ETV Bharat / sports

ಧವನ್​, ಪ್ರಸಿದ್​​ ಕೃಷ್ಣ ಮಿಂಚು.. ಇಂಗ್ಲೆಂಡ್ ವಿರುದ್ಧ 66 ರನ್​ಗಳಿಂದ ಜಯ ಸಾಧಿಸಿದ ಭಾರತ!

ಟಾಸ್ ಸೋತು ಬ್ಯಾಟಿಂಗ್ ನಡೆಸಿದ ಭಾರತ ತಂಡ 50 ಓವರ್​ಗಳಲ್ಲಿ 5 ವಿಕೆಟ್ ಕಳೆದುಕೊಂಡು 317 ರನ್​ಗಳಿಸಿತ್ತು. 318ರನ್​ಗಳ ಗುರಿ ಬೆನ್ನತ್ತಿದ ಪ್ರವಾಸಿ ತಂಡ 251 ರನ್​ಗಳಿಗೆ ಆಲೌಟ್ ಆಗುವ ಮೂಲಕ 66 ರನ್​ಗಳಿಂದ ಸೋಲು ಕಂಡಿತು..

ಭಾರತಕ್ಕೆ 66 ರನ್​ಗಳ ಜಯ
ಭಾರತಕ್ಕೆ 66 ರನ್​ಗಳ ಜಯ
author img

By

Published : Mar 23, 2021, 10:22 PM IST

ಪುಣೆ : ಇಂಗ್ಲೆಂಡ್ ವಿರುದ್ಧ ಸಂಘಟಿತ ಪ್ರದರ್ಶನ ತೋರಿದ ಟೀಂ ಇಂಡಿಯಾ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ 66 ರನ್​ಗಳಿಂದ ಗೆಲುವು ಸಾಧಿಸಿ 1-0ಯಲ್ಲಿ ಮುನ್ನಡೆ ಸಾಧಿಸಿದೆ.

ಟಾಸ್ ಸೋತು ಬ್ಯಾಟಿಂಗ್ ನಡೆಸಿದ ಭಾರತ ತಂಡ 50 ಓವರ್​ಗಳಲ್ಲಿ 5 ವಿಕೆಟ್ ಕಳೆದುಕೊಂಡು 317 ರನ್​ಗಳಿಸಿತ್ತು. 318ರನ್​ಗಳ ಗುರಿ ಬೆನ್ನತ್ತಿದ ಪ್ರವಾಸಿ ತಂಡ 251 ರನ್​ಗಳಿಗೆ ಆಲೌಟ್ ಆಗುವ ಮೂಲಕ 66 ರನ್​ಗಳಿಂದ ಸೋಲು ಕಂಡಿತು.

318ರನ್​ಗಳ ಬೃಹತ್ ಗುರಿ ಬೆನ್ನತ್ತಿದ ಇಂಗ್ಲೆಂಡ್​ಗೆ ಜಾನಿ ಬೈರ್ಸ್ಟೋವ್ ಮತ್ತು ಜೇಸನ್ ರಾಯ್​ ಸ್ಫೋಟಕ ಆರಂಭ ಒದಗಿದರು. ಅವರಿಬ್ಬರು ಮೊದಲ ವಿಕೆಟ್​ ಜೊತೆಯಾಟದಲ್ಲಿ ಕೇವಲ 14.2 ಓವರ್​ಗಳಲ್ಲಿ 135 ರನ್​ ಸೂರೆಗೈದರು. ರಾಯ್​ 35 ಎಸೆತಗಳಲ್ಲಿ 7 ಬೌಂಡರಿ ಮತ್ತು 1 ಸಿಕ್ಸರ್​ ಸಹಿತ 46 ರನ್​ಗಳಿಸಿದ್ದ ವೇಳೆ ಕನ್ನಡಿಗ ಪ್ರಸಿದ್​ ಕೃಷ್ಣ ಬೌಲಿಂಗ್​ನಲ್ಲಿ ಸೂರ್ಯಕುಮಾರ್ ಯಾದವ್​ಗೆ ಕ್ಯಾಚ್​ ನೀಡಿ ನಿರ್ಗಮಿಸಿದರು. ನಂತರ ಬಂದ ಬೆನ್ ಸ್ಟೋಕ್ಸ್​ ಕೂಡ ಕೇವಲ 1 ರನ್​ಗಳಿಸಿ ಕೃಷ್ಣಗೆ ಎರಡನೇ ಬಲಿಯಾದರು.

ಇದನ್ನು ಓದಿ:ಧವನ್​ರ​ 98 ರನ್​ ಸೇರಿ ನಾಲ್ವರ ಅರ್ಧಶತಕ : ಇಂಗ್ಲೆಂಡ್​ಗೆ 318 ರನ್​ಗಳ ಟಾರ್ಗೆಟ್ ನೀಡಿದ ಭಾರತ

ಕೇವಲ 66 ಎಸೆತಗಳಲ್ಲಿ 7 ಸಿಕ್ಸರ್​ ಮತ್ತು 6 ಬೌಂಡರಿಗಳೊಂದಿಗೆ 94 ರನ್​ಗಳಿಸಿದ್ದ ಬೈರ್ಸ್ಟೋವ್​ ಔಟಾಗುತ್ತಿದ್ದಂತೆ ಇಂಗ್ಲೆಂಡ್​ ಪತನ ಆರಂಭವಾಯಿತು. ನಂತರ ಬಂದಂತ ಬ್ಯಾಟ್ಸ್​ಮನ್ಸ್​ಗಳು ಭಾರತೀಯರ ದಾಳಿಗೆ ಹೆಚ್ಚು ಪ್ರತಿರೋಧ ತೋರಲಾಗಲಿಲ್ಲ. ಮಾರ್ಗನ್ 22, ಬಟ್ಲರ್ 2, ಸ್ಯಾಮ್ ಬಿಲ್ಲಿಂಗ್ಸ್​ 18, ಮೋಯಿನ್ ಅಲಿ 30, ಸ್ಯಾಮ್ ಕರ್ರನ್​ 12, ಟಾಮ್ ಕರ್ರನ್​ 11 ಹಾಗೂ ರಶೀದ್​ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು.

ಏಕದಿನ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದ ಪ್ರಸಿದ್ ಕೃಷ್ಣ 54 ರನ್​ ನೀಡಿ 4 ವಿಕೆಟ್ ಪಡೆದು ಗೆಲುವಿನ ರೂವಾರಿಯಾದರು. ಇವರಿಗೆ ಸಾಥ್ ನೀಡಿದ ಶಾರ್ದುಲ್ ಠಾಕೂರ್​ 37ಕ್ಕೆ 3, ಭುವನೇಶ್ವರ್ ಕುಮಾರ್​ 30ಕ್ಕೆ 2 ಕೃನಾಲ್ ಪಾಂಡ್ಯ 59ಕ್ಕೆ 1 ವಿಕೆಟ್​ ಪಡೆದು ಮಿಂಚಿದರು.

ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ್ದ ಭಾರತ ತಂಡ ಶಿಖರ್ ಧವನ್​ (98) ,ವಿರಾಟ್ ಕೊಹ್ಲಿ(56 ರನ್​, ರಾಹುಲ್(62) ಮತ್ತು ಕೃನಾಲ್(58) ಅರ್ಧಶತಕಗಳ ನೆರವಿನಿಂದ 50 ಓವರ್​ಗಳಲ್ಲಿ 5 ವಿಕೆಟ್ ಕಳೆದುಕೊಂಡು 317 ರನ್​ಗಳಿಸಿತ್ತು.

ಇದನ್ನು ಓದಿ:ಪದಾರ್ಪಣೆ ಮಾಡಿದ ಪಂದ್ಯದಲ್ಲೇ ವಿಶ್ವ ದಾಖಲೆ ಬರೆದ ಕೃನಾಲ್ ಪಾಂಡ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.