ಮ್ಯಾಂಚೆಸ್ಟರ್: 2019 ರ ವಿಶ್ವಕಪ್ ನೀರಸ ಪ್ರದರ್ಶನ ತೋರುತ್ತಿದ್ದ ದ.ಆಫ್ರಿಕಾ ತಂಡ ಆಸ್ಟ್ರೇಲಿಯಾ ವಿರುದ್ಧದ ಕೊನೆಯ ಲೀಗ್ ಪಂದ್ಯದಲ್ಲಿ 325 ರನ್ಗಳಿಸಿದೆ.
ಟಾಸ್ ಗೆದ್ದು ಬ್ಯಾಟಿಂಗ್ ನಡೆಸಿದ ದಕ್ಷಿಣ ಆಫ್ರಿಕಾ ತಂಡಕ್ಕೆ ನಾಯಕ ಪ್ಲೆಸಿಸ್(100) ಶತಕ, ಡಿಕಾಕ್(52) ಹಾಗೂ ಡಾಸೆನ್ (95) ಅರ್ಧಶತಕದ ನೆರವಿನಿಂದ 325 ರನ್ಗಳ ಬೃಹತ್ ಮೊತ್ತ ದಾಖಲಿಸಿತು.
8 ಪಂದ್ಯಗಳಲ್ಲಿ 5 ಪಂದ್ಯದಲ್ಲಿ ಸೋಲನುಭವಿಸಿದ್ದ ಹರಿಣಗಳು ತಮ್ಮ ಕೊನೆಯ ಪಂದ್ಯದಲ್ಲಿ ಗೆಲ್ಲಲೇ ಬೇಕೆಂಬ ಆತ್ಮವಿಶ್ವಾಸದಲ್ಲಿ ಆರಂಭದಿಂದಲೇ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ತೋರಿದರು. ಆರಂಭಿಕರಾದ ಡಿಕಾಕ್ 51 ಎಸೆತಗಳಲ್ಲಿ 7 ಬೌಂಡರಿ ಸಹಿತ 52 ರನ್ ಸಿಡಿಸಿ ಮೊದಲ ವಿಕೆಟ್ಗೆ ಮ್ಯಾರ್ಕ್ರಮ್(34) ಜೊತೆಗೆ 79 ರನ್ಗಳ ಜೊತೆಯಾಟ ನೀಡಿದರು. ಇವರಿಬ್ಬರನ್ನು ಆಸೀಸ್ ಸ್ಪಿನ್ನರ್ ನಾಥನ್ ಲಿಯಾನ್ ಪೆವಿಲಿಯನ್ಗಟ್ಟಿದರು.
-
#FafDuPlessis 💯
— ICC (@ICC) July 6, 2019 " class="align-text-top noRightClick twitterSection" data="
van der Dussen 9️⃣5️⃣
South Africa post 325/6 in their final #CWC19 game. Can Australia chase this target? #AUSvSA pic.twitter.com/aUICRFVpj7
">#FafDuPlessis 💯
— ICC (@ICC) July 6, 2019
van der Dussen 9️⃣5️⃣
South Africa post 325/6 in their final #CWC19 game. Can Australia chase this target? #AUSvSA pic.twitter.com/aUICRFVpj7#FafDuPlessis 💯
— ICC (@ICC) July 6, 2019
van der Dussen 9️⃣5️⃣
South Africa post 325/6 in their final #CWC19 game. Can Australia chase this target? #AUSvSA pic.twitter.com/aUICRFVpj7
ನಂತರ ಒಂದಾದ ನಾಯಕ ಪ್ಲೆಸಿಸ್(100) ಹಾಗೂ ಡಾಸ್ಸೆನ್(95) ಮೂರನೆ ವಿಕೆಟ್ ಜೊತೆಯಾಟದಲ್ಲಿ 151 ರನ್ಗಳ ಜೊತೆಯಾಟ ನಡೆಸಿದ್ದರು. 94 ಎಸೆತಗಳಲ್ಲಿ 7 ಬೌಂಡರಿ, 2 ಸಿಕ್ಸರ್ ಸಿಡಿಸಿದ್ದ ಪ್ಲೆಸಿಸ್ ಬೆಹ್ರೆನ್ಡ್ರಾಫ್ ಬೌಲಿಂಗ್ನಲ್ಲಿ ಸ್ಟಾರ್ಕ್ಗೆ ಕ್ಯಾಚ್ ಒಪ್ಪಿಸಿದರು. ಡಾಸ್ಸೆನ್ 97 ಎಸೆತಗಳಲ್ಲಿ ತಲಾ 4 ಬೌಂಡರಿ ಹಾಗೂ ಸಿಕ್ಸರ್ ಸಹಿತ 95 ರನ್ಗಳಿಗೆ ವಿಕೆಟ್ ಒಪ್ಪಿಸಿ ಶತಕದಿಂದ ವಂಚಿತರಾದರು.
ಒಟ್ಟಾರೆ 50 ಓವರ್ಗಳಲ್ಲಿ ಪ್ಲೆಸಿಸ್ ಪಡೆ 6 ವಿಕೆಟ್ ಕಳೆದು 325 ರನ್ ದಾಖಲಿಸಿತು. ಆಸೀಸ್ ಪರ ಸ್ಟಾರ್ಕ್ 2, ಲಿಯಾನ್ 2, ಬೆಹ್ರೆನ್ಡ್ರಾಫ್ ಹಾಗೂ ಪ್ಯಾಟ್ ಕಮ್ಮಿನ್ಸ್ ತಲಾ ಒಂದು ವಿಕೆಟ್ ಪಡೆದರು.