ಲಾಹೋರ್: ಇಂಗ್ಲೆಂಡ್ ವಿರುದ್ಧದ ಕ್ರಿಕೆಟ್ ಸರಣಿಗಾಗಿ ಪಾಕ್ ಕ್ರಿಕೆಟ್ ತಂಡ ಜುಲೈ 24ರಂದು ಪ್ರವಾಸ ಕೈಗೊಳ್ಳಲಿದ್ದು, ಅದಕ್ಕೂ ಮುಂಚಿತವಾಗಿ ತಂಡದ ಆಲ್ರೌಂಡರ್ ಶೋಯೆಬ್ ಮಲಿಕ್ ಭಾರತಕ್ಕೆ ಭೇಟಿ ನೀಡಿ, ಪತ್ನಿ-ಮಗನ ಜತೆ ಸಮಯ ಕಳೆಯಲಿದ್ದಾರೆ.
ಶೋಯೆಬ್ ಮಲಿಕ್, ಸಾನಿಯಾ ಮಿರ್ಜಾ ಹಾಗೂ ಒಂದು ವರ್ಷದ ಮಗ ಇಜಾನ್ ಕೊರೊನಾ ಲಾಕ್ಡೌನ್ನಿಂದಾಗಿ ಭಾರತದಲ್ಲಿ ಸಿಕ್ಕಿಹಾಕಿಕೊಂಡಿದ್ದು, ಬೇರೆ ಯಾವುದೇ ದೇಶಕ್ಕೆ ಪ್ರವಾಸ ಕೈಗೊಳ್ಳಲು ಅವಕಾಶ ನೀಡಿಲ್ಲ. ಆದರೆ ಇದೀಗ ಲಾಕ್ಡೌನ್ ಸಡಿಲಿಕೆ ಆಗಿರುವ ಕಾರಣ ಕ್ರಿಕೆಟರ್ ಭಾರತಕ್ಕೆ ಬರುವುದು ಕನ್ಫರ್ಮ್ ಆಗಿದೆ.
ಕಳೆದ ಐದು ತಿಂಗಳಿಂದಲೂ ಸಾಂಕ್ರಾಮಿಕ ರೋಗದ ಕಾರಣದಿಂದಾಗಿ ಶೋಯೆಬ್ ಪಾಕ್ನಲ್ಲಿ ಉಳಿದುಕೊಂಡಿದ್ದು, ಸಾನಿಯಾ ಹಾಗೂ ಮಗು ಹೈದರಾಬಾದ್ನಲ್ಲಿದ್ದಾರೆ. ಇದೀಗ ತಮ್ಮ ಹೆಂಡತಿ ಹಾಗೂ ಮಗನನ್ನು ನೋಡಲು ಅವಕಾಶ ನೀಡಬೇಕು ಎಂದು ಮಲಿಕ್ ಪಾಕ್ ಕ್ರಿಕೆಟ್ ಮಂಡಳಿ ಬಳಿ ಮನವಿ ಮಾಡಿಕೊಂಡಿದ್ದು, ಅದಕ್ಕೆ ಪಿಸಿಬಿ ಗ್ರೀನ್ ಸಿಗ್ನಲ್ ನೀಡಿದೆ. ತಕ್ಷಣವೇ ಭಾರತಕ್ಕೆ ತೆರಳಿ ಪತ್ನಿ ಹಾಗೂ ಮಗನೊಂದಿಗೆ ಸಮಯ ಕಳೆದು ವಾಪಸ್ ಆಗುವಂತೆ ಪಿಸಿಬಿ ಸೂಚನೆ ನೀಡಿರುವ ಕಾರಣ ಅವರು ಹೈದರಾಬಾದ್ಗೆ ಆಗಮಿಸಲಿದ್ದಾರೆ.
ಇಂಗ್ಲೆಂಡ್ ಜತೆ ಪಾಕ್ ಮೂರು ಟಿ-20 ಹಾಗೂ ಮೂರು ಟೆಸ್ಟ್ ಪಂದ್ಯಗಳಲ್ಲಿ ಭಾಗಿಯಾಗಲಿದ್ದು, ಆಗಸ್ಟ್ನಿಂದ ಸೆಪ್ಟೆಂಬರ್ ತಿಂಗಳವರೆಗೂ ಈ ಸರಣಿ ನಡೆಯಲಿದೆ. 29 ಸದಸ್ಯರನ್ನೊಳಗೊಂಡ ತಂಡ ಜೂನ್ 28ರಂದು ಪ್ರಯಾಣ ಬೆಳೆಸಲಿದ್ದು, 14 ದಿನಗಳ ಕಾಲ ಕ್ವಾರಂಟೈನ್ಗೆ ಒಳಗಾಗಲಿದ್ದಾರೆ. ನಂತರ ಅಭ್ಯಾಸದಲ್ಲಿ ಭಾಗಿಯಾಗಿ ಪಂದ್ಯದಲ್ಲಿ ಪಾಲ್ಗೊಳ್ಳಲಿದ್ದಾರೆ.