ETV Bharat / sports

ತಲೆಗೆ ಬಡಿದ ಕಾರ್ತಿಕ್​ ತ್ಯಾಗಿ ಎಸೆದ ಬೌನ್ಸರ್​ : ಅಹರ್ನಿಶಿ ಅಭ್ಯಾಸದಿಂದ ಪುಕೋವ್​ಸ್ಕಿ ಔಟ್​ - ಆಸ್ಟ್ರೇಲಿಯಾ ಎ vs ಭಾರತ ಎ 3 ದಿನಗಳ ಅಭ್ಯಾಸ ಪಂದ್ಯ ಡ್ರಾ

ಚೆಂಡು ಹೆಲ್ಮೆಟ್​ಗೆ ಬಡಿದ ತಕ್ಷಣ ಸಣ್ಣದಾಗಿ ಕನ್ಮಸನ್​(ತಲೆ ನೋವು)ನ ಲಕ್ಷಣಗಳನ್ನು ಆತ(ಪುಕೋವ್​ಸ್ಕಿ) ಅನುಭವಿಸಿದ್ದಾನೆ. ಆದರೆ, ಮೈದಾನವನ್ನು ಯಾವುದೇ ಭಯವಿಲ್ಲದೆ ತ್ಯಜಿಸಿದ್ದಾನೆ ಎಂದು cricket.com.au ಗೆ ನೀಡಿದ ಸಂದರ್ಶನದಲ್ಲಿ ವೈದ್ಯರ ತಂಡ ತಿಳಿಸಿದೆ..

ವಿಲ್ ಪುಕೋವ್​ಸ್ಕಿ ಕನ್ಕಶನ್​
ವಿಲ್ ಪುಕೋವ್​ಸ್ಕಿ ಕನ್ಕಶನ್​
author img

By

Published : Dec 8, 2020, 8:03 PM IST

ಸಿಡ್ನಿ : ಭಾರತದ ವಿರುದ್ಧ ಮುಂಬರುವ ಟೆಸ್ಟ್​ ಸರಣಿಯಲ್ಲಿ ಆರಂಭಿಕ ಸ್ಥಾನಕ್ಕಾಗಿ ಪೈಪೋಟಿ ನಡೆಸುತ್ತಿರುವ ಆಸ್ಟ್ರೇಲಿಯಾದ ಯುವ ಬ್ಯಾಟ್ಸ್​ಮನ್​ ವಿಲ್ ಪುಕೋವ್​ಸ್ಕಿ, ಮೊದಲ ಅಭ್ಯಾಸ ಪಂದ್ಯದಲ್ಲಿ ಬ್ಯಾಟಿಂಗ್ ಮಾಡುವ ವೇಳೆ ತಲೆಗೆ ಪೆಟ್ಟು ಬಿದ್ದಿರುವುದರಿಂದ ಡಿಸೆಂಬರ್​ 11ರಿಂದ ಆರಂಭವಾಗಲಿರುವ ಅಹರ್ನಿಶಿ ಅಭ್ಯಾಸ ಪಂದ್ಯದಿಂದ ಹೊರಗುಳಿಯಬೇಕಾಗಿದೆ.

ಕ್ರಿಕೆಟ್ ಆಸ್ಟ್ರೇಲಿಯಾದ ಶೆಫೀಲ್ಡ್ ಶೀಲ್ಡ್​ ಪ್ರಥಮ ದರ್ಜೆ ಟೂರ್ನಿಯಲ್ಲಿ ಬ್ಯಾಕ್​ ಟು ಬ್ಯಾಕ್​ ದ್ವಿಶತಕ ಸಿಡಿಸಿ ಮೊದಲ ಬಾರಿಗೆ ಆಸ್ಟ್ರೇಲಿಯಾ ತಂಡ ಸೇರಿಕೊಂಡಿರುವ ಪುಕೋವ್​ಸ್ಕಿ ಖಾಯಂ ಆರಂಭಿಕ ಜೋಬರ್ನ್ಸ್​ ಜೊತೆ ಪೈಪೋಟಿಯಲ್ಲಿದ್ದಾರೆ. ವಾರ್ನರ್​ ಗಾಯಕ್ಕೆ ತುತ್ತಾಗಿ ಮೊದಲ ಟೆಸ್ಟ್​ನಿಂದ ಹೊರಬಿದ್ದಿರುವುದರಿಂದ ಪುಕೋವ್​ಸ್ಕಿಗೆ ಅವಕಾಶ ಸಿಗಲಿದೆ ಎಂಬ ಮಾತು ಕೇಳಿ ಬಂದಿದೆ.

ಆದರೆ, ಮಂಗಳವಾರ ಆಸ್ಟ್ರೇಲಿಯಾ ಎ ಮತ್ತು ಭಾರತ ಎ ತಂಡಗಳ ನಡುವಿನ ಅಭ್ಯಾಸ ಪಂದ್ಯದ ಕೊನೆಯ ದಿನ ತಲೆಗೆ ಪೆಟ್ಟು ತಿಂದಿದ್ದಾರೆ. ಅವರು 29 ರನ್​ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದ ವೇಳೆ ಭಾರತೀಯ ಯುವ ಬೌಲರ್​ ಕಾರ್ತಿಕ್​ ತ್ಯಾಗಿ ಎಸೆದ ಚೆಂಡು ಹೆಲ್ಮೆಟ್​ಗೆ ಬಲವಾಗಿ ಬಿದ್ದಿರುವುದರಿಂದ ಅವರನ್ನು ಮುಂದಿನ ಅಭ್ಯಾಸ ಪಂದ್ಯಕ್ಕೆ ವಿಶ್ರಾಂತಿ ನೀಡಲಾಗಿದೆ.

ಚೆಂಡು ಹೆಲ್ಮೆಟ್​ಗೆ ಬಡಿದ ತಕ್ಷಣ ಸಣ್ಣದಾಗಿ ಕನ್ಮಸನ್​(ತಲೆ ನೋವು)ನ ಲಕ್ಷಣಗಳನ್ನು ಆತ(ಪುಕೋವ್​ಸ್ಕಿ) ಅನುಭವಿಸಿದ್ದಾನೆ. ಆದರೆ, ಮೈದಾನವನ್ನು ಯಾವುದೇ ಭಯವಿಲ್ಲದೆ ತ್ಯಜಿಸಿದ್ದಾನೆ ಎಂದು cricket.com.au ಗೆ ನೀಡಿದ ಸಂದರ್ಶನದಲ್ಲಿ ವೈದ್ಯರ ತಂಡ ತಿಳಿಸಿದೆ.

ಪುಕೋವ್​ಸ್ಕಿ ಪ್ರಸ್ತುತ ವೈದ್ಯರ ಮೇಲ್ವೀಚಾರಣೆಯಲ್ಲಿದ್ದಾರೆ. ಅವರು ಸಿಬ್ಬಂದಿ, ಸಹ ಆಟಗಾರರು ಮತ್ತು ಕುಟುಂಬದವರೊಂದಿಗೆ ಮುಕ್ತವಾಗಿ ಮಾತನಾಡಿದ್ದಾರೆ ಎಂದು ತಂಡದ ವೈದ್ಯ ಜಾನ್ ಆರ್ಚಾರ್ಡ್​ ತಿಳಿಸಿದ್ದಾರೆ. 22 ವರ್ಷದ ಯುವ ಆಟಗಾರ ಅಭ್ಯಾಸ ತಂಡಕ್ಕಾಗಿ ಘೋಷಿಸಿರುವ ತಂಡದಲ್ಲಿ ಇರುತ್ತಾರೆ. ಆದರೆ 3 ದಿನಗಳ ಅಭ್ಯಾಸ ಪಂದ್ಯದಲ್ಲಿ ಆಡುವುದಿಲ್ಲ ಎಂದು ಅವರು ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.