ETV Bharat / sports

ಏಕದಿನ ಕ್ರಿಕೆಟ್​ನಲ್ಲಿ 7000 ರನ್​ : ಮಿಥಾಲಿ ರಾಜ್​ ಮುಡಿಗೆ ಮತ್ತೊಂದು ದಾಖಲೆ

ಪ್ರಸ್ತುತ ಭಾರತ ಮಹಿಳಾ ತಂಡ ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಸರಣಿ ಆಡುತ್ತಿದೆ. ಈ ಸರಣಿಯ 4ನೇ ಪಂದ್ಯದಲ್ಲಿ ಮಿಥಾಲಿ ರಾಜ್ ದಾಖಲೆ ಬರೆದಿದ್ದಾರೆ. ಈ ಪಂದ್ಯದಲ್ಲಿ ಮಿಥಾಲಿ ರಾಜ್ 45 ರನ್​ಗಳಿಸಿ ಔಟಾದರು.

Mithali Raj
ಮಿಥಾಲಿ ರಾಜ್
author img

By

Published : Mar 14, 2021, 11:53 AM IST

ಹೈದರಾಬಾದ್​ : ಭಾರತ ಮಹಿಳಾ ಏಕದಿನ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್ ಮತ್ತೊಂದು ದಾಖಲೆ ಬರೆದಿದ್ದಾರೆ. ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್​ನಲ್ಲಿ 7 ಸಾವಿರ ರನ್ ಗಳಿಸಿದ ಮೊದಲ ಭಾರತೀಯ ಮಹಿಳಾ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಪ್ರಸ್ತುತ ಭಾರತ ಮಹಿಳಾ ತಂಡ ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಸರಣಿ ಆಡುತ್ತಿದೆ. ಸರಣಿಯ 4ನೇ ಪಂದ್ಯದಲ್ಲಿ ಮಿಥಾಲಿ ರಾಜ್ ಈ ದಾಖಲೆ ಬರೆದಿದ್ದಾರೆ. ಈ ಪಂದ್ಯದಲ್ಲಿ ಮಿಥಾಲಿ ರಾಜ್ 45 ರನ್​ಗಳಿಸಿ ಔಟಾದರು.

38 ವರ್ಷದ ಮಹಿಳಾ ಕ್ರಿಕೆಟರ್​ ಮಿಥಾಲಿ ರಾಜ್ 1999 ರಲ್ಲಿ ಐರ್ಲೆಂಡ್​ ವಿರುದ್ಧ ಏಕದಿನ ಕ್ರಿಕೆಟ್​ಗೆ ಪಾದಾರ್ಪಣೆ ಮಾಡಿದರು. ಭಾರತ ಪರ 213 ಏಕದಿನ ಪಂದ್ಯಗಳನ್ನಾಡಿರುವ ಮಿಥಾಲಿ, 50 ಸರಾಸರಿಯಲ್ಲಿ 7019 ರನ್​ಗಳಿಸಿದ್ದಾರೆ. 7,000 ರನ್​ ಗಡಿ ದಾಟಿರುವ ಮಿಥಾಲಿ ರಾಜ್​, ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್​ನಲ್ಲಿ ಅತಿ ಹೆಚ್ಚು ರನ್​ಗಳಿಸಿದ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಇದಲ್ಲದೆ ಮಿಥಾಲಿ ರಾಜ್​ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 10 ಸಾವಿರ ರನ್ ಗಳಿಸಿದ ಮೊದಲ ಭಾರತೀಯ ಮಹಿಳಾ ಆಟಗಾರ್ತಿ ಎಂಬ ದಾಖಲೆ ಬರೆದಿದ್ದಾರೆ. ಇಂಗ್ಲೆಂಡ್‌ನ ಷಾರ್ಲೆಟ್ ಎಡ್ವರ್ಡ್ಸ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 10,000 ರನ್ ಮೈಲಿಗಲ್ಲು ತಲುಪಿದ ಮೊದಲ ಮಹಿಳಾ ಆಟಗಾರ್ತಿ. ಮಹಿಳಾ ಅಂತಾರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಇಂಗ್ಲಿಷ್ ಮಹಿಳೆಯನ್ನು ಮೀರಿಸಲು ಮಿಥಾಲಿಗೆ ಇನ್ನೂ 299 ರನ್​​ಗಳ ಅವಶ್ಯಕತೆ ಇದೆ.

ಓದಿ : ಮಿಥಾಲಿ ರಾಜ್​ ಮತ್ತೊಂದು ದಾಖಲೆ: ಭಾರತ ಪರ 10,000 ರನ್​​ ಗಳಿಸಿದ ಮೊದಲ ಆಟಗಾರ್ತಿ

ಇದಲ್ಲದೇ, ಭಾರತ ಪರ ಅವರು 89 ಟಿ - 20 ಪಂದ್ಯಗಳಲ್ಲಿ 37.50 ರ ಸರಾಸರಿಯಲ್ಲಿ 2364 ರನ್​ಗಳಿಸಿದ್ದಾರೆ. ಭಾರತ ಪರ 10 ಟೆಸ್ಟ್ ಪಂದ್ಯಗಳನ್ನಾಡಿರುವ ಮಿಥಾಲಿ 634 ರನ್​ಗಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.