ಪರ್ತ್: 16 ವರ್ಷಕ್ಕೆ ಅಂತಾರಾಷ್ಟ್ರೀಯ ತಂಡದಲ್ಲಿ ಸ್ಥಾನಪಡೆದ ಖುಷಿಯಲ್ಲಿದ್ದ ಪಾಕಿಸ್ತಾನದ ನಶೀಮ್ ಶಾ ಆಸ್ಟ್ರೇಲಿಯಾ ಪ್ರವಾಸದಲ್ಲಿರುವಾಗಲೇ ತಮ್ಮ ತಾಯಿಯ ಮುಖವನ್ನು ಕೊನೆಯಬಾರಿಗೆ ನೋಡುವ ಅವಕಾಶವನ್ನು ಕಳೆದುಕೊಂಡಿದ್ದಾರೆ.
ದೇಶಿ ಕ್ರಿಕೆಟ್ನಲ್ಲಿ ಅದ್ವಿತೀಯ ಸಾಧನೆ ತೋರಿದ್ದರಿಂದ ನಶೀಮ್ ಶಾಗೆ ರಾಷ್ಟ್ರೀಯ ತಂಡದಲ್ಲಿ ಅವಕಾಶ ಸಿಕ್ಕಿತ್ತು. ಅದು ಆಸ್ಟ್ರೇಲಿಯಾದಂತ ಬಲಿಷ್ಠ ರಾಷ್ಟ್ರದೊಡನೆ ಆಡುವ ಸಂತೋಷದಲ್ಲಿದ್ದ ಅವರಿಗೆ ತಾಯಿಯ ಮರಣ ಸುದ್ದಿ ಕೇಳಿ ಆಘಾತಗೊಂಡಿದ್ದಾರೆ. ಸೋಮವಾರ ನಶೀಮ್ ಶಾ ತಾಯಿ ನಿಧನರಾಗಿದ್ದಾರೆ. ಈ ವಿಚಾರ ಕೇಳಿಯೂ ಪಾಕಿಸ್ತಾನಕ್ಕೆ ಹಿಂತಿರುಗದೇ ತಂಡದಲ್ಲಿರಲು ನಿರ್ಧರಿಸಿದ್ದಾರೆ ಎಂದು ಪಿಸಿಬಿ ಮೂಲ ತಿಳಿಸಿದೆ ಎಂದು ಪಾಕಿಸ್ತಾನ ಜಿಯೊ ನ್ಯೂಸ್ ವರದಿ ಮಾಡಿದೆ.
-
After discussions with his family, Pakistan pace bowler Naseem Shah is to stay with the squad in Australia. Naseem's mother's funeral is today and he would not have been able to make it in time to Pakistan for the funeral
— Saj Sadiq (@Saj_PakPassion) November 12, 2019 " class="align-text-top noRightClick twitterSection" data="
">After discussions with his family, Pakistan pace bowler Naseem Shah is to stay with the squad in Australia. Naseem's mother's funeral is today and he would not have been able to make it in time to Pakistan for the funeral
— Saj Sadiq (@Saj_PakPassion) November 12, 2019After discussions with his family, Pakistan pace bowler Naseem Shah is to stay with the squad in Australia. Naseem's mother's funeral is today and he would not have been able to make it in time to Pakistan for the funeral
— Saj Sadiq (@Saj_PakPassion) November 12, 2019
ನಶೀಮ್ ಅವರ ಕುಟುಂಬದವರೊಡನೆ ಚರ್ಚಿಸಿದ ನಂತರವಷ್ಟೇ ಪಾಕಿಸ್ತಾನಕ್ಕೆ ಹಿಂತಿರುಗದಿರಲು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ. ಆದರೆ, ಆಸ್ಟ್ರೇಲಿಯಾ ಎ ವಿರುದ್ಧ ನಡೆಯುತ್ತಿರುವ ಅಭ್ಯಾಸ ಪಂದ್ಯದಲ್ಲಿ ಆಡದ ವಿಶ್ರಾಂತಿ ತೆಗೆದಕೊಂಡಿದ್ದಾರೆ. ಕೇವಲ 6 ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ 26 ವಿಕೆಟ್ ಪಡೆದು ರಾಷ್ಟ್ರೀಯ ತಂಡದಲ್ಲಿ ಅವಕಾಶ ಪಡೆದಿದ್ದರು.
ಇತ್ತೀಚೆಗೆ ಪಾಕಿಸ್ತಾನದ ಆಸಿಫ್ ಅಲಿ ಕೂಡ ತಮ್ಮ ಮಗಳ ಸಾವಿನ ಸಂದರ್ಭದಲ್ಲಿ ವಿಶ್ವಕಪ್ ಆಡಿದ್ದರು. 1999ರ ವಿಶ್ವಕಪ್ ವೇಳೆ ಭಾರತ ತಂಡದ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ತಂದೆ ಕೂಡ ನಿಧನರಾಗಿದ್ದರು. ಆದರೆ, ಸಚಿನ್ ಜಿಂಬಾಬ್ವೆ ವಿರುದ್ಧದ ಪಂದ್ಯವನ್ನು ಬಿಟ್ಟು ಅಂತ್ಯಕ್ರಿಯೆಗೆ ಆಗಮಿಸಿದ್ದರು. ನಂತರ ತಮ್ಮ ತಾಯಿಯ ಅಪ್ಪಣೆ ಮೇರೆಗೆ ಹಿಂತಿರುಗಿ ಕೀನ್ಯಾ ವಿರುದ್ಧ ಭರ್ಜರಿ ಶತಕ ಸಿಡಿಸಿ ಭಾರತಕ್ಕೆ ಗೆಲುವು ತಂದುಕೊಟ್ಟಿದ್ದರು.