ರಾವಲ್ಪಿಂಡಿ: ತವರಿನಲ್ಲಿ ನಡೆಯುತ್ತಿರುವ ಜಿಂಬಾಬ್ವೆ ವಿರುದ್ಧದ ಏಕದಿನ ಸರಣಿಯ 2ನೇ ಪಂದ್ಯದಲ್ಲಿ ಪಾಕಿಸ್ತಾನ 6 ವಿಕೆಟ್ಗಳ ಜಯ ಸಾಧಿಸುವ ಮೂಲಕ 3 ಪಂದ್ಯಗಳ ಏಕದಿನ ಸರಣಿಯನ್ನು ಇನ್ನು 1 ಪಂದ್ಯವಿರುವಂತೆ ವಶಪಡಿಸಿಕೊಂಡಿದೆ.
ಮೊದಲು ಬ್ಯಾಟಿಂಗ್ ಮಾಡಿದ ಜಿಂಬಾಬ್ವೆ ಇಫ್ತಿಖರ್ ಅಹ್ಮದ್ ಅವರ ಬೌಲಿಂಗ್ ದಾಳಿಗೆ ಸಿಲುಕಿ 206 ರನ್ಗಳಿಗೆ ಆಲೌಟ್ ಆಗಿತ್ತು. ಸೀನ್ ವಿಲಿಯಮ್ಸ್ ಮಾತ್ರ 70 ಎಸೆತಗಳಲ್ಲಿ 75 ರನ್ಗಳಿಸಿ ತಂಡವ ಮೊತ್ತವನ್ನು 200ರ ಗಡಿ ದಾಟಿಸಿದರು.
207 ರನ್ಗಳ ಸಾಧಾರಣ ಮೊತ್ತ ಬೆನ್ನತ್ತಿದ ಪಾಕ್ ತಂಡ ಕೇವಲ 35.2 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು ಗುರಿ ತಲುಪಿತು.
-
Pakistan win by six wickets 🎉 🇵🇰
— ICC (@ICC) November 1, 2020 " class="align-text-top noRightClick twitterSection" data="
A dominant display from the hosts led by Iftikhar's five-for and Babar's unbeaten 7️⃣7️⃣ 🔥 #PAKvZIM pic.twitter.com/qAOwSQPEBr
">Pakistan win by six wickets 🎉 🇵🇰
— ICC (@ICC) November 1, 2020
A dominant display from the hosts led by Iftikhar's five-for and Babar's unbeaten 7️⃣7️⃣ 🔥 #PAKvZIM pic.twitter.com/qAOwSQPEBrPakistan win by six wickets 🎉 🇵🇰
— ICC (@ICC) November 1, 2020
A dominant display from the hosts led by Iftikhar's five-for and Babar's unbeaten 7️⃣7️⃣ 🔥 #PAKvZIM pic.twitter.com/qAOwSQPEBr
ಇಮಾಮ್ ಉಲ್ ಹಕ್ 61 ಎಸೆತಗಳಲ್ಲಿ 49, ಬಾಬರ್ ಅಜಮ್ ಅಜೇಯ 77 ರನ್ಗಳಿಸಿ ಗೆಲುವಿನ ರೂವಾರಿಯಾದರು. ಅವರ ಇನ್ನಿಂಗ್ಸ್ನಲ್ಲಿ 7 ಬೌಂಡರಿ ಹಾಗೂ 2 ಸಿಕ್ಸರ್ ಸೇರಿತ್ತು. ಹೈದರ್ ಅಲಿ 29 ರನ್ ಹಾಗೂ ಇಫ್ತಿಖರ್ ಅಹ್ಮದ್ 16ರನ್ಗಳಿಸಿದರು.
3ನೇ ಪಂದ್ಯ ನವೆಂಬರ್ 3 ರಂದು ಇದೇ ಮೈದಾನದಲ್ಲಿ ನಡೆಯಲಿದೆ. ನಂತರ ನವೆಂಬರ್ 7,8 ಮತ್ತುನ 10 ರಂದು ನಡೆಯಲಿವೆ.