ನವದೆಹಲಿ: ಕೋವಿಡ್ 19 ಲಸಿಕೆ ವಿಶ್ವದ ನಾನಾ ದೇಶಗಳಿಗೆ ತಲುಪಿಸುತ್ತಿರುವುದಕ್ಕೆ ಭಾರತವನ್ನು ಕೊಂಡಾಡಿ ಟ್ವೀಟ್ ಮಾಡಿದ್ದ ಇಂಗ್ಲೆಂಡ್ ಮಾಜಿ ಕ್ರಿಕೆಟಿಗ ಕೆವಿನ್ ಪೀಟರ್ಸನ್ ಅವರ ಭಾರತದ ಪ್ರಧಾನಿ ನರೇಂದ್ರ ಮೋದಿ ಪ್ರತಿಕ್ರಿಯಿಸಿದ್ದು, ಭಾರತದ ಮೇಲಿನ ನಿಮ್ಮ ಪ್ರೀತಿ ಮೆಚ್ಚುವಂತಹದ್ದು ಎಂದಿದ್ದಾರೆ.
ಫೆಬ್ರವರಿ 1ರಂದು ವಿದೇಶಾಂಗ ಸಚಿವ ಡಾ.ಎಸ್ ಜೈಶಂಕರ್ ಭಾರತದಲ್ಲಿ ತಯಾರಾಗಿರುವ ಕೋವಿಡ್ ಲಸಿಕೆ ಜೋಹನ್ಬರ್ಗ್ಸ್ ತಲುಪಿದೆ ಎಂದು ಟ್ವೀಟ್ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ದಕ್ಷಿಣ ಆಫ್ರಿಕಾ ಮೂಲದ ಇಂಗ್ಲೆಂಡ್ ಕ್ರಿಕೆಟರ್ ಕೆವಿನ್ ಪೀಟರ್ಸನ್, ಭಾರತದ ಔದಾರ್ಯ ಮತ್ತು ದಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ, ನನ್ನ ಪ್ರೀತಿಯ ದೇಶ ಭಾರತ ಎಂದು ಟ್ವೀಟ್ ಮಾಡಿದ್ದರು.
-
Glad to see your affection towards India. :)
— Narendra Modi (@narendramodi) February 3, 2021 " class="align-text-top noRightClick twitterSection" data="
We believe that the world is our family and want to play our role in strengthening the fight against COVID-19. https://t.co/zwpB3CNxLG
">Glad to see your affection towards India. :)
— Narendra Modi (@narendramodi) February 3, 2021
We believe that the world is our family and want to play our role in strengthening the fight against COVID-19. https://t.co/zwpB3CNxLGGlad to see your affection towards India. :)
— Narendra Modi (@narendramodi) February 3, 2021
We believe that the world is our family and want to play our role in strengthening the fight against COVID-19. https://t.co/zwpB3CNxLG
ಈ ಟ್ವೀಟ್ಗೆ ಪ್ರತಿಕ್ರಿಯಿಸಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ, ಭಾರತದ ಮೇಲಿನ ನಿಮ್ಮ ಪ್ರೀತಿಯನ್ನು ನೋಡಿ ತುಂಬಾ ಸಂತೋಷವಾಗಿದೆ. ಇಡೀ ಜಗತ್ತೇ ನಮ್ಮ ಕುಟುಂಬ ಎಂದು ನಾವು ಭಾವಿಸಿದ್ದೇವೆ. ಕೋವಿಡ್ 19 ವಿರುದ್ಧ ಹೋರಾಟದಲ್ಲಿ ನಮ್ಮ ಪಾತ್ರವನ್ನು ಬಲಿಷ್ಠವಾಗಿರಿಸಲು ಬಯಸುತ್ತೇವೆ ಎಂದು ಟ್ವೀಟ್ ಮಾಡಿದ್ದಾರೆ.
ಈ ಟ್ವೀಟ್ಗೆ ಪೀಟರ್ಸನ್ ಕೈ ಮುಗಿಯುತ್ತಿರುವ ಇಮೋಜಿಗಳ ಮೂಲಕ ಧನ್ಯವಾದ ಅರ್ಪಿಸಿದ್ದಾರೆ.