ETV Bharat / sports

ಪೃಥ್ವಿ ಶಾ ಮ್ಯಾಚ್​ ವಿನ್ನರ್, ಆದ್ರೆ ಗಿಲ್​ ತಂಡದಲ್ಲಿರುವುದರಿಂದ ಮತ್ತಷ್ಟು ದಿನ ಕಾಯಲೇಬೇಕು: ಲಕ್ಷ್ಮಣ್​

author img

By

Published : Mar 24, 2021, 8:12 PM IST

ಆಸ್ಟ್ರೇಲಿಯಾ ಪ್ರವಾಸದಲ್ಲಿ ಕೇವಲ ಒಂದು ಪಂದ್ಯದಲ್ಲಿ ಅವಕಾಶ ಪಡೆದು ಕೇವಲ 0 ಮತ್ತು 4 ರನ್​ಗಳಿಗೆ ವಿಕೆಟ್​ ಒಪ್ಪಿಸಿದ್ದರಿಂದ ಮುಂದಿನ ಮೂರು ಪಂದ್ಯಗಳಲ್ಲಿ ಅವಕಾಶ ಪಡೆಯುವಲ್ಲಿ ವಿಫಲರಾಗಿದ್ದರು. ಆದರೆ ಅಲ್ಲಿಂದ ಬಂದ ನಂತರ ತಮ್ಮ ತಪ್ಪುಗಳನ್ನು ತಿದ್ದಿಕೊಂಡಿರುವ ಶಾ, ವಿಜಯ ಹಜಾರೆ ಟ್ರೋಫಿಯಲ್ಲಿ 165.40 ಸರಾಸರಿಯಲ್ಲಿ 827 ರನ್ ​ಗಳಿಸಿದ್ದರು. ಇದರಲ್ಲಿ 4 ಶತಕ ಕೂಡ ಸೇರಿದೆ.

ಶುಬ್ಮನ್ ಗಿಲ್ vsಪೃಥ್ವಿ ಶಾ
ಶುಬ್ಮನ್ ಗಿಲ್ vsಪೃಥ್ವಿ ಶಾ

ಮುಂಬೈ: ವಿಜಯ್ ಹಜಾರೆ ಟ್ರೋಫಿಯಲ್ಲಿ ಸ್ಫೋಟಕ ಬ್ಯಾಟಿಂಗ್ ಮೂಲಕ ಅದ್ಭುತ ಫಾರ್ಮ್​ನಲ್ಲಿರುವ ಯುವ ಬ್ಯಾಟ್ಸ್​ಮನ್ ಪೃಥ್ವಿ ಶಾ, ಭಾರತ ತಂಡವನ್ನು ಸೇರಬೇಕಾದರೆ ಕಾಯುವ ಅವಶ್ಯಕತೆಯಿದೆ ಎಂದು ಮಾಜಿ ಕ್ರಿಕೆಟಿಗ ವಿವಿಎಸ್​ ಲಕ್ಷ್ಮಣ್ ಅಭಿಪ್ರಾಯಪಟ್ಟಿದ್ದಾರೆ.

ಆಸ್ಟ್ರೇಲಿಯಾ ಪ್ರವಾಸದಲ್ಲಿ ಕೇವಲ ಒಂದು ಪಂದ್ಯದಲ್ಲಿ ಅವಕಾಶ ಪಡೆದು ಕೇವಲ 0 ಮತ್ತು 4 ರನ್​ಗಳಿಗೆ ವಿಕೆಟ್​ ಒಪ್ಪಿಸಿದ್ದರಿಂದ ಮುಂದಿನ ಮೂರು ಪಂದ್ಯಗಳಲ್ಲಿ ಅವಕಾಶ ಪಡೆಯುವಲ್ಲಿ ವಿಫಲರಾಗಿದ್ದರು. ಆದರೆ ಅಲ್ಲಿಂದ ಬಂದ ನಂತರ ತಮ್ಮ ತಪ್ಪುಗಳನ್ನು ತಿದ್ದಿಕೊಂಡಿರುವ ಶಾ, ವಿಜಯ ಹಜಾರೆ ಟ್ರೋಫಿಯಲ್ಲಿ 165.40 ಸರಾಸರಿಯಲ್ಲಿ 827 ರನ್ ​ಗಳಿಸಿದ್ದರು. ಇದರಲ್ಲಿ 4 ಶತಕ ಕೂಡ ಸೇರಿದೆ.

ವಿವಿಎಸ್​ ಲಕ್ಷ್ಮಣ್
ವಿವಿಎಸ್​ ಲಕ್ಷ್ಮಣ್

ಆದರೆ ಈ ಪ್ರದರ್ಶನವನ್ನು ಆಯ್ಕೆಗಾರರು ಇಂಗ್ಲೆಂಡ್​ ವಿರುದ್ಧದ ಏಕದಿನ ಸರಣಿ ವೇಳೆ ಪರಿಗಣಿಸದೆ ಅನುಭವಿಗಳಿಗೆ ಮತ್ತು ಉತ್ತಮ ಫಾರ್ಮ್​ನಲ್ಲಿರುವ ಶುಬ್ಮನ್ ಗಿಲ್​ ಮತ್ತು ಸೂರ್ಯಕುಮಾರ್ ಯಾದವ್​ಗೆ ಅವಕಾಶ ನೀಡಿದ್ದರು. ಅಲ್ಲದೆ ಶುಬ್ಮನ್ ಗಿಲ್​ ಆಸ್ಟ್ರೇಲಿಯಾದಲ್ಲಿ 6 ಇನ್ನಿಂಗ್ಸ್​ಗಳಲ್ಲಿ 259 ರನ್​ ಸಿಡಿಸಿ ಸರಣಿ ಗೆಲ್ಲುವಲ್ಲಿ ನೆರವಾಗಿದ್ದರು. ಹಾಗಾಗಿ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ರೋಹಿತ್ ಮತ್ತು ಶಿಖರ್​ ಧವನ್​ಗೆ ಬ್ಯಾಕ್​ ಅಪ್ ಆಗಿ ಟೀಮ್ ಇಂಡಿಯಾದಲ್ಲಿ ಅವಕಾಶ ಪಡೆದಿದ್ದಾರೆ.

ಇದನ್ನು ಓದಿ:ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಿಂದ ಅಯ್ಯರ್​ ಔಟ್​.. 14ನೇ ಐಪಿಎಲ್​ಗೂ ಡೌಟ್‌!

"ವಿಜಯ್ ಹಜಾರೆಯಲ್ಲಿ ಮುಂಬೈ ತಂಡದ ಪರ ಪೃಥ್ವಿ ಶಾ ನೀಡಿದ ಪ್ರದರ್ಶನ ಮತ್ತು ಅದರಲ್ಲೂ ನಾಯಕನಾಗಿ ಅದ್ಭುತವಾಗಿತ್ತು. ನನ್ನ ಪ್ರಕಾರ ಅವರು ಏಕದಿನ ತಂಡಕ್ಕೆ ಆಯ್ಕೆಯಾಗಲು ಅರ್ಹರಾಗಿದ್ದರು. ಆದರೆ ಆಯ್ಕೆಗಾರರು ತಂಡದಲ್ಲಿ ಉತ್ತಮ ಪ್ರದರ್ಶನ ತೋರಿದವರ ಸಾಲು ಮಾಡಿದ್ದಾರೆ. ಹಾಗಾಗಿ ಶಾಗಿಂತ ಮೊದಲೇ ಕ್ಯೂನಲ್ಲಿನಲ್ಲಿದ್ದವರಿಗೆ ಅವಕಾಶ ನೀಡಲಾಗಿದೆ" ಎಂದು ಲಕ್ಷ್ಮಣ್ ತಿಳಿಸಿದ್ದಾರೆ.

ಪೃಥ್ವಿ ಶಾ ಆಯ್ಕೆ ಸಾಲಿನಲ್ಲಿ ಪ್ರಸ್ತುತ ಹಿಂದಿದ್ದಾರೆ. ಏಕೆಂದರೆ ನಾವು ಶುಬ್ಮನ್ ಗಿಲ್​ರನ್ನು ಹೊಂದಿದ್ದೇವೆ, ಅವರು ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಂಡಿದ್ದಾರೆ. ಅದರಲ್ಲೂ ತಂಡದಲ್ಲಿ ಶಿಖರ್ ಧವನ್, ರಾಹುಲ್​, ರೋಹಿತ್​ ಅವರಂತಹ ಅನುಭವಿ ಆರಂಭಿಕರಿದ್ದಾರೆ. ಒಂದು ತಂಡದಲ್ಲಿ ಬಹುಶಃ 3 ಅಥವಾ 4 ಆರಂಭಿಕರನ್ನು ಹೊಂದಬಹುದು ಎಂದು ಲಕ್ಷ್ಮಣ್, ಶಾ ಏಕೆ ಕಾಯಬೇಕು ಎನ್ನುವುದಕ್ಕೆ ಸ್ಪಷ್ಟನೆ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.