ಕ್ವಿನ್ಸ್ಟೌನ್ (ನ್ಯೂಜಿಲ್ಯಾಂಡ್): ಗಾಯದ ಕಾರಣದಿಂದಾಗಿ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಮ್ ನ್ಯೂಜಿಲ್ಯಾಂಡ್ ವಿರುದ್ಧದ ಟಿ-20 ಸರಣಿಯಿಂದ ಹೊರಬಿದ್ದಿದ್ದಾರೆ ಎಂದು ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಸ್ಪಷ್ಟಪಡಿಸಿದೆ.
ಪಾಕಿಸ್ತಾನ ಮತ್ತು ನ್ಯೂಜಿಲ್ಯಾಂಡ್ ನಡುವಿನ 3 ಪಂದ್ಯಗಳ ಟಿ20 ಸರಣಿ ಡಿಸೆಂಬರ್ 18ರಿಂದ ಆರಂಭವಾಗಲಿದೆ. ಸರಣಿ ಆರಂಭಕ್ಕೆ ಕೆಲ ದಿನಗಳು ಬಾಕಿಯಿರುವಾಗಲೇ, ಅಭ್ಯಾಸ ನಡೆಸುವ ವೇಳೆ ಬಾಬರ್ ಅಜಮ್ ಬಲಗೈ ಹೆಬ್ಬೆರಳಿಗೆ ಬಲವಾದ ಪೆಟ್ಟು ಬಿದ್ದಿದೆ. ಎಕ್ಸ್-ರೇ ಪರೀಕ್ಷೆಯಲ್ಲಿ ಹೆಬ್ಬೆರಳಿಗೆ ತೀವ್ರವಾಗಿ ಗಾಯವಾಗಿರುವುದು ದೃಢಪಟ್ಟಿದೆ. ಹೀಗಾಗಿ ಟಿ20 ಸರಣಿಯಿಂದ ಬಾಬರ್ ಅಜಮ್ ಹೊರಬಿದ್ದಿದ್ದಾರೆ.
-
Babar Azam ruled out of New Zealand T20Ishttps://t.co/Ouc23mwvMq pic.twitter.com/9ZPKGoRII5
— PCB Media (@TheRealPCBMedia) December 13, 2020 " class="align-text-top noRightClick twitterSection" data="
">Babar Azam ruled out of New Zealand T20Ishttps://t.co/Ouc23mwvMq pic.twitter.com/9ZPKGoRII5
— PCB Media (@TheRealPCBMedia) December 13, 2020Babar Azam ruled out of New Zealand T20Ishttps://t.co/Ouc23mwvMq pic.twitter.com/9ZPKGoRII5
— PCB Media (@TheRealPCBMedia) December 13, 2020
12 ದಿನಗಳ ಕಾಲ ವಿಶ್ರಾಂತಿಗೆ ವೈದ್ಯರು ಸೂಚಿಸಿದ್ದು, ಗುಣಮುಖವಾದರೆ ಡಿಸೆಂಬರ್ 26 ರಿಂದ ಆರಂಭವಾಗಲಿರುವ ಟೆಸ್ಟ್ ಸರಣಿಗೆ ಅಜಮ್ ತಂಡ ಸೇರಿಕೊಳ್ಳಲಿದ್ದಾರೆ.
ನ್ಯೂಜಿಲ್ಯಾಂಡ್ಗೆ ಆಗಮಿಸಿದ್ದ ಹಲವು ಪಾಕ್ ಆಟಗಾರರಲ್ಲಿ ಕೋವಿಡ್ ಸೋಂಕು ಪತ್ತೆಯಾಗಿತ್ತು. ಕೆಲವು ಕೋವಿಡ್ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಆಟಗಾರರಿಗೆ ಎಚ್ಚರಿಕೆ ನೀಡಲಾಗಿತ್ತು. ಕ್ವಾರಂಟೈನ್ ಅವಧಿಯನ್ನು ಯಶಸ್ವಿಯಾಗಿ ಪೂರೈಸಿದ ಪಾಕ್ ಆಟಗಾರರು ಅಭ್ಯಾಸ ನಡೆಸುತ್ತಿದ್ದಾರೆ.