ಮುಂಬೈ: ವಿಂಡೀಸ್ ವಿರುದ್ಧದ ಟಿ-20 ಸರಣಿಯನ್ನು 3-0 ಯಲ್ಲಿ ಗೆದ್ದಿರುವ ಭಾರತ ತಂಡವನ್ನು ಹಾಗೂ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದ ಕೃನಾಲ್ ಪಾಂಡ್ಯರನ್ನು ಅವರ ಸಹೋದರ ಹಾರ್ದಿಕ್ ಪಾಂಡ್ಯ ಪ್ರಶಂಸಿಸಿದ್ದಾರೆ.
ಮೂರು ಪಂದ್ಯಗಳಲ್ಲೂ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದ ಪಾಂಡ್ಯ ಎರಡನೇ ಪಂದ್ಯದದಲ್ಲಿ ಕೊನೆಯ ಓವರ್ನಲ್ಲಿ 2 ಸಿಕ್ಸರ್ ಸಿಡಿಸಿ ತಂಡದ ಮೊತ್ತ ಹೆಚ್ಚಾಗಲು ಕಾರಣರಾಗಿದ್ದರು. ಅಲ್ಲದೆ ಮೊದಲನೇ ಪಂದ್ಯದಲ್ಲಿ 1 ವಿಕೆಟ್ ಹಾಗೂ ಎರಡನೇ ಪಂದ್ಯದಲ್ಲಿ 2 ವಿಕೆಟ್ ಪಡೆದಿದ್ದರು. ಈ ಸಾಧನೆಗೆ ಅವರನ್ನು ಸರಣಿ ಶ್ರೇಷ್ಠ ಪ್ರಶಸ್ತಿ ಒಲಿದು ಬಂದಿತ್ತು.
-
Congrats #TeamIndia 🇮🇳
— hardik pandya (@hardikpandya7) August 7, 2019 " class="align-text-top noRightClick twitterSection" data="
Dominating performances 👏🏆
And congratulations @krunalpandya24 on winning the Player of the Series award... so, so proud of you big bro ❤ pic.twitter.com/kqmxXtIK5v
">Congrats #TeamIndia 🇮🇳
— hardik pandya (@hardikpandya7) August 7, 2019
Dominating performances 👏🏆
And congratulations @krunalpandya24 on winning the Player of the Series award... so, so proud of you big bro ❤ pic.twitter.com/kqmxXtIK5vCongrats #TeamIndia 🇮🇳
— hardik pandya (@hardikpandya7) August 7, 2019
Dominating performances 👏🏆
And congratulations @krunalpandya24 on winning the Player of the Series award... so, so proud of you big bro ❤ pic.twitter.com/kqmxXtIK5v
ಭಾರತ ತಂಡ 3-0ಯಲ್ಲಿ ಸರಣಿ ಗೆದ್ದಿರುವುದನ್ನು ತಮ್ಮ ಟ್ವಿಟರ್ನಲ್ಲಿ ಶುಭಕೋರಿರುವ ಪಾಂಡ್ಯ, ಭಾರತ ತಂಡ ಏಕಪಕ್ಷೀಯವಾಗಿ ಸರಣಿಯಲ್ಲಿ ಪ್ರಾಬಲ್ಯ ಸಾಧಿಸಿದೆ. ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದ ಕೃನಾಲ್ ಪಾಂಡ್ಯಗೆ ಅಭಿನಂದನೆಗಳು, ನಿನ್ನ ಸಾಧನೆ ನನಗೆ ಹೆಮ್ಮೆ ತರಿಸಿದೆ ಅಣ್ಣ ಎಂದು ಟ್ವೀಟ್ ಮಾಡಿ ಸಂಭ್ರಮ ವ್ಯಕ್ತಪಡಿಸಿದ್ದಾರೆ.
ಮೊದಲ ಪಂದ್ಯದಲ್ಲಿ ಭಾರತ ತಂಡ 4 ವಿಕೆಟ್ಗಳಿಂದ ಗೆಲುವು ಸಾಧಿಸಿದರೆ, ಎರಡನೇ ಪಂದ್ಯವನ್ನು ಡಿಎಲ್ಎಸ್ ನಿಯಮದನ್ವಯ 22 ರನ್ಗಳ ಜಯ ಸಾಧಿಸಿತ್ತು. ಮೂರನೇ ಪಂದ್ಯದಲ್ಲಿ 7 ವಿಕೆಟ್ಗಳ ಜಯ ಸಾಧಿಸುವ ಮೂಲಕ ಸರಣಿಯನ್ನು ಕ್ಲೀನ್ ಸ್ವೀಪ್ ಸಾಧಿಸಿತ್ತು.