ETV Bharat / sports

ಭಾರತದ ವಿರುದ್ಧ ವೈಟ್​ವಾಷ್​​ಗೆ ಟಾಸ್​ ಕಾರಣ.. ಇನ್ಮುಂದೆ ಟಾಸ್​ಗೆ ಹೋಗಲ್ಲ ಎಂದ ಪ್ಲೆಸಿಸ್!​ - ಭಾರತ ದಕ್ಷಿಣಾ ಆಫ್ರಿಕಾ ಟೆಸ್ಟ್​ ಸರಣಿ

ಭಾರತದ ಪ್ರವಾಸದಲ್ಲಿ ಟಿ20- ಸರಣಿಯನ್ನು  ಸಮಬಲ ಸಾಧಿಸಿದ ಹರಿಣ ಪಡೆ ಭಾರತದ ವಿರುದ್ಧ ಮೂರೂ ಪಂದ್ಯಗಳಲ್ಲೂ ಕಳಪೆ ಬ್ಯಾಟಿಂಗ್​ ಪ್ರದರ್ಶನ ನೀಡಿ 3-0ಯಲ್ಲಿ ವೈಟ್​ವಾಶ್​ಗೆ ತುತ್ತಾಗಿತ್ತು. ಆದರೆ, ಈ ಎಲ್ಲಾ ಸೋಲಿಗೆ ಟಾಸ್​ ಸೂತಿದ್ದೇ ಕಾರಣ ಎಂದಿರುವ ಪ್ಲೆಸಿಸ್​ ಇನ್ಮುಂದೆ ತಾವು ವಿದೇಶಗಳಲ್ಲಿ ಟಾಸ್​ಗೆ ಹೋಗುವುದಿಲ್ಲ ಎಂದು ಶಪತ ಮಾಡಿದ್ದಾರೆ.

Du Plessis
author img

By

Published : Oct 28, 2019, 2:14 PM IST

ಕೇಪ್ ಟೌನ್: ಇತ್ತೇಚಿಗೆ ಮುಗಿದ ಭಾರತದ ವಿರುದ್ಧದ ಟೆಸ್ಟ್ ಸರಣಿಯಲ್ಲಿ ವೈಟ್​ವಾಶ್​ ಸೋಲಿಗೆ ತುತ್ತಾದ ದಕ್ಷಿಣ ಆಫ್ರಿಕಾ ತಂಡದ ಸೋಲಿಗೆ ಟಾಸ್​ ಕಾರಣ ಎಂದು ನಾಯಕ ಫಾಫ್​ ಡು ಪ್ಲೆಸಿಸ್​ ಹೇಳಿಕೆ ನೀಡಿ ಅಚ್ಚರಿ ಮೂಡಿಸಿದ್ದಾರೆ.

ಭಾರತದ ಪ್ರವಾಸದಲ್ಲಿ ಟಿ20- ಸರಣಿಯನ್ನು ಸಮಬಲ ಸಾಧಿಸಿದ ಹರಿಣ ಪಡೆ ಭಾರತದ ವಿರುದ್ಧ ಮೂರೂ ಪಂದ್ಯಗಳಲ್ಲೂ ಕಳಪೆ ಬ್ಯಾಟಿಂಗ್​ ಪ್ರದರ್ಶನ ನೀಡಿ 3-0ಯಲ್ಲಿ ವೈಟ್​ವಾಶ್​ಗೆ ತುತ್ತಾಗಿತ್ತು. ಆದರೆ, ಈ ಎಲ್ಲಾ ಸೋಲಿಗೆ ಟಾಸ್​ ಸೂತಿದ್ದೇ ಕಾರಣ ಎಂದಿರುವ ಪ್ಲೆಸಿಸ್​ ಇನ್ಮುಂದೆ ತಾವು ವಿದೇಶಗಳಲ್ಲಿ ಟಾಸ್​ಗೆ ಹೋಗುವುದಿಲ್ಲ ಎಂದು ಶಪತ ಮಾಡಿದ್ದಾರೆ.

ಆಫ್ರಿಕಾಗೆ ತೆರಳಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿರುವ ಡುಪ್ಲೆಸಿಸ್, ಸರಣಿಯ ಎಲ್ಲಾ ಪಂದ್ಯಗಳಲ್ಲೂ ಭಾರತ ತಂಡವೇ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿ 500 ರನ್​ ಬಾರಿಸಿ ಡಿಕ್ಲೇರ್​ ಮಾಡಿಕೊಂಡು, ಸಂಜೆಯ ಮಂದ ಬೆಳೆಕಿನಲ್ಲಿ ನಮ್ಮ 3 ವಿಕೆಟ್​ ಪಡೆಯುತ್ತಿದ್ದರು. ಮೂರನೇ ದಿನ ಬ್ಯಾಟಿಂಗ್​ ಮಾಡುವ ವೇಳೆ ನಮ್ಮ ತಂಡ ಒತ್ತಡಕ್ಕೆ ಒಳಗಾಗುತ್ತಿತ್ತು. ಇದೇ ನಮ್ಮ ಸೋಲಿಗೆ ಕಾರಣವಾಗುತ್ತಿತ್ತು. ಹೀಗೆ ಎಲ್ಲಾ ಪಂದ್ಯಗಳಲ್ಲೂ ನಮ್ಮ ತಂಡ ಇದೇ ಪರಿಸ್ಥಿತಿ ಎದುರಿಸಿತು ಎಂದು ದೂಷಣೆ ಮಾಡಿದ್ದಾರೆ.
ಸತತ ಎರಡು ಟೆಸ್ಟ್​ ಪಂದ್ಯದಲ್ಲಿ ಟಾಸ್​ ಸೋತಿದ್ದ ಪ್ಲೆಸಿಸ್​ ಮೂರನೇ ಟೆಸ್ಟ್​ ಪಂದ್ಯಕ್ಕೆ ಟಾಸ್​ಗಾಗಿ ಬವುಮಾರನ್ನು ಕರೆತಂದಿದ್ದರು. ಆದರೂ ಕೊಹ್ಲಿಯೇ ಟಾಸ್​ನಲ್ಲಿ ಗೆಲುವು ಸಾಧಿಸಿ ಬ್ಯಾಟಿಂಗ್​ ಆಯ್ದುಕೊಂಡಿದ್ದರು. ಪ್ಲೆಸಿಸ್​ ಈ ಹೇಳಿಕೆ ನೀಡುತ್ತಿದ್ದಂತೆ ಅಭಿಮಾನಿಗಳು ಟ್ವಿಟರ್​ನಲ್ಲಿ ಟ್ರೋಲ್​ ಮಾಡುತ್ತಿದ್ದು, ಸರಣಿ ಸೋಲನ್ನು ತಡೆದುಕೊಳ್ಳಲಾಗದೆ ಕುಂಟು ನೆಪ ಹೇಳುತ್ತಿದ್ದಾರ ಎಂದು ಕಿಡಿಕಾರುತ್ತಿದ್ದಾರೆ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.