ETV Bharat / sports

ಪ್ರಸಾದ್​, ಜೋಶಿ, ಲಕ್ಷ್ಮಣ್​ ನಡುವೆ ನೇರ ಫೈಟ್​... ಇಬ್ಬರು ಕನ್ನಡಿಗರಿಗೆ​​ ಆಯ್ಕೆ ಸಮಿತಿ ಬಾಸ್​ ಪಟ್ಟ!? - ಭಾರತೀಯ ಕ್ರಿಕೆಟ್ ಮಂಡಳಿ

ಭಾರತೀಯ ಕ್ರಿಕೆಟ್​ ಆಯ್ಕೆ ಮಂಡಳಿಗೆ ಹೊಸ ಸಮಿತಿ ಇಂದು ಆಯ್ಕೆಗೊಳ್ಳಲಿದ್ದು, ಇಬ್ಬರು ಕನ್ನಡಿಗರು ಸೇರಿದಂತೆ ಮೂವರು ರೇಸ್​ನಲ್ಲಿದ್ದಾರೆ.

Prasad
ವೆಂಕಟೇಶ್​ ಪ್ರಸಾದ್​
author img

By

Published : Mar 4, 2020, 9:16 AM IST

ಮುಂಬೈ: ಭಾರತೀಯ ಆಯ್ಕೆ ಸಮಿತಿಯ ಎರಡು ಸ್ಥಾನಗಳಿಗೆ ಸಲ್ಲಿಕೆಯಾಗಿದ್ದ ಹಲವು ಅರ್ಜಿಗಳಲ್ಲಿ ಇದೀಗ ಮೂವರು ಅಭ್ಯರ್ಥಿಗಳ ಹೆಸರು ಅಂತಿಮಗೊಳಿಸಲಾಗಿದ್ದು, ಇದರಲ್ಲಿ ಇಬ್ಬರಿಗೆ ಸ್ಥಾನ ಸಿಗಲಿದ್ದು, ಕನ್ನಡಿಗರಾದ ಸುನಿಲ್​ ಜೋಶಿ ಹಾಗೂ ವೆಂಕಟೇಶ್​ ಪ್ರಸಾದ್​ಗೆ ಕ್ರಿಕೆಟ್​ ಆಯ್ಕೆ ಸಮಿತಿಯಲ್ಲಿ ಅವಕಾಶ ನೀಡುವುದು ಬಹುತೇಕ ಖಚಿತ ಎಂಬ ಮಾತು ಕೇಳಿ ಬರುತ್ತಿವೆ.

chief selector
ರೇಸ್​ನಲ್ಲಿ ವೆಂಕಟೇಶ್​ ಪ್ರಸಾದ್​

ಬಿಸಿಸಿಐ ಆಯ್ಕೆ ಸಮಿತಿ ಮಂಡಳಿ ಅಧ್ಯಕ್ಷ ಸ್ಥಾನಕ್ಕಾಗಿ ಅಜಿತ್​ ಅಗರ್ಕರ್​, ಸುನಿಲ್​ ಜೋಶಿ, ವೆಂಕಟೇಶ್​ ಪ್ರಸಾದ್​, ಚೇತನ್​ ಶರ್ಮಾ, ನಯನ್​ ಮೊಂಗಿಯಾ, ಎಲ್​ ಶಿವರಾಮಕೃಷ್ಣನ್​, ರಾಜೇಶ್​ ಚೌಹಾಣ್​, ಗ್ಯಾನೇಂದ್ರ ಪಾಂಡೆ, ಪ್ರೀತಮ್​ ಗಂಧೆ ನಡುವೆ ನೇರ ಪೈಪೋಟಿ ಉಂಟಾಗಿತ್ತು. ಆದರೆ, ಇದೀಗ ಕ್ರಿಕಟ್​​ ಸಲಹಾ ಸಮಿತಿ ಮೂವರು ಅಭ್ಯರ್ಥಿಗಳ ಹೆಸರು ಫೈನಲ್​ ಮಾಡಿದೆ. ನಿನ್ನೆ ಸಭೆ ನಡೆಸಿದ ಮದನ್​​ ಲಾಲ್​, ಆರ್​ಪಿ ಸಿಂಗ್​ ಹಾಗೂ ಸುಲಕ್ಷನ್​ ನಾಯ್ಕ್​ ಮೂವರು ಹೆಸರು ಅಂತಿಮ ಗೊಳಿಸಿದ್ದಾರೆ.

ಟೆಸ್ಟ್​​ ಕ್ರಿಕೆಟ್​ನಲ್ಲಿ ಅತಿ ಹೆಚ್ಚು ಅನುಭವ ಹೊಂದಿರುವ ವೆಂಕಟೇಶ್​ ಪ್ರಸಾದ್​, ಸುನೀಲ್​ ಜೋಶಿ ಹಾಗೂ ಲಕ್ಷ್ಮಣ್​ ಶಿವರಾಮಕೃಷ್ಣನ್​ ಅಂತಿಮ ರೇಸ್​ನಲ್ಲಿದ್ದು, ವೆಂಕಟೇಶ್​ ಪ್ರಸಾದ್​ ಆಯ್ಕೆಯಾಗುವ ಸಾಧ್ಯತೆ ದಟ್ಟವಾಗಿದೆ.

Cricket Advisory Committee
ಕ್ರಿಕೆಟ್​ ಸಲಹಾ ಸಮಿತಿ

ಇದೇ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಭಾರತೀಯ ಕ್ರಿಕೆಟ್​ ಮಂಡಳಿ ಅಧ್ಯಕ್ಷ ಸೌರವ್​ ಗಂಗೂಲಿ ಹೊಸದಾಗಿ ಆಯ್ಕೆಗೊಳ್ಳುವ ಕ್ರಿಕೆಟ್​ ಆಯ್ಕೆ ಸಮಿತಿ ಅಧ್ಯಕ್ಷರೇ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಗಾಗಿ ತಂಡವನ್ನ ಆಯ್ಕೆ ಮಾಡಲಿದ್ದು, ಇಂದು ಆಯ್ಕೆ ಸಮಿತಿ ಸದಸ್ಯರ ಆಯ್ಕೆ ಅಂತಿಮವಾಗಲಿದೆ ಎಂದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.