ಲಾಹೋರ್: ನ್ಯೂಜಿಲ್ಯಾಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಪಾಕ್ ತಂಡ ಮಾಡಿದ ಸಣ್ಣಪುಟ್ಟ ತಪ್ಪುಗಳಿಂದ ತಾನೇ ಸಂಕಷ್ಟಕ್ಕೀಡಾಗಿದೆ. ಈ ಆಟವನ್ನು ನೋಡಿ ಕೆಂಡಾಮಂಡಲವಾಗಿರುವ ಪಾಕ್ ಮಾಜಿ ವೇಗಿ ಅಖ್ತರ್, ತಮ್ಮ ದೇಶದ ಆಟಗಾರರು ಶಾಲಾ ಹಂತದ ಕ್ರಿಕೆಟ್ ಆಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
3ನೇ ದಿನ ನಾಯಕ ಕೇನ್ ವಿಲಿಯಮ್ಸನ್ ಮತ್ತು ಹೆನ್ರಿ ನಿಕೋಲ್ಸ್ 369 ರನ್ ಸೇರಿಸುವ ಮೂಲಕ ಟೆಸ್ಟ್ ಕ್ರಿಕೆಟ್ನಲ್ಲಿ ಕಿವೀಸ್ ಪರ 3ನೇ ಅತಿದೊಡ್ಡ ಜೊತೆಯಾಟ ದಾಖಲಿಸಿದರು. ವಿಲಿಯಮ್ಸನ್ 238 ರನ್ ಗಳಿಸಿದರೆ, ನಿಕೋಲ್ಸ್ 157 ರನ್ ಚಚ್ಚಿ ಪಾಕ್ ತಂಡದ ಬೌಲರ್ಗಳ ವಿರುದ್ಧ ಸಂಪೂರ್ಣ ಪ್ರಾಬಲ್ಯ ಸಾಧಿಸಿದ್ದರು.
-
Clubs teams would play better than this. pic.twitter.com/r9m4ekqbeq
— Shoaib Akhtar (@shoaib100mph) January 5, 2021 " class="align-text-top noRightClick twitterSection" data="
">Clubs teams would play better than this. pic.twitter.com/r9m4ekqbeq
— Shoaib Akhtar (@shoaib100mph) January 5, 2021Clubs teams would play better than this. pic.twitter.com/r9m4ekqbeq
— Shoaib Akhtar (@shoaib100mph) January 5, 2021
"ಪಾಕಿಸ್ತಾನ ಕ್ರಿಕೆಟ್ ಬೋರ್ಡ್ನ ನೀತಿಗಳು 'ಏನು ಭಿತ್ತಿವಿಯೋ ಅದನ್ನೇ ಇಂದು ಪ್ರತಿಫಲವಾಗಿ ನೋಡುತ್ತಿವೆ'. ಅವರು ರಾಷ್ಟ್ರೀಯ ತಂಡಕ್ಕೆ ಸರಾಸರಿ ಆಟಗಾರರನ್ನು ಕರೆತಂದು ಆಡಿಸುತ್ತಿದ್ದಾರೆ. ಅವರು ಸರಾಸರಿ ತಂಡವನ್ನು ಕಟ್ಟುವುದನ್ನು ಮುಂದುವರಿಸುತ್ತಿರುವ ಕಾರಣದಿಂದ ಈ ರೀತಿಯ ಸರಾಸರಿ ಫಲಿತಾಂಶಗಳು ಬರುತ್ತಲೇ ಇವೆ" ಎಂದು ತಮ್ಮ ಟ್ವಿಟರ್ನಲ್ಲಿ ಶೇರ್ ಮಾಡಿರುವ ವಿಡಿಯೋದಲ್ಲಿ ಆಕ್ರೋಶ ಹೊರಹಾಕಿದ್ದಾರೆ.
ಪಾಕಿಸ್ತಾನ ಯಾವಾಗ ಟೆಸ್ಟ್ ಕ್ರಿಕೆಟ್ ಆಡಿದರೂ ಅವರ ಸಾಮರ್ಥ್ಯ ಈ ರೀತಿ ಬಹಿರಂಗವಾಗುತ್ತದೆ. ಅವರು ಶಾಲಾ ಮಟ್ಟದ ಕ್ರಿಕೆಟ್ನಂತೆ ಆಡುತ್ತಿದ್ದಾರೆ. ಈ ಮ್ಯಾನೇಜ್ಮೆಂಟ್ ಕೂಡ ಅವರನ್ನು ಶಾಲಾ ಕ್ರಿಕೆಟರ್ಗಳಂತೆ ಮಾಡುತ್ತಿದೆ. ಪಿಸಿಬಿ ಈಗ ಮ್ಯಾನೇಜ್ಮೆಂಟ್ ಬದಲಾಯಿಸಲು ಯೋಚಿಸುತ್ತಿದೆ. ಆದರೆ ನೀವು ಯಾವಾಗ ಬದಲಾಗುತ್ತೀರಿ? ಎಂದು ಪಿಸಿಬಿ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ಪಾಕಿಸ್ತಾನ ಈಗಾಗಲೇ 362 ರನ್ಗಳ ಮೊದಲ ಇನ್ನಿಂಗ್ಸ್ ಹಿನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದು, ಈಗಾಗಲೇ ಕೇವಲ 8 ರನ್ಗೆ ಶಾನ್ ಮಸೂದ್ ವಿಕೆಟ್ ಕಳೆದುಕೊಂಡಿದೆ. ಮಸೂದ್ 25 ಎಸೆತಗಳನ್ನೆದುರಿಸಿ ಶೂನ್ಯಕ್ಕೆ ಕೈಲ್ ಜೆಮೀಸನ್ಗೆ ವಿಕೆಟ್ ಒಪ್ಪಿಸಿದ್ದಾರೆ.