ಇಸ್ಲಾಮಾಬಾದ್: ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ಆರ್ಟಿಕಲ್ 370 ರದ್ದುಗೊಂಡ ಬಳಿಕ ಪಾಕ್ ಭಾರತದ ಮೇಲೆ ಹರಿಹಾಯುತ್ತಿದ್ದು, ಈಗಾಗಲೇ ಅಲ್ಲಿನ ಸರ್ಕಾರ ಭಾರತದೊಂದಿಗಿನ ದ್ವಿಪಕ್ಷೀಯ ವ್ಯವಹಾರ ಕಡಿತಗೊಳಿಸಿಕೊಂಡಿದೆ.
ಇದೀಗ ಪಾಕ್ನ ಕ್ರಿಕೆಟರ್ಸ್ ಕೂಡ ಇದೇ ವಿಷಯವನ್ನಿಟ್ಟುಕೊಂಡು ಭಾರತದ ಮೇಲೆ ಹರಿಹಾಯುತ್ತಿದ್ದಾರೆ. ಈಗಾಗಲೇ ಮಾಜಿ ಬೌಲರ್ ಶೋಯೆಬ್ ಅಖ್ತರ್,ಆಲ್ರೌಂಡರ್ ಶಾಹಿದ್ ಅಫ್ರಿದಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಕಿಡಿಕಾರಿದ್ದು, ಇದೀಗ ಅಲ್ಲಿನ ತಂಡದ ಕ್ಯಾಪ್ಟನ್ ಸರ್ಫರಾಜ್ ಅಹ್ಮದ್ ಕೂಡ ಅವರಿಗೆ ಸಾಥ್ ನೀಡಿದ್ದಾರೆ.
ಕಾಶ್ಮೀರಿ ಬ್ರದರ್ಸ್, ಈಡಿ ಪಾಕಿಸ್ತಾನವೇ ನಿಮ್ಮೊಂದಿಗೆ ಇದೆ. ಕರಾಚಿಯಲ್ಲಿ ನಿನ್ನೆ ಈದ್ ಪಾರ್ಥನೆಯಲ್ಲಿ ಭಾಗಿಯಾದ ಬಳಿಕ ಮಾತನಾಡಿದ ಅವರು, ನಮ್ಮ ಕಾಶ್ಮೀರದ ಜನರು ಇಂತಹ ಕಠಿಣ ಪರಿಸ್ಥಿತಿಯಿಂದ ಪಾರಾಗಲು ಸರ್ವಶಕ್ತನಾದ ಅಲ್ಲಾಹುವಿನಲ್ಲಿ ನಾನು ಪ್ರಾರ್ಥಿಸುತ್ತೇನೆ ಎಂದಿದ್ದಾರೆ. ಜತೆಗೆ ಸಂಪೂರ್ಣ ಪಾಕ್, ಕಾಶ್ಮೀರ ಜನತೆಯೊಂದಿಗಿದ್ದು, ನಾವೆಲ್ಲರೂ ನೋವು ಹಾಗೂ ದು:ಖವನ್ನು ಸಮಾನವಾಗಿ ಹಂಚಿಕೊಳ್ಳುತ್ತೇವೆ ಎಂದಿದ್ದಾರೆ.
-
Kashmiris must be given their due rights as per #UN resolution. The rights of Freedom like all of us. Why was @UN created & why is it sleeping? The unprovoked aggression & crimes being committed in Kashmir against #Humanity must be noted. The @POTUS must play his role to mediate
— Shahid Afridi (@SAfridiOfficial) August 5, 2019 " class="align-text-top noRightClick twitterSection" data="
">Kashmiris must be given their due rights as per #UN resolution. The rights of Freedom like all of us. Why was @UN created & why is it sleeping? The unprovoked aggression & crimes being committed in Kashmir against #Humanity must be noted. The @POTUS must play his role to mediate
— Shahid Afridi (@SAfridiOfficial) August 5, 2019Kashmiris must be given their due rights as per #UN resolution. The rights of Freedom like all of us. Why was @UN created & why is it sleeping? The unprovoked aggression & crimes being committed in Kashmir against #Humanity must be noted. The @POTUS must play his role to mediate
— Shahid Afridi (@SAfridiOfficial) August 5, 2019
ಈಗಾಗಲೇ ಇದೇ ವಿಷಯಕ್ಕೆ ಸಂಬಂಧಿಸಿದಂತ ಮಾತನಾಡಿದ್ದ ಪಾಕ್ ಮಾಜಿ ಕ್ಯಾಪ್ಟನ್ ಶಾಹೀದ್ ಅಫ್ರಿದಿ, ಕಾಶ್ಮೀರ್ ವಿಚಾರದಲ್ಲಿ ಅಮೆರಿಕ ಅಧ್ಯಕ್ಷರು ಮಧ್ಯೆ ಪ್ರವೇಶ ಮಾಡಬೇಕು ಎಂದು ತಿಳಿಸಿದ್ದಾರೆ. ನಿನ್ನೆ ಟ್ವೀಟ್ ಮಾಡಿದ್ದ ಶೋಯೆಬ್ ಅಖ್ತರ್, ನಿಮ್ಮೆಲ್ಲರಿಗೂ ಈದ್ ಮುಬಾರಕ್... ಕಾಶ್ಮೀರ ಭಾರತದಿಂದ ತುಳಿತಕ್ಕೊಳಗಾಗುತ್ತಿದ್ದು, ನಾವು ನಿಮ್ಮೊಂದಿಗೆ ಇದ್ದೇವೆ ಎಂದು ಹೇಳಿದ್ದರು.