ಹೈದರಾಬಾದ್: ಪಾಕಿಸ್ತಾನ ಕ್ರಿಕೆಟ್ ತಂಡದ ಯುವ ಆಟಗಾರ ಇಮಾಮ್ ಉಲ್ ಹಕ್ ಹಲವಾರು ಯುವತಿಯರೊಂದಿಗೆ ಸಂಬಂಧ ಹೊಂದಿದ್ದಾರೆ ಎನ್ನುವ ಗಂಭೀರ ಆರೋಪ ಕೇಳಿಬಂದಿದೆ.
ಇಮಾಮ್ ಉಲ್ ಹಕ್ಗೆ ಸೇರಿದ್ದು ಎನ್ನಲಾದ ವಾಟ್ಸ್ಆ್ಯಪ್ ಸಂಭಾಷಣೆಯನ್ನು ವ್ಯಕ್ತಿಯೋರ್ವ ಟ್ವಿಟರ್ನಲ್ಲಿ ಪೋಸ್ಟ್ ಮಾಡಿದ್ದು, ಇಮಾಮ್ ಉಲ್ ಹಕ್ ಏಳರಿಂದ ಎಂಟು ಯುವತಿಯರೊಂದಿಗೆ ಸಂಬಂಧ ಹೊಂದಿದ್ದಾರೆ ಎಂದು ಆರೋಪ ಮಾಡಲಾಗಿದೆ.
ಸದ್ಯ ಸೋರಿಕೆಯಾಗಿರುವ ಸಂಭಾಷಣೆಯ ಸ್ಕ್ರೀನ್ಶಾಟ್ ಡಿಲೀಟ್ ಮಾಡಲಾಗಿದ್ದರೂ ಅದಾಗಲೇ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಈ ವಿಚಾರದ ಕುರಿತಂತೆ ಜಾಲತಾಣಿಗರಲ್ಲಿ ಕೆಲವರು ಕ್ರಿಕೆಟಿಗನ ನಡತೆಯನ್ನು ಪ್ರಶ್ನಿಸಿದ್ದರೆ ಇನ್ನೂ ಕೆಲವರು ಯುವತಿಯರನ್ನು ಟೀಕೆ ಮಾಡಿದ್ದಾರೆ.
ಇತ್ತೀಚೆಗೆ ಮುಕ್ತಾಯವಾದ ವಿಶ್ವಕಪ್ ಟೂರ್ನಿಯಲ್ಲಿ ಪಾಕ್ ಪರ ಆಡಿದ್ದ ಇಮಾಮ್ ಉಲ್ ಹಕ್ ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ ಶತಕ ಸಿಡಿಸಿದ್ದರು.