 pic.twitter.com/XGQPkLzqOS
ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ ನಡೆಸಿದ ಟೀಂ ಇಂಡಿಯಾ ತಂಡ 50 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 259 ರನ್ ಗಳಿಸಿತ್ತು. ಭಾರತ ತಂಡದ ಪರ ಧ್ರುವ್ ಜುರೆಲ್ ಆಕರ್ಷಕ ಶತಕ(101) ಸಿಡಿಸಿದ್ರು. ಇನ್ನುಳಿದಂತೆ ತಿಲಕ್ ವರ್ಮ 70, ಮತ್ತು ಸಿದ್ದೇಶ್ ವೀರ್ ಅಜೆಯ 48 ರನ್ ಗಳಿಸಿ ತಂಡದ ಮೊತ್ತ ಹೆಚ್ಚಿದರು. ದಕ್ಷಿಣ ಆಫ್ರಿಕಾ ಪರ ಜೆರಾಲ್ಡ್ ಕೊಟ್ಜೀ 3 ವಿಕೆಟ್ ಪಡೆದ್ರು.
ನ್ಯೂಜಿಲೆಂಡ್, ಜಿಂಬಾಂಬ್ವೆ, ದಕ್ಷಿಣ ಆಫ್ರಿಕಾ ಮತ್ತು ಭಾರತ ತಂಡದ ನಡುವೆ ನಡೆದ ಈ ಸರಣಿಯಲ್ಲಿ ದಕ್ಷಿಣ ಆಫ್ರಿಕಾ ಮತ್ತು ಭಾರತ ತಂಡ ಪ್ರಶಸ್ತಿ ಹಂತದ ಸುತ್ತಿಗೆ ಪ್ರವೇಶ ಪಡೆದಿದ್ದವು.