ಮುಂಬೈ: ಕೊರೊನಾ ವೈರಸ್ ಸಾಂಕ್ರಾಮಿಕದ ಸುದೀರ್ಘ ವಿರಾಮದ ಬಳಿಕ ವೇಗದ ಬೌಲರ್ಗಳು ಮೈದಾನಕ್ಕೆ ಮರಳುವಾಗ ಹೆಚ್ಚು ಜಾಗೃತರಾಗಿರಾಗಿಬೇಕು ಎಂದು ಭಾರತ ತಂಡದ ಮಾಜಿ ಆಲ್ರೌಂಡರ್ ಇರ್ಫಾನ್ ಪಠಾಣ್ ಹೇಳಿದ್ದಾರೆ.
ಭಾರತದ ಮಾಜಿ ಬೌಲರ್ ಇರ್ಫಾನ್ ಪಠಾಣ್ ಪ್ರಕಾರ, ವೇಗಿಗಳು ತಮ್ಮ ಲಯಕ್ಕೆ ಮರಳಲು ಬ್ಯಾಟ್ಸ್ಮನ್ ಮತ್ತು ಸ್ಪಿನ್ನರ್ಗಳಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳಲಿದ್ದಾರೆ.
ವೇಗದ ಬೌಲರ್‌ಗಳ ಬಗ್ಗೆ ನನಗೆ ನಿಜಕ್ಕೂ ಆತಂಕವಿದೆ. ಅವರು ತಮ್ಮ ಹಿಂದಿನ ಲಯಕ್ಕೆ ಮರಳಲು 4ರಿಂದ 6 ವಾರಗಳ ಸಮಯ ಬೇಕಾಗಿದೆ. ಅಲ್ಲದೆ ಈ ಸಮಯದಲ್ಲಿ 140 ರಿಂದ 150 ಕಿ.ಮೀ.ಯಲ್ಲಿ ಬೌಲಿಂಗ್ ಮಾಡುವುದು ಕಷ್ಟದ ಕೆಲಸ. ಒಂದು ಎಸೆತಕ್ಕೆ 25 ಅಡಿ ದೂರದಿಂದ ಓಡಿಬಂದು ಬೌಲಿಂಗ್ ಕೆಲವು ಓವರ್ಗಳು ಬೌಲಿಂಗ್ ಮಾಡುವುದು ಕಷ್ಟ ಅನ್ನೋದು ಅವರ ಅಭಿಪ್ರಾಯ.
ವಿಂಡೀಸ್ ವಿರುದ್ಧ ನಡೆಯುತ್ತಿರುವ ಟೆಸ್ಟ್ ಗಮನಿಸಿದರೆ ಇಂಗ್ಲೆಂಡ್ ತಂಡ ಇರ್ಫಾನ್ ಹೇಳಿದ ವಿಧಾನವನ್ನು ಅನುಸರಿಸುತ್ತಿದೆ ಎಂದು ಕಾಣುತ್ತಿದೆ. ಏಕೆಂದರೆ, ಮೊದಲ ಟೆಸ್ಟ್ನಲ್ಲಿ ಅನುಭವಿ ಆ್ಯಂಡರ್ಸನ್ ಜೊತೆಗೆ ಹೋಗಿದ್ದರೆ, ಎರಡನೇ ಟೆಸ್ಟ್ನಲ್ಲಿ ಅವರ ಬದಲು ಮತ್ತೊಬ್ಬ ಅನುಭವಿ ವೇಗಿ ಸ್ಟುವರ್ಟ್ ಬ್ರಾಡ್ರನ್ನು ಆಡಿಸುತ್ತಿದೆ.